ಮಂಡ್ಯ: ಕಾಂಗ್ರೆಸ್‌ನ ಹಲವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

By Kannadaprabha News  |  First Published Apr 23, 2024, 1:26 PM IST

ತಾಲೂಕಿನ ಹೊಡಕೆಶೆಟ್ಟಹಳ್ಳಿಯ ಹಲವು ಕಾಂಗ್ರೆಸ್ ಮುಖಂಡರು ಯುವ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.


 ಕೆ.ಆರ್.ಪೇಟೆ :  ತಾಲೂಕಿನ ಹೊಡಕೆಶೆಟ್ಟಹಳ್ಳಿಯ ಹಲವು ಕಾಂಗ್ರೆಸ್ ಮುಖಂಡರು ಯುವ ಜನತಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಹೊಡಕೆಶೆಟ್ಟಹಳ್ಳಿಯ ಮುಖಂಡರಾದ ಎನ್.ಎಸ್.ರೇವಣ್ಣ, ಗಂಜಿಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯೆ ರತ್ನಮ್ಮ ಸೋಮರಾಜು, ವಿನಯ್ ಕುಮಾರ್, ಎಚ್.ಡಿ ಪರಮೇಶ್, ಸಣ್ಣತಮ್ಮೇಗೌಡ ಸೇರಿದಂತೆ ಹಲವು ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸೇರಿದರು.

Tap to resize

Latest Videos

ಮೈತ್ರಿ ಅಭ್ಯರ್ಥಿ ಯನ್ನು ಕ್ಷೇತ್ರದ ಜನತೆ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಗ್ರಾಮ ವಾಸ್ತವ್ಯದ ಮೂಲಕ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಸಾಲಮನ್ನಾ ಮಾಡಿ ರ ಪರ ನಿಂತಿದ್ದಾರೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಇದುವರೆಗೂ ರೈತರ ಸಾಲಮನ್ನಾ ಮಾಡಿಲ್ಲ. 5 ಗ್ಯಾರಂಟಿ ಯೋಜನೆಗಳನ್ನು ಗಂಡಸರಿಂದ ಹೆಂಗಸರಿಗೆ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ದೇಶದ ಅಭಿವೃದ್ಧಿ ಹಾಗೂ ಭದ್ರತೆ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಸಾಧನೆ ಅಮೋಘವಾಗಿದೆ. ಮತ್ತೊಂದು ಬಾರಿ ಪ್ರಧಾನಿಯಾಗಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಿದರೆ ರಾಜ್ಯದ ರೈತರ ದನಿಯಾಗಲಿದ್ದಾರೆ ಎಂದು ಹೇಳಿದರು.

ಈ ವೇಳೆ ತಾಪಂ ಮಾಜಿ ಸದಸ್ಯರಾದ ಹುಲ್ಲೆಗೌಡ, ಸೋಮಶೇಖರ್ , ಜಿಪಂ ಮಾಜಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಗಂಜಿಗೆರೆ ಗ್ರಾಪಂ ಅಧ್ಯಕ್ಷ ಮುದುಗೆರೆ ಪರಮೇಶ್, ಗ್ರಾಪಂ ಸದಸ್ಯ ಚಿಕ್ಕಗಾಡಿಗನಹಳ್ಳಿ ಪರಮೇಶ್, ಗ್ರಾಪಂ ಸದಸ್ಯೆ ಹೊಡಕಶೆಟ್ಟಹಳ್ಳಿ ಸುಮಾ ಲೋಕೇಶ್, ಮುಖಂಡರಾದ ಗಣೇಶ್, ನಾಗರಾಜು, ಕುಮಾರ್, ರೇಖಾ ಮನುರಾಜ್, ಪ್ರತಾಪ್, ಕೆ.ಆರ್.ನಾಗೇಶ್, ಬೊಮ್ಮೇಗೌಡ, ಆನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

click me!