ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

Published : Oct 03, 2018, 11:38 AM IST
ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್

ಸಾರಾಂಶ

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್. ನಾಳೆಯಿಂದ ಆರು ಬೋಗಿಯ ಮೆಟ್ರೋ ಓಡಾಟಕ್ಕೆ ಸಿದ್ಧವಾಗಿದೆ. 

ಬೆಂಗಳೂರು, [ಅ.3]: ನಾಳೆಯಿಂದ ಅಂದರೆ ಗುರುವಾರದಿಂದ ಎರಡನೇ ಆರು ಬೋಗಿಯ ಮೆಟ್ರೋ ಓಡಾಟಕ್ಕೆ ಸಿದ್ಧವಾಗಿದೆ. 

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು 6 ಬೋಗಿಯ ಮೆಟ್ರೋಗೆ ಹಸಿರು ನಿಶಾನೆ ತೋರಲಿದ್ದು,  ಈ ಮೆಟ್ರೋ ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ ವರಗೆ ಸಂಚರಿಸಲಿದೆ.

ಬೈಯಪ್ಪನ ಹಳ್ಳಿ - ಮೈಸೂರು ರಸ್ತೆ ಮಾರ್ಗದಲ್ಲಿ ಸಂಚಾರ ದಟ್ಟಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ನೂತನ 6 ಬೋಗಿ ಮೆಟ್ರೋ ಸಂಚರಿಸಲಿದ್ದು, ಇದರಲ್ಲಿ ಒಂದೇ ಸಲ 2,004 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.
 
ಒಟ್ಟು 1463 ಕೋಟಿ ವೆಚ್ಚದಲ್ಲಿ 150 ಹೊಸ ಬೋಗಿ ಪೂರೈಸಲು ಬಿಎಂಆರ್ ಸಿಎಲ್ , ಬಿಇಎಂಎಲ್ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಪೈಕಿ ಈಗಾಗಲೇ 6 ಬೋಗಿ ಪೂರೈಕೆ ಮಾಡಿದ್ದು, ಇನ್ನು 144 ಬೋಗಿ ಪೂರೈಕೆ ಮಾಡವುದು ಬಾಕಿ ಇದೆ. ಮುಂದಿನ ವರ್ಷ ಜೂನ್ ಒಳಗಡೆ ಇನ್ನುಳಿದ ಬೋಗಿಯನ್ನು ಬಿಇಎಂಎಲ್ ಪೂರೈಸಬೇಕಿದೆ

PREV
click me!

Recommended Stories

ಅಪರೂಪದ ಕೋತಿ ಪ್ರಭೇದ ಬ್ಯಾಗ್‌ನಲ್ಲಿಟ್ಟು ವಿದೇಶದಿಂದ ಅಕ್ರಮ ಸಾಗಾಟ, ಬೆಂಗಳೂರು ಏರ್ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಪ್ರಯಾಣಿಕ!
ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!