ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಿದ್ದರು. ಆದರೆ, ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ. ಎರಡನೇ ಅವಧಿಯಲ್ಲಿ 5ನೇ ಬಾರಿ ಭೇಟಿ ಕೊಟ್ಟಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಕುರ್ಚಿ ಗಟ್ಟಿಯಾಗುತ್ತಿದ್ದೆ. ಕೆಲವರು ಕುರ್ಚಿ ಅಲ್ಲಾಡಿಸುತ್ತಿದ್ದಾರೆ, ಅವರು ಅಲ್ಲಾಡಿಸುತ್ತಿರಲಿ, ನನ್ನನ್ನು ಏನೂ ಮಾಡಕ್ಕಾಗಲ್ಲ, ಅಲ್ಲಾಡಿಸಿದಷ್ಟು ಕುರ್ಚಿ ಗಟ್ಟಿಯಾಗುತ್ತೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೊಳ್ಳೇಗಾಲ(ಆ.11): ನೀವು ನನ್ನ ಕುರ್ಚಿ ಅಲ್ಲಾಡಿಸ್ತಾನೇ ಇರಿ, ಆದರೆ ನನ್ನ ಕುರ್ಚಿ ಗಟ್ಟಿ ಆಗ್ತನೇ ಇರುತ್ತದೆ. ಚಾಮರಾಜನಗರ ಜಿಲ್ಲೆಗೆ ಬಂದಷ್ಟು ನನ್ನ ಕುರ್ಚಿ ಗಟ್ಟಿಯಾಗುತ್ತಲೆ ಇರುತ್ತೆ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೇವಡಿ ಮಾಡಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿಯಲ್ಲಿ ಜಲಪಾತೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎನ್ನುತ್ತಿದ್ದರು. ಆದರೆ, ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದೆ. ಎರಡನೇ ಅವಧಿಯಲ್ಲಿ 5ನೇ ಬಾರಿ ಭೇಟಿ ಕೊಟ್ಟಿದ್ದೇನೆ. ಚಾಮರಾಜನಗರಕ್ಕೆ ಬಂದಾಗಲೆಲ್ಲಾ ನನ್ನ ಕುರ್ಚಿ ಗಟ್ಟಿಯಾಗುತ್ತಿದ್ದೆ. ಕೆಲವರು ಕುರ್ಚಿ ಅಲ್ಲಾಡಿಸುತ್ತಿದ್ದಾರೆ, ಅವರು ಅಲ್ಲಾಡಿಸುತ್ತಿರಲಿ, ನನ್ನನ್ನು ಏನೂ ಮಾಡಕ್ಕಾಗಲ್ಲ, ಅಲ್ಲಾಡಿಸಿದಷ್ಟು ಕುರ್ಚಿ ಗಟ್ಟಿಯಾಗುತ್ತೆ ಎಂದರು.
ಹನೂರಿನ ಹೊಗೇನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ಹೇರಿದ್ದ ನಿಷೇಧ ವಾಪಸ್
ಪ್ರವಾಸೋದ್ಯಮಕ್ಕೆ ಸುಂದರ ಜಿಲ್ಲೆ:
ಪರಿಸರ ಪ್ರವಾಸೋದ್ಯಮ ಆಹ್ಲಾದಿಸಲು ಚಾಮರಾಜನಗರ ಜಿಲ್ಲೆ ಉತ್ತಮ ಮತ್ತು ಸುಂದರ ಜಿಲ್ಲೆಯಾಗಿದೆ. ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ. ಹಿಂದಿನ ಸರ್ಕಾರಗಳು ಪ್ರವಾಸೋದ್ಯಮಕ್ಕೆ ಹಚ್ಚಾಗಿ ಅಭಿವೃದ್ಧಿ ನೀಡಿರಲಿಲ್ಲ, ಆದರೆ ನಾನು ಹಾಗೆ ಮಾಡಲ್ಲ, ಈಗಾಗಲೇ ಪ್ರವಾಸೋದ್ಯಮ ಸಚಿವರ ಜೊತೆಯೂ ಚರ್ಚಿಸಿ ಚರ್ಚಿಸಿದ್ದು ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವೆ. ಜಗತ್ತಿನ ಅನೇಕ ರಾಷ್ಟ್ರಗಳು ಪ್ರವಾಸೋದ್ಯಮದ ಲಾಭದಿಂದಲೇ ಬದುಕುತ್ತಿವೆ, ಹಾಗಾಗಿ ಚಾಮರಾಜನಗರ ಜಿಲ್ಲೆಯ ಪ್ರವಾಸೋದ್ಯಮಕ್ಕೂ ಹೆಚ್ಚು ಒತ್ತು ನೀಡುವೆ ಎಂದರು.