ರಾಜಕಾರಣಿಗಳು ಪರಿಜ್ಞಾನ ಇಟ್ಟು ಮಾತನಾಡಬೇಕು, ಜಾತಿ, ಧರ್ಮ ಬದಿಗಿಟ್ಟು, ನಿಮ್ಮ ರಾಜಕೀಯವನ್ನು ಕೆಲಸ, ಪ್ರತಿಭೆಯಲ್ಲಿ ತೋರಿಸಿ ಎಂದು ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಹೇಳಿದರು.
ಚಿಕ್ಕಮಗಳೂರು (ಫೆ.03): ರಾಜಕಾರಣಿಗಳು ಪರಿಜ್ಞಾನ ಇಟ್ಟು ಮಾತನಾಡಬೇಕು, ಜಾತಿ, ಧರ್ಮ ಬದಿಗಿಟ್ಟು, ನಿಮ್ಮ ರಾಜಕೀಯವನ್ನು ಕೆಲಸ, ಪ್ರತಿಭೆಯಲ್ಲಿ ತೋರಿಸಿ ಎಂದು ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಹೇಳಿದರು. ಕಾರ್ಯಕ್ರಮದ ನಿಮಿತ್ತ ಚಿಕ್ಕಮಗಳೂರಿಗೆ ಶುಕ್ರವಾರ ಆಗಮಿಸಿದ್ದ ಸಂದರ್ಭದಲ್ಲಿ ಸಂಸದ ಡಿ.ಕೆ. ಸುರೇಶ್ ಪ್ರತ್ಯೇಕ ರಾಷ್ಟ್ರ ಕುರಿತು ನೀಡಿರುವ ಹೇಳಿಕೆಗೆ ಗುರೂಜಿ ಪ್ರತಿಕ್ರಿಯೆ ನೀಡಿದರು. ಜಿನ್ನಾ ಈ ತಪ್ಪು ಮಾಡಿದ್ದರು, ಗಾಂಧಿ ಅದನ್ನ ಬರೆದಿಡು ತ್ತಾರೆ. ನೆಹರೂ, ಜಿನ್ನಾ ಇಬ್ಬರನ್ನೂ ಕೂರಿಸಿ ಗಾಂಧಿ ಮಾತನಾಡುತ್ತಾರೆ. ನಾನಿರುವವರೆಗೂ ನನ್ನನ್ನ ಭಾಗ ಮಾಡಬೇಡಿ ಎಂದು ಕೇಳಿಕೊಂಡಿರ್ತಾರೆ, ಅವತ್ತು ಗಾಂಧಿ ಮಾತನ್ನ ಯಾರೂ ಕೇಳಲಿಲ್ಲ ಎಂದರು.
ಇಂದಿನ ಹಿಂದೂ, ಮುಸ್ಲಿಂ ಗಲಾಟೆ, ಹಳ್ಳಿ, ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೆ ಅಂತ ಅಂದೇ ಹೇಳಿದ್ದರು. ಇಂದು ದೇಶದಲ್ಲಿ ಆಗ್ತಿರೋದು ಅದೆ. ಅವರಿವರನ್ನ ಬೈದುಕೊಂಡೇ ವಿಧಾನಸಭೆ ಕಲಾಪ ಮುಗಿಸ್ತೀರಾ, ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತಿದೆ. ಎಲ್ಲರೂ ಈ ಪರಿಜ್ಞಾನ ಇಟ್ಟುಕೊಳ್ಳಬೇಕು, ಆಗ ಇಂತಹ ಭಾಷಣ ಮಾಡಲ್ಲ, ನಾನು, ನೀನು ಅನ್ನೋ ಭೇದ ಹಿಂಸೆ, ನಾನು, ನೀನು ಒಂದು ಅಂದ ದಿನ ಅಹಿಂಸೆ ಎಂದು ಹೇಳಿದರು.
ದೇಶದ ಸೈನಿಕರ ಋುಣ ತೀರಿಸಲಾಗದು: ದೇಶದಲ್ಲಿ ಅನ್ನ ನೀಡುವ ರೈತನ ಪಾತ್ರ ಒಂದೆಡೆಯಾದರೆ, ಇನ್ನೊಂದೆಡೆ ಗಡಿಯಲ್ಲಿ ದೇಶದ ನಾಗರೀಕರ ರಕ್ಷಣೆಗೆ ಜೀವವನ್ನೆ ಪಣಕ್ಕಿಡುವ ಸೈನಿಕ, ಇವರಿಬ್ಬರು ದೇಶದ ನಿಜವಾದ ಬೆನ್ನೆಲುಬು ಇವರ ಸಾರ್ಥಕತೆ ಮತ್ತು ತ್ಯಾಗವೇ ಸಮಾಜದ ನೆಮ್ಮದಿಗೆ ಕಾರಣವಾಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ನುಡಿದರು. ನಿವೃತ್ತ ಸೈನಿಕರ ಶ್ರೇಯೋಭಿವೃದ್ಧಿ ಜೊತೆಗೆ ಅವರ ಮಕ್ಕಳಿಗೂ ಅನುಕೂಲ ವಾಗುವಂತೆ ಶಾಲೆಗಳನ್ನು ಆರಂಭಿಸಬೇಕು. ಕುಟುಂಬ ತೊರೆದು ಹಗಲಿರುಳು ಗಡಿ ಕಾಯುವ ಮೂಲಕ ದೇಶದ ರಕ್ಷಣೆ ಮಾಡುವ ಯೋಧರ ಋುಣ ತೀರಿಸಲಾಗದು ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿಗಳಿಂದ ಕುಟುಂಬಕ್ಕೆ ಆರ್ಥಿಕ ಬಲ: ಶಾಮನೂರು ಶಿವಶಂಕರಪ್ಪ
ಕಾರ್ಗಿಲ್ ವಿಜಯ ದಿವಸದ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಪ್ರತಿಯೊಬ್ಬರು ಈ ಸಂಭ್ರಮಾಚರಣೆ ಮಾಡಬೇಕು. ಮುಂದಿನ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಬೇಕು, ಯುವ ಜನತೆ ದೇಶದ ಆಸ್ತಿ, ಯಾವುದೇ ಜಾತಿ, ಮತಗಳಿಗೆ ಸಿಲುಕಬಾರದು. ಒಳ್ಳೆಯ ಗುಣ ಸಂಸ್ಕಾರಗಳನ್ನು ಬೆಳೆಸಿಕೊಂಡು ತಮ್ಮನ್ನು ತಾವೇ ಮಾದರಿಯಾಗಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಡಿ ತಮ್ಮಯ್ಯ, ಕಾರ್ಗಿಲ್ ವಿಜಯ ದಿನ ದೇಶದ ಹೆಮ್ಮೆಯ ದಿನ, ಯುವ ಜನಾಂಗಕ್ಕೆ ಸ್ಪೂರ್ತಿ ತುಂಬುವ ದಿನವಾಗಿದ್ದು ಕಾರ್ಗಿಲ್ ಯುದ್ದದಲ್ಲಿ ಮಡಿದ 500 ಕ್ಕೂ ಅಧಿಕ ಸೈನಿಕರ ಶೌರ್ಯ, ಸಾಹಸವನ್ನು ನಾವೆಲ್ಲರೂ ಸ್ಮರಿಸಬೇಕು. ಜಿಲ್ಲೆಯ ನಿವೃತ್ತ ಸೈನಿಕರ ಶ್ರೇಯೋಭಿವೃದ್ಧಿಗೆ ನಿವೇಶನ, ಸೈನಿಕರ ಭವನ ನಿರ್ಮಾಣ ಸಹಿತ ಸರ್ಕಾರದಿಂದ ಸವಲತ್ತು ದೊರಕಿಸಿಕೊಡಲು ಪ್ರಯತ್ನ ಮಾಡುವ ಭರವಸೆ ನೀಡಿದರು.