ದ್ರಾಕ್ಷಿ ಬೆಳೆಗಾರರ ಸಮಸ್ಯೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ: ಶಾಸಕ ಲಕ್ಷ್ಮಣ ಸವದಿ

By Kannadaprabha News  |  First Published Feb 3, 2024, 5:26 PM IST

ದ್ರಾಕ್ಷಿ ಬೆಳೆಗಾರರು ಒಂದಿಲ್ಲೊಂದು ತೊಂದರೆಯಲ್ಲಿದ್ದಾರೆ. ಇವರಿಗೆ ಶಾಶ್ವತ ಪರಿಹಾರದ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
 


ಐಗಳಿ (ಫೆ.03): ದ್ರಾಕ್ಷಿ ಬೆಳೆಗಾರರು ಒಂದಿಲ್ಲೊಂದು ತೊಂದರೆಯಲ್ಲಿದ್ದಾರೆ. ಇವರಿಗೆ ಶಾಶ್ವತ ಪರಿಹಾರದ ಬಗ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಸಮೀಪದ ಕೊಟ್ಟಲಗಿಯಲ್ಲಿ ಆರೂಢ ಎಂಟರ್ ಪ್ರೈಸಿಸ್ ಒಣ ದ್ರಾಕ್ಷಿ ಆರಿಸುವ ಯಂತ್ರ ಹಾಗೂ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಥಣಿ ಮತ ಕ್ಷೇತ್ರದಲ್ಲಿ ಕಡಿಮೆ ನೀರಿನಲ್ಲಿ ಒಳ್ಳೆಯ ಆದಾಯ ಬರಬಹುದು ಎಂದು ರೈತರು ಸಾಲ ಮಾಡಿ ದ್ರಾಕ್ಷಿ ಬೆಳೆ ಬೆಳೆದಿದ್ದಾರೆ.  ಆದರೆ, ಹಸಿ ಹಾಗೂ ಒಣ ದ್ರಾಕ್ಷಿಗೆ ಬೆಲೆ ಕುಸಿದಿದೆ. ಇದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. 

ದ್ರಾಕ್ಷಿ ಬೆಳೆಯಿಂದ ಬಂದ ಹಣದಿಂದ ಸಾಲ ತೀರಿಸಲು ಸಾಧ್ಯವಿಲ್ಲ. ಉಪಜೀವನ ನಡೆಸಲು ಸಹ ತೊಂದರೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ರೈತರ ಸಮಸ್ಯೆ ಬಗ್ಗೆ ತಿಳಿಸಿದ್ದೇನೆ. ಅಲ್ಲದೆ ಅಧಿವೇಶನದಲ್ಲೂ ಈ ಬಗ್ಗೆ ಧ್ವನಿ ಎತ್ತುವೆ ಎಂದರು. ಸರ್ಕಾರವು ಒಣ ದ್ರಾಕ್ಷಿ ಬೆಂಬಲ ಬೆಲೆ ಘೋಷಿಸಬೇಕು. ಅಲ್ಲದೆ ಖರೀದಿಗೆ ಸಹ ಮುಂದಾಗಬೇಕು. ರೈತರಿಂದ ದ್ರಾಕ್ಷಿ ಖರೀದಿಸಿ ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸಿದರೆ ಅವರಿಗೆ ಪೌಷ್ಠಿಕತೆ ಜಾಸ್ತಿ ಆಗುತ್ತದೆ. ಜೊತೆಗೆ ರೈತರಿಗೂ ಅನುಕೂಲ ಆಗಲಿದೆ ಎಂದರು. ದ್ರಾಕ್ಷಿ ಬೆಳೆ ತಂತ್ರಜ್ಞಾನದಿಂದ ಬೆಳೆಯಬೇಕು. ಬೇರೆ ದೇಶದಲ್ಲಿ ಹೆಚ್ಚು ರಾಸಾಯನಿಕ ಗೊಬ್ಬರ ಇಲ್ಲವೆ ಸಾವಯವ ಕೃಷಿ ಪದ್ಧತಿಯಿಂದ ದ್ರಾಕ್ಷಿ ಬೆಳೆಯುತ್ತಾರೆ. ಇದರಿಂದ ಅವರ ದ್ರಾಕ್ಷಿಗೆ ಉತ್ತಮ ಬೆಲೆ ದೊರೆಯುತ್ತದೆ. 

Latest Videos

undefined

ಆದರೆ, ನಮ್ಮ ಭಾಗದಲ್ಲಿ ನೀರಿನ ಕೊರತೆ ಇದೆ. ಟ್ಯಾಂಕರ್ ಮೂಲಕ ನೀರಿ ಹರಿಸಬೇಕು. ದ್ರಾಕ್ಷಿ ಖಟಾವು ಸಮಯದಲ್ಲಿ ಅಕಾಲಿಕ ಮಳೆ, ಆನೆಕಲ್ಲು ಬಿದ್ದರೆ. ಒಂದು ವರ್ಷದ ಬೆಳೆ ಹಾನಿಯಾಗುತ್ತದೆ. ಇದರಿಂದ ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರದಿಂದ ಪರಿಹಾರ, ಇಲ್ಲವೆ ನೆರವು ಮತ್ತು ಖರೀದಿ ಮಾಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಫೆ.5 ರಂದು ಕೃಷ್ಣಾ ಸಭಾ ಭವನದಲ್ಲಿ ಕಬ್ಬು ಬೆಳೆಗಾರರಿಗೆ ತರಬೇತಿ ನೀಡಲಾಗುವುದು ಇದರ ಉಪಯೋಗ ಎಲ್ಲ ರೈತರು ಪಡೆಯಿರಿ ಎಂದರು. ನ್ಯಾಯವಾದಿ ಅಮೋಘ ಖೋಬ್ರಿ, ಯುವ ನಾಯಕ ಶಿವು ಗುಡ್ಡಾಪೂರ ಮಾತನಾಡಿ ರೈತ ಹಾಗೂ ಮಾಜಿ ಜಿ.ಪಂ ಸದಸ್ಯ ಶಿದರಾಯ ಯಲಡಗಿ ತೋಟಕ್ಕೆ ಭೇಟಿ ನೀಡಿ ಅಲ್ಲಿನ ದ್ರಾಕ್ಷಿ, ದಾಳಿಂಬೆ, ಸೀತಾಫಲ, ಬೆಳೆಗಳನ್ನು ನೊಡಿ ಇವರಂತೆ ಕೃಷಿ ಮಾಡಬೇಕು. ಇವರು ನಮ್ಮೆಲ್ಲರಿಗೂ ಮಾರ್ಗದರ್ಶಕರು ಎಂದರು.

ಕನ್ನಡ ಕಟ್ಟಲು ಕನ್ನಡದ ಪರಂಪರೆಯ ತಿಳುವಳಿಕೆ ಅಗತ್ಯ: ವೀರಪ್ಪ ಮೊಯ್ಲಿ

ಶಾಸಕ ಲಕ್ಷ್ಮಣ ಸವದಿಯವರಿಗೆ ಯಲಡಗಿ ಸಹೋದರರು ಜೋಡು ಎತ್ತಿನ ಬಂಡೆ ನೀಡಿ ಸತ್ಕರಿಸಿದರು. ಗ್ರಾಮದ ಹಿರಿಯ ಶಂಕ್ರೆಪ್ಪ ಬಂಡರಗೋಟಿ, ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಬೋರಗಿ ಸಂಜಯ ಬರಡೋಲ, ಜತ್ತ ಸಚಿವ ಬೆಂಡಗೆ, ಸುರೇಶ ಮಾಳಿ, ರವಿಕುಮಾರ ಕೋಟೆ, ವಿಶ್ವನಾಥ ಗಣಿ, ಮಹಾಂತೇಶ ಬಡಚಿ, ಸಿ.ಎಸ್.ನೇಮಗೌಡ, ಗುರಪ್ಪ ದಾಶ್ಯಾಳ, ಅಣ್ಣಾರಾಯ ಹಾಲಳ್ಳಿ, ವೆಂಕಣ್ಣಾ ಅಸ್ಕಿ, ಸಂಗಯ್ಯ ಪೂಜಾರಿ ಎಮ್.ಆರ್.ತುಂಗಳ, ಸುರೇಶ ಮಾಳಿ, ಗುರು ಕಾಮನ್ ಪ್ರಕಾಶ ಗಣಿ, ಪ್ರಗತಿ ಪರ ರೈತ ಶಿದರಾಯ ಯಲಡಗಿ, ಪ್ರಾಸ್ತಾವಿಕ ಮಾತನಾಡಿದರು. ಸತೀಶ ಉಪಾಸೆ ಸ್ವಾಗತಿಸಿದರು ಸಂಗಮೇಶ ಯಲಡಗಿ ವಂದಿಸಿದರು.

click me!