ಬಿಬಿಎಂಪಿ ನೂತನ ಮೇಯರ್ ಗೆ ಕಂಟಕ?

Published : Oct 03, 2018, 10:16 AM ISTUpdated : Oct 03, 2018, 10:19 AM IST
ಬಿಬಿಎಂಪಿ ನೂತನ ಮೇಯರ್ ಗೆ ಕಂಟಕ?

ಸಾರಾಂಶ

ಬಿಬಿಎಂಪಿ ನೂತನ ಮೇಯರ್ ಗಂಗಾಂಬಿಕೆಗೆ ದೊಡ್ಡ ಸವಾಲು ಎದುರಾಗಿದೆ. ಮೊನ್ನೇ ಅಷ್ಟೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿರುವ ಗಂಗಾಬಿಕೆ ಮುಂದೆ ಒಂದು ದೊಡ್ಡ ಸವಾಲ್ ಇದೆ.

ಬೆಂಗಳೂರು, [ಅ.03]: ಬಿಬಿಎಂ ನೂತನ ಮೇಯರ್ ಅಧಿಕಾರಕ್ಕೆ ಕಂಟಕ ಎದುರಾಗಲಿದ್ಯಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಕಾರಣ ರಸ್ತೆ ಗುಂಡಿ.

ನಗರದ ರಸ್ತೆ ಗುಂಡಿ ಮುಚ್ಚುವಂತೆ ಪಾಲಿಕೆಗೆ ಮೇಲಿಂದ ಮೇಲೆ ಕರ್ನಾಟಕ ಹೈಕೋರ್ಟ್ ಛೀ ಮಾರಿ ಹಾಕುತ್ತಿದೆ. ಆದರೂ ಸಹ ಬಿಬಿಎಂಪಿ ಎಲ್ಲೋ ಒಂದು ಕಡೆ ಕೋರ್ಟ್ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ನಗರದ ರಸ್ತೆ ಗುಂಡಿ ಮುಚ್ಚಲು ಪಾಲಿಕೆಗೆ ನೀಡಿದ್ದ ಡೆಡ್ ಲೈನ್ ಅಂತ್ಯವಾಗಿದ್ದು, ಇಂದು ಹೈಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ.

ಬಿಬಿಎಂಪಿಗೆ ಛೀ..ಥೂ ಅಂತ ಉಗಿದ ಹೈಕೋರ್ಟ್

ರಸ್ತೆ ಗುಂಡಿ ಮುಚ್ಚಲು ಹೈಕೋರ್ಟ್ ಸುದೀರ್ಘ ಕಾಲಾವಕಾಶ ನೀಡಿತ್ತು. ಕಳೆದ ಬಾರಿ ನೀಡಿದ್ದ ಸಮಯದಲ್ಲಿ ಶೇ .90% ರಸ್ತೆಯಲ್ಲಿ ಗುಂಡಿ ಮುಚ್ಚಿದ್ದಾಗಿ ಹೇಳಿ ಮುಜುಗರಕ್ಕೀಡಾಗಿತ್ತು. ಪಾಲಿಕೆ ನಿರ್ಲಕ್ಷ್ಯದಿಂದ ತೀವ್ರ ಅತೃಪ್ತಿ ಹೊರಹಾಕಿದ್ದ ಕೋರ್ಟ್,  ಮೂರು ವಿಧಾನ ಸಭಾ ಕ್ಷೇತ್ರದ ರಸ್ತೆಗಳ ರಿಯಾಲಿಟಿ ಚೆಕ್ ಮಾಡಲು ಅಯೋಗ ರಚನೆ ಮಾಡಿತ್ತು. 

ಅದರಂತೆ ಆಯೋಗವು ಇಂದು ಪರಿಶೀಲನೆ ನಡೆಸಿದ ವರದಿಯನ್ನು ಕೋರ್ಟ್ ಗೆ ನೀಡಲಿದೆ. ಇದರಿಂದ ಕೋರ್ಟ್ ಏನು ಹೇಳುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

PREV
click me!

Recommended Stories

Bengaluru: ಚಲ್ಲಘಟ್ಟ ಮೆಟ್ರೋ ಸ್ಟೇಷನ್‌ ಬಳಿಕ ಸ್ಕೈಡೆಕ್‌ಗೆ 45 ಎಕರೆ ಜಾಗ ಫಿಕ್ಸ್ ಮಾಡಿದ ಬಿಡಿಎ!
ಬಳ್ಳಾರಿ ಸಂಸ್ಕೃತಿ ಹಾಳು ಮಾಡಬೇಡಿ: ಗಲಭೆಕೋರರ ವಿರುದ್ಧ ಸಚಿವ ಸಂತೋಷ್ ಲಾಡ್ ಗರಂ, ದಮ್ ಇದ್ರೆ ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡಿ ಸವಾಲು