ಮತದಾರರಿಗೆ ಹಂಚಲು ತಂದಿದ್ದ ಟೀವಿ, ಮಿಕ್ಸಿ, ಕುಕ್ಕರ್‌ ಪೊಲೀಸ್‌ ವಶ

By Kannadaprabha NewsFirst Published Apr 24, 2021, 7:03 AM IST
Highlights

ಮತದಾರರಿಗೆ ಹಂಚಲು ತಂದಿದ್ದ ಟೀವಿ, ಮಿಕ್ಸಿ ಕುಕ್ಕರ್ ಸೇರಿದಂತೆ ಅನೇಕ ವಸ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಂಚಲು ತಂದ ವಸ್ತುಗಳನ್ನು ಸೀಜ್ ಮಾಡಲಾಗಿದೆ. 

ಚನ್ನಪಟ್ಟಣ (ಏ.24): ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಕುಕ್ಕರ್‌, ಮಿಕ್ಸಿ, ಟೀವಿ ಮುಂತಾದ ಗೃಹೋಪಯೋಗಿ ವಸ್ತುಗಳನ್ನು ಚುನಾವಣಾಧಿಕಾರಿಗಳು ಮತ್ತು ಪೊಲೀಸರ ತಂಡ ಶುಕ್ರವಾರ ನಗರದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ನಗರದ ತಿಟ್ಟಮಾರಹಳ್ಳಿ ರಸ್ತೆಯಲ್ಲಿರುವ ಮಹೇಶ್ವರ ಕನ್ವೆನ್ಷನ್‌ ಹಾಲ್‌ ಮೇಲೆ ದಾಳಿ ಮಾಡಿದ ಅಧಿಕಾರಿಗಳ ತಂಡ, ಅನುಮಾನಾಸ್ಪದವಾಗಿ ದಾಸ್ತಾನು ಮಾಡಲಾಗಿದ್ದ ಗೃಹೋಪಯೋಗಿ ವಸ್ತು ವಶಕ್ಕೆ ಪಡೆದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಗರದ ಹೊರವಲಯದ ಒಂಟಿ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು 42 ಮಿಕ್ಸಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಮನೆ 11ನೇ ವಾರ್ಡ್‌ನ ಜೆಡಿಎಸ್‌ ಅಭ್ಯರ್ಥಿ ನಾಗೇಶ್‌ ಎಂಬುವರಿಗೆ ಈ ಮನೆ ಸೇರಲಾಗಿದ್ದು ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ಕಾಂಗ್ರೆಸ್‌ ಮುಖಂಡಗೆ ಸೋಲಿನ ಭೀತಿ : ಜೆಡಿಎಸ್‌ ನಾಯಕರಿಂದ ತಿರುಗೇಟು ...

ಸ್ಥಳಕ್ಕೆ ಆಗಮಿಸಿದ ಕನ್ವೆಂಷನ್‌ ಹಾಲ್‌ ಮಾಲೀಕ ಮಹೇಶ್ವರ್‌, ನಾನು ಎಲೆಕ್ಟ್ರಾನಿಕ್ಸ್‌ ಅಂಗಡಿ ಮಾಲೀಕನಾಗಿದ್ದು ಜಾಗ ಇಲ್ಲದ ಕಾರಣ ಕಲ್ಯಾಣ ಮಂಟಪದಲ್ಲಿ ಇರಿಸಿದ್ದೇನೆ ಎಂದು ವಾದ ಮಾಡಿದರು. ಈ ಸಂಬಂಧ ಬಿಲ್‌ ತೋರಿಸಲು ವಿಫಲವಾದಾಗ ಪೊಲೀಸರು ಅವುಗಳನ್ನು ವಶಕ್ಕೆ ಪಡೆದರು.

click me!