ಅಂದು ಬದಲಾವಣೆ ಮಾಡಿದ ಹೆಸರಿಗೀಗ ಐವತ್ತನೇ ಸಂಭ್ರಮಾಚರಣೆ. ಅದೇ ಹಂಪಿಯ ನೆಲದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐವತ್ತನೇ ವರ್ಷಾಚರಣೆ ಸಂಭ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ನಗಾರಿ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಂಪಿಯ ರಥ ಬೀದಿಯಲ್ಲಿ ನೂರಾರು ಕಲಾ ತಂಡಗಳ ಮೆರವಣಿಗೆ ಸಂಭ್ರಮಾಚರಣೆ ಇಮ್ಮಡಿಗೊಳಿಸಿತ್ತು.
ವರದಿ: ನರಸಿಂಹ ಮೂರ್ತಿ
ಬಳ್ಳಾರಿ/ವಿಜಯನಗರ(ನ.02): ಕನ್ನಡ ನಾಡಿನ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿ ಇದೀಗ ಐವತ್ತು ವರ್ಷವಾಗಿದೆ. ಅಂದು ಅರಸು ಅವರು ನಾಮಕರಣ ಮಾಡಿದ ಐತಿಹಾಸಿಕ ಹಂಪಿಯಲ್ಲಿಂದು ಕರ್ನಾಟಕ ಐವತ್ತನೇ ವರ್ಷಾಚರಣೆ ಸಂಭ್ರಮಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕಣ್ಮನ ಸೆಳೆಯಿತು. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..
undefined
ನಗಾರಿ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಶಿಲ್ಪ ಕಲೆಗಳ ತವರೂರಲ್ಲಿ ಕರ್ನಾಟಕದ ಐವತ್ತನೇ ವರ್ಷಾಚರಣೆ ಸಂಭ್ರಮಾಚರಣೆ... ಗಮನ ಸೆಳೆದ ಕಲಾ ತಂಡಗಳ ಮೆರವಣಿಗೆ. ರಸದೌತಣ ನೀಡಿದ ಸಂಗೀತ ಸಂಜೆ ಕಾರ್ಯಕ್ರಮ.. ಹೌದು, ಈ ಮೊದಲು ಅಂದ್ರೇ 1973ರ ಮುಂಚೆ ಕನ್ನಡ ನಾಡನ್ನು ಮೈಸೂರು ರಾಜ್ಯವೆಂದು ಕರೆಯಲಾಗುತ್ತಿತ್ತು. ಮೈಸೂರು ಒಂದು ಪ್ರಾಂತ್ಯದ ಹೆಸರಾಗಿರೋ ಹಿನ್ನಲೆ ಅರಸು ಅವರ ಸರ್ಕಾರ ಮೈಸೂರು ಹೆಸರನ್ನು ಕರ್ನಾಟಕ ಎಂದು1973 ನವೆಂಬರ್ 2ರಂದು ಐತಿಹಾಸಿಕ ಹಂಪಿಯಲ್ಲಿ ಮರುನಾಮಕರಣ ಮಾಡಿದ್ರು. ಅಂದು ಬದಲಾವಣೆ ಮಾಡಿದ ಹೆಸರಿಗೀಗ ಐವತ್ತನೇ ಸಂಭ್ರಮಾಚರಣೆ. ಅದೇ ಹಂಪಿಯ ನೆಲದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಐವತ್ತನೇ ವರ್ಷಾಚರಣೆ ಸಂಭ್ರಮವನ್ನು ಅದ್ಧೂರಿಯಾಗಿ ಮಾಡಲಾಗಿತ್ತು. ನಗಾರಿ ಬಾರಿಸೋ ಮೂಲಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಚಾಲನೆ ನೀಡಿದ್ರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಂಪಿಯ ರಥ ಬೀದಿಯಲ್ಲಿ ನೂರಾರು ಕಲಾ ತಂಡಗಳ ಮೆರವಣಿಗೆ ಸಂಭ್ರಮಾಚರಣೆ ಇಮ್ಮಡಿಗೊಳಿಸಿತ್ತು.. ವೇದಿಕೆಯಲ್ಲಿ ಸಾಧು ಕೋಕಿಲ ಅವರ ಸಂಗೀತ ಕಾರ್ಯಕ್ರಮ ಕೂಡ ಸಾಂಸ್ಕೃತಿಕ ಸಂಭ್ರಮಕ್ಕೆ ಹೆಚ್ಚು ಮೆರಗು ತಂದಿತ್ತು. ಉಸಿರಾಗಲಿ ಕನ್ನಡ ಹೆಸರಾಗಲಿ ಕರ್ನಾಟಕ ಎಂದ ಸಿದ್ದರಾಮಯ್ಯ. ಸುದೀರ್ಘವಾಗಿ ಕನ್ನಡ ಉಳಿಸಿ ಬೆಳಸಿ ಎಂದು ಮಾತನಾಡಿದ್ರು. ಜೊತೆಗೆ ಕನ್ನಡಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸಿದರು.
ವಿದೇಶಿ ನೇರ ಹೂಡಿಕೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ಸಚಿವ ಎಂ.ಬಿ. ಪಾಟೀಲ
ಹಂಪಿ ವಿರೂಪಾಕ್ಷೇಶ್ವರ ದರ್ಶನ ಪಡೆದ ವಿಶೇಷ ಪೂಜೆ ಸಲ್ಲಿಸಿದ ಸಿದ್ದು
ಇನ್ನೂ ಹಂಪಿ ವಿರೂಪಾಕ್ಷೇಶ್ವರ ದೇಗುಲ ದರ್ಶನ ಮಾಡಿದ್ರೇ ಅಧಿಕಾರ ಕಳೆದು ಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆಗೆ ಸೆಡ್ಡು ಹೊಡೆದ ಸಿದ್ದರಾಮಯ್ಯ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿದ್ರು. ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ ಮಾಡೋ ಮೂಲಕ ವಿದ್ಯಾರಣ್ಯ ಸ್ವಾಮೀಜಿ ರುದ್ರಾಕ್ಷಿ ಮಾಲೆ ಹಾಕಿದ್ರು. ಬಳಿಕ ಭುವನೇಶ್ವರಿ ದೇವಿಗೂ ಪೂಜೆ ಸಲ್ಲಿಸಿದ್ರು.. ದೇವರನ್ನು ನಂಬುತ್ತೇನೆ ಮೂಢನಂಬಿಕೆ ನಂಬಲ್ಲ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದ್ರು. ವೇದಿಕೆಯ ಭಾಷಣದಲ್ಲಿಯೂ ಸಚಿವ ಹೆಚ್.ಕೆ ಪಾಟೀಲ ಇದನ್ನು ಉಲ್ಲೇಖಿಸಿ ಸುದೀರ್ಘವಾಗಿ ಮಾತನಾಡಿದ್ರು.
ಪ್ರತ್ಯೇಕ ರಾಜ್ಯದ ಕೂಗು ನಿಲ್ಲಲು ಅನುದಾನ ನೀಡಿ: ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ
ಅಂದು ಅರಸು ಇಂದು ಸಿದ್ದರಾಮಯ್ಯ
ಕನ್ನಡ ಉಳಿಸೋ ಬೆಳೆಸೋ ವಿಚಾರದಲ್ಲಿಅಂದು ಅರಸು ಇಂದು ಸಿದ್ದರಾಮಯ್ಯ ಎಂದು ವೇದಿಕೆ ಮೂಲಕ ಸಂದೇಶ ನೀಡಲಾಯಿತು. ಒಟ್ಟಾರೆ ಕರ್ನಾಟಕದ ಐವತ್ತನೆ ವರ್ಷದ ಸಂಭ್ರಮಾಚರಣೆ ಹಂಪಿಯಲ್ಲಿ ಅದ್ದೂರಿಯಾಗಿ ನಡೆಯಿತು.
ಜಾನಪದ ಹಾಡಿಗೆ ನೃತ್ಯ ಮಾಡಿದ ಸಿದ್ದರಾಮಯ್ಯ
ಕಾರ್ಯಕ್ರಮದ ಕೊನೆಯಲ್ಲಿ ಸಿದ್ದರಾಮಯ್ಯ ಜಾನಪದ ಹಾಡಿಗೆ ನೃತ್ಯ ಮಾಡಿದ್ದಾರೆ. ಸಿದ್ದರಾಮಯ್ಯನ ಹುಂಡಿಯ ವೀರ ಮಕ್ಕಳ ಕುಣಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಜ್ಜೆ ಹಾಕಿದ್ದಾರೆ.