ಸಿಎಂ ಸಿದ್ದರಾಮಯ್ಯ ಸಿಂಗಟಾಲೂರ ಯೋಜನೆಯ ಹರಿಕಾರ!

By Kannadaprabha News  |  First Published Dec 15, 2024, 8:31 PM IST

ಕೊಟ್ಟ ಮಾತು ಈಡೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ.ಪಾಟೀಲ ಈ ಭಾಗದ ಶಾಸಕ ಜಿ.ಎಸ್ ಪಾಟೀಲರ ಕಾರ್ಯ ಸಾಧನೆಗೆ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸಿಂಗಟಾಲೂರ ಯೋಜನೆ ಮೂಲಕ ಕಾಲುವೆ ನೀರು ಹರಿಸಿದ್ದರಿಂದ ಈ ಭಾಗದಲ್ಲಿ ಬತ್ತಿದ ಕೆರೆಗಳಲ್ಲಿ ನೀರು ತುಂಬಿ ಮೈದುಂಬಿ ನಿಂತಿವೆ. ಈಗ ಯೋಜನೆಯಿಂದ ಹಳ್ಳಕೊಳ್ಳ, ಬೋರವೆಲ್ಲ, ಬಾವಿಗಳಲ್ಲಿ ನೀರು ಚಿಮ್ಮುತ್ತಿವೆ. 


ರಿಯಾಜಅಹ್ಮದ ಎಂ ದೊಡ್ಡಮನಿ 

ಡಂಬಳ(ಡಿ.15):  ಬರದ ನಾಡು ಗದಗ ಜಿಲ್ಲೆಯ ಮುಂಡರಗಿ ಹಾಗೂ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕುಗಳ ರೈತರ ಜೀವನಾಡಿಯಾಗಿರುವ ಸಿಂಗಟಾಲೂರ ಏತ ನೀರಾವರಿ ಯೋಜನೆ ಅರ್ಪಿಸಿ ರೈತರಿಗೆ ವರದಾನವಾಗಿಸಿದ ಕೀರ್ತಿಗೆ ಮುಖ್ಯಮಂತ್ರಿ ಪಾತ್ರರಾಗಿದ್ದಾರೆ. 

Tap to resize

Latest Videos

ಸಿದ್ದರಾಮಯ್ಯ ಅನಿಶ್ಚಿತತೆಯಿಂದ ಬರ ಮನೆ ಮಾಡಿ ಬತ್ತಿ ಬಿಕೋ ಎನ್ನುತ್ತಿರುವ ಕೆರೆಗಳು, ಬಿಕೋ ಎನ್ನುತ್ತಿದ್ದ ಹಳ್ಳಕೊಳ್ಳ, ಬರದ ಬವಣೆಯಿಂದ ಬೇಸತ್ತು ಗೋವಾ, ಬೆಂಗಳೂರು, ಮಂಗಳೂರು, ಕಾರ ವಾರಗೆ ಗುಳೆ ಹೋಗುವುದು ಅನಿವಾರ್ಯವಾಗಿತ್ತು. ಬರದ ಬವಣೆಯಿಂದ ಬೇಸತ್ತು ಕೆಲ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದರು. ಹೋರಾಟಗಾರರು, ರೈತ ಸಂಘಟನೆಗಳು ಹೋರಾಟ ಮಾಡಿ ಯೋಜನೆ ಜಾರಿಗೆ ಚಾತಕ ಪಕ್ಷಿಯಂತೆ ಕಾಯ್ದು ಕುಳಿತುಕೊಂಡಿದ್ದರು. 

ದಶಕ ಕಳೆದರೂ ದಕ್ಕದ ಪರಿಹಾರ: ಸಿಂಗಟಾಲೂರು ಏತ ನೀರಾವರಿಗಾಗಿ ಭೂಮಿ ನೀಡಿದ ರೈತರ ಗೋಳು..!

undefined

2013ರ ಚುನಾವಣೆ ಪೂರ್ವ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುವಂತೆ ಜನತೆ ಆಶೀರ್ವದಿಸಿದರೆ ಯೋಜನೆ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನೀರು ಒದಗಿಸುವ ಭರವಸೆ ನೀಡಿದ್ದರು. 2013ರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಸಚಿವ ಎಚ್.ಕೆ. ಪಾಟೀಲ, ರೋಣ ಶಾಸಕ ಜಿ. ಎಸ್. ಪಾಟೀಲ ಹಾಗೂ ಅಂದು ಶಿರಹಟ್ಟಿ ಶಾಸಕರಾಗಿದ್ದ ರಾಮಕೃಷ್ಣ ದೊಡ್ಡಮನಿಯವರ ಆಸೆಯಂತೆ ಸಿಂಗಟಾಲೂರ ಹುಲಿಗುಡ್ಡ ಏತ ನೀರಾವರಿಯನ್ನು 6 ಟಿಎಂಸಿಯಿಂದ 18 ಟಿಎಂಸಿಗೆ ಹೆಚ್ಚುವರಿಯಾಗಿ ಮೇಲ್ದರ್ಜೆಗೇರಿಸಿ ಯೋಜನೆ ಪೂರ್ಣಗೊಳಿಸಿದ್ದು ರಾಜಕೀಯ ಇತಿಹಾಸ ಪುಟದಲ್ಲಿ ಸೇರ್ಪಡೆಗೊಂಡಿದೆ.

ರೈತರಲ್ಲಿ ಹರ್ಷ: 

ಕೊಟ್ಟ ಮಾತು ಈಡೇರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ.ಪಾಟೀಲ ಈ ಭಾಗದ ಶಾಸಕ ಜಿ.ಎಸ್ ಪಾಟೀಲರ ಕಾರ್ಯ ಸಾಧನೆಗೆ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸಿಂಗಟಾಲೂರ ಯೋಜನೆ ಮೂಲಕ ಕಾಲುವೆ ನೀರು ಹರಿಸಿದ್ದರಿಂದ ಈ ಭಾಗದಲ್ಲಿ ಬತ್ತಿದ ಕೆರೆಗಳಲ್ಲಿ ನೀರು ತುಂಬಿ ಮೈದುಂಬಿ ನಿಂತಿವೆ. ಈಗ ಯೋಜನೆಯಿಂದ ಹಳ್ಳಕೊಳ್ಳ, ಬೋರವೆಲ್ಲ, ಬಾವಿಗಳಲ್ಲಿ ನೀರು ಚಿಮ್ಮುತ್ತಿವೆ. 

ಹೊಸ ಬೆಳೆಗಳ ಅವಿಷ್ಕಾರ: 

ಸಿಂಗಟಾಲೂರ ಯೋಜನೆಯಡಿ ಕಾಲುವೆಗಳಲ್ಲಿ ನೀರು ಹರಿಯುತ್ತಿದ್ದಂತೆ ಡಂಬಳ ಭಾಗದ ರೈತರು ಈರುಳ್ಳಿ, ಗೋವಿನ ಜೋಳ, ಸೂರ್ಯಕಾಂತಿ ಬೆಳೆಗಳ ಜತೆಗೆ ತೋಟದ ಬೆಳೆಗಳಾದಪೇರಲೆ, ಬಾಳೆ, ಅಡಕೆ, ಕಬ್ಬು, ಡ್ರಾಗನ್ ಸೇರಿದಂತೆ ತರಕಾರಿಗಳನ್ನು ಬೆಳೆದು ರೈತರು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ.

ನೀರಾವರಿ ತಜ್ಞ ಕೆ.ಸಿ. ರಡ್ಡಿ ನೀಡಿದ್ದ ಸಿಂಗಟಾಲೂರ ಏತ ನೀರಾವರಿ ಯೋಜನೆ ನೀರು ಬಳಸಿಕೊಳ್ಳಲು ಅಡ್ಡಿ ಪಡಿಸುವ ವರದಿ ಧಿಕ್ಕರಿಸಿ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಜಿ.ಎಸ್. ಪಾಟೀಲರು ಈ ಭಾಗದ ರೈತರ ಪಾಲಿಗೆ ಭಗೀರಥರಾಗಿದ್ದಾರೆ.

Singatalur Lift Irrigation: ಎರಡು ದಶಕ ಕಳೆದರೂ ಸಿಗದ ಸೌಲಭ್ಯ

ರೈತರ ಹಿತ ಕಾಪಾಡಲು ಸಿಂಗಟಾಲೂರ ಏತ ನೀರಾವರಿ ಪ್ರಾರಂಭಿಸಿ ನುಡಿದಂತೆ ನಡೆದು ರೈತರ ಪಾಲಿನ ಭಗೀರ ಥರಾಗಿರುವ ಸಿಎಂ ಸಿದ್ದರಾ ಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಜರುಗುತ್ತಿರುವ ₹ 200 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಪ್ರಶಂಸನೀಯ. ಕ್ಷೇತ್ರದ ರಸ್ತೆ, ಕೆರೆ, ಶಾಲಾ, ಆಸ್ಪತ್ರೆಗಳ ಅಭಿವೃದ್ಧಿಗೆ ಮುಂದಿನ ದಿನಮಾನಗಳಲ್ಲಿ ಆದ್ಯತೆ ನೀಡಲಾಗುವುದು ಎಂದು ಶಾಸಕ ಜಿ.ಎಸ್.ಪಾಟೀಲ ತಿಳಿಸಿದ್ದಾರೆ. 

ಬರದ ನಾಡಿಗೆ ವರವಾಗುವ ಸಿಂಗಟಾಲೂರು ಯೋಜನೆ ಜಾರಿಗೊಳಿಸಿ ಡಂಬಳ ಕೆರೆ ಸೇರಿದಂತೆ ವಿವಿಧ ಕೆರೆಗಳನ್ನು ಮಾಡಿದ ಕೀರ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್‌. ಕೆ. ಪಾಟೀಲ, ಶಾಸಕ ಜಿ.ಎಸ್. ಪಾಟೀಲರಿಗೆ ಸಲ್ಲುತ್ತದೆ ಎಂದು ರಾಜ್ಯ ರೈತ ಪ್ರಶಸ್ತಿ ಪುರಸ್ಕೃತರು ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದ್ದಾರೆ. 

click me!