ಹುಬ್ಬಳ್ಳಿ: ನೇಹಾ ತಂದೆಗೆ ಧೈರ್ಯ ತುಂಬಿ, ನಿಮ್ಮ ಜೊತೆ ನಾವಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ

By Girish Goudar  |  First Published Apr 23, 2024, 4:42 PM IST

ನಿರಂಜನಯ್ಯ ಹಿರೇಮಠ "I am Very Sorry" ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ಒಂದಷ್ಟು ಸಮಾಧಾನ ಮಾಡಿಕೊಂಡ ನಿರಂಜನಯ್ಯ ಹಿರೇಮಠ


ಹುಬ್ಬಳ್ಳಿ(ಏ.23):  ಮೃತ ನೇಹಾಳ ತಂದೆ ನಿರಂಜನಯ್ಯ ಹಿರೇಮಠ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಧೈರ್ಯ ತುಂಬಿದ್ದಾರೆ. ಹೌದು, ಇಂದು(ಮಂಗಳವಾರ) ನೇಹಾ ಹಿರೇಮಠ ಕುಟುಂಬದವರಿಗೆ ಸಾಂತ್ವನ ಹೇಳಲು ಎಚ್.ಕೆ. ಪಾಟೀಲ ಅವರು ಬಂದಿದ್ದರು. ಸಾಂತ್ವನ ಹೇಳಿ ನಂತರ ನಿರಂಜನಯ್ಯ ಹಿರೇಮಠ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಎಚ್.ಕೆ. ಪಾಟೀಲ ಮಾತನಾಡಿಸಿದ್ದಾರೆ. 

ನಿರಂಜನಯ್ಯ ಹಿರೇಮಠ "I am Very Sorry" ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಮಾತಿಗೆ ನಿರಂಜನಯ್ಯ ಹಿರೇಮಠ ಒಂದಷ್ಟು ಸಮಾಧಾನ ಮಾಡಿಕೊಂಡಿದ್ದಾರೆ ಎಂದು ಸಚಿವ ಎಚ್. ಕೆ. ಪಾಟೀಲ್ ಹೇಳಿದ್ದಾರೆ. 

Latest Videos

undefined

ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ: ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆಗೆ ಆಗ್ರಹ

ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಎಚ್. ಕೆ. ಪಾಟೀಲ್ ಅವರು, ನ್ಯಾಯದಾನ ವಿಳಂಬ ಆಗಬಾರದೆಂದು ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ಇವತ್ತು ಉಚ್ಛ ನ್ಯಾಯಾಲಯಕ್ಕೆ ವಿಶೇಷ ನ್ಯಾಯಾಲಯ ಸ್ಥಾಪನೆ ಪತ್ರ ತಲುಪುತ್ತೆ ಎಂದು ತಿಳಿಸಿದ್ದಾರೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕಿದೆ. ಅನಿವಾರ್ಯ ಕಾರಣದಿಂದ ಸಿಎಂ ಇಲ್ಲಿಗೆ ಬರಲು ಆಗಿಲ್ಲ. ಇವತ್ತು ನಿರಂಜನ್ ಹಿರೇಮಠ್ ಜೊತೆ ಸಿಎಂ ಮಾತನಾಡಿದ್ದಾರೆ. ಸಿಎಂ ಸಾಂತ್ವನ ಹೇಳಿದ್ದಾರೆ. ಹಿರೇಮಠ್ ರಿಗೆ ಧೈರ್ಯದಿಂದ ಇರುವಂತೆ ಸಿಎಂ ಹೇಳಿದ್ದಾರೆ. ಬಹುಬೇಗ ನೇಹಾಳ ಸಾವಿಗೆ ನ್ಯಾಯ ಸಿಗುತ್ತೆ. ಬರ್ಬರ ಹತ್ಯೆ ಮತ್ತು ಸಮಾಜದ ಮುಖಂಡರ ಭೇಟಿ ವೇಳೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ತೀರ್ಮಾನಿಸಿದ್ದೇವೆ. ನಾವು ಸಾಂತ್ವನ ಹೇಳಲು ಬಂದಿದ್ದೇವೆ. ನಮ್ಮ ಕರ್ತವ್ಯ ನಿಭಾಯಿಸಿ ನಾವು ಅವರ ಮನೆಗೆ ಬಂದಿದ್ದೇವೆ. ವೈಯಕ್ತಿಕ ಘಟನೆ ಎಂಬ ಹೇಳಿಕೆ ಕುರಿತು ಗೃಹ ಸಚಿವ ಮತ್ತು ಸಿಎಂ ತಮ್ಮ ಸಮಾಜಯಿಸಿ ಹೇಳಿದ್ದಾರೆ. 

click me!