ಇದು ಕುಮಟಳ್ಳಿ ಚುನಾವಣೆಯಲ್ಲ, ಸವದಿ ಚುನಾವಣೆ: ಸಿಎಂ ಯಡಿಯೂರಪ್ಪ

By Web DeskFirst Published Nov 23, 2019, 2:59 PM IST
Highlights

ನಾನು ಪ್ರತಿ ಪಕ್ಷ ಸಿದ್ದರಾಮಯ್ಯ ಬಗ್ಗೆ ಮಾತನಾಡುವುದಿಲ್ಲ| ಅವರ ಬಗ್ಗೆ ಕೆ. ಎಸ್. ಈಶ್ವರಪ್ಪ ಮಾತನಾಡುತ್ತಾರೆ ಎಂದ ಸಿಎಂ| ಲಕ್ಷ್ಮಣ ಸವದಿ ಮೂರೂವರೆ ವರ್ಷ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿದ್ದಾರೆ| ಚುನಾವಣೆ ಬಳಿಕ ಇಬ್ಬರ ಸಚಿವರು ಲಕ್ಷ್ಮಣ ಸವದಿ ಹಾಗೂ ಮಹೇಶ  ಕುಮಟಳ್ಳಿ  ಅವರ ಜೊತೆ ನಿಮ್ಮೂರಿಗೆ ಭೇಟಿ ನೀಡುತ್ತೇನೆ ಎಂದ ಯಡಿಯೂರಪ್ಪ|

ಅಥಣಿ(ನ.23): ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ರಾಜಕೀಯ ಮುತ್ಸದ್ದಿಯಾಗಿದ್ದಾರೆ. ಶಿವಾಜಿನಗರ ಸೇರಿ 15 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಬಿಜೆಪಿ ಟೀಕಿಸುವವರಿಗೆ ಡಿ. 5 ರಂದು ಉತ್ತರ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. 

ಶನಿವಾರ ನಗರದಲ್ಲಿ ಆಯೋಜನೆಯಾಗಿದ್ದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಯಡಿಯೂರಪ್ಪ ಅವರು, ನಾನು ಪ್ರತಿ ಪಕ್ಷ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಬಗ್ಗೆ ಕೆ. ಎಸ್. ಈಶ್ವರಪ್ಪ ಮಾತನಾಡುತ್ತಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದು ಮಹೇಶ  ಕುಮಟಳ್ಳಿ  ಅವರ ಚುನಾವಣೆಯಲ್ಲ. ಇದು ಲಕ್ಷ್ಮಣ ಸವದಿ ಅವರ ಚುನಾವಣೆಯಾಗಿದೆ. ಲಕ್ಷ್ಮಣ ಸವದಿ ಮೂರೂವರೆ ವರ್ಷ ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಯಲಿದ್ದಾರೆ ಎಂದು ಇದೇ ವೇಳೆ ಭರವಸೆ ನೀಡಿದರು. 

ಚುನಾವಣೆ ಬಳಿಕ ಪ್ರವಾಹ ಪೀಡಿತ ಪ್ರದೇಶಕ್ಕೆ ಬರುತ್ತೇನೆ. ಚುನಾವಣೆ ಬಹಿಷ್ಕಾರ ಮಾಡಬೇಡಿ ಎಂದು ಅಥಣಿ ಮತಕ್ಷೇತ್ರದ ಹುಲಗಬಾಳ ಮತ್ತಿತರ ಗ್ರಾಮಸ್ಥರಿಗೆ ಸಿಎಂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡರು.ಅಲ್ಲದೆ ಚುನಾವಣೆ ಬಳಿಕ ಇಬ್ಬರ ಸಚಿವರು ಲಕ್ಷ್ಮಣ ಸವದಿ ಹಾಗೂ ಮಹೇಶ  ಕುಮಟಳ್ಳಿ  ಅವರ ಜೊತೆ ನಿಮ್ಮೂರಿಗೆ ಭೇಟಿ ನೀಡುತ್ತೇನೆ ಎನ್ನುವ ಮೂಲಕ  ಕುಮಠಳ್ಳಿಗೆ ಸಚಿವರಾಗ್ತಾರೆ ಎಂಬುದನ್ನು ಇದೇ ವೇಳೆ ಸ್ಪಷ್ಟಪಡಿಸಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ

click me!