ಮನೆ ಕಳೆದುಕೊಂಡವರಿಗೆ ಪರಿಹಾರ ಹಣ ಘೋಷಿಸಿದ ಯಡಿಯೂರಪ್ಪ

By Web Desk  |  First Published Aug 12, 2019, 5:29 PM IST

ರಾಜ್ಯದಲ್ಲಿ ಉಂಟಾಗಿರುವ ಭೀಕರ ಪ್ರವಾಹದ ಸಿಲುಕಿ ಮನೆ-ಮಠ ಕಳೆದುಕೊಂಡವರೆಗೆ ಮುಖ್ಯಮಂತ್ರ ಯಡಿಯೂರಪ್ಪ ಅವರು ಪರಿಹಾರ  ಘೋಷಣೆ ಮಾಡಿದ್ದಾರೆ. ಮನೆ ನಿರ್ಮಿಸುವವರೆಗೂ ಬಾಡಿಗೆ ಮನೆ ಇರಲು ಹಣ. ಅಷ್ಟೇ ಅಲ್ಲದೇ ಹಳೆ ಮನೆ ದುರಸ್ಥಿತಿಗೂ ಸರ್ಕಾರದಿಂದ ಸಹಾಯ.


ಮಂಗಳೂರು, (ಆ.12): ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ  ರು. ಪರಿಹಾರ ನೀಡಲಾಗುವುದು ಎಂದು ಸಿಎಂ ಬಿಎಸ್‌ವೈ ಘೋಷಿಸಿದ್ದಾರೆ.

ಇಂದು (ಸೋಮವಾರ) ಬಿಎಸ್‌ವೈ ದಕ್ಷಿಣ ಕನ್ನಡದಲ್ಲಿ ಪ್ರವಾಹ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಮಂಗಳೂರಿನ ಕುಕ್ಕಾವಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಹೊಸ ಮನೆ ನಿರ್ಮಿಸಲು 5 ಲಕ್ಷ  ರು. ನೀಡುವುದಾಗಿ ತಿಳಿಸಿದರು. ಇದರ ಜತೆಗೆ  ತಾತ್ಕಾಲಿಕ ಪರಿಹಾರವಾಗಿ ಒಂದು ಕುಟುಂಬಕ್ಕೆ ತಲಾ 10 ಸಾವಿರ ರು. ವಿತರಿಸಲಾಗುವುದು ಎಂದು ಹೇಳಿದರು.

Latest Videos

undefined

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 275 ಮನೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವರಿಗೆ ಮನೆ ಕಟ್ಟಲು 5 ಲಕ್ಷ ರೂ. ನೀಡಲಾಗುವುದು. ಅಲ್ಲಿಯವರೆಗೂ ಮಳೆ ಕಳೆದುಕೊಂಡ ಸಂತ್ರಸ್ತರು ಹೊಸ ಮನೆ ನಿರ್ಮಿಸುವವರಿಗೆ ಪ್ರತಿ ತಿಂಗಳು 5 ಸಾವಿರ ರು. ಬಾಡಿಗೆ ನೀಡಲಾಗುವುದು.  ಮತ್ತು ಹಾಳಾಗಿರುವ ಮನೆಗಳ ದುರಸ್ತಿಗೆ 1 ಲಕ್ಷ ರು. ನೀಡಲಾಗುವುದು ಎಂದರು.

ಸದ್ಯ ಕೃಷಿಯ ನಷ್ಟದ ಲೆಕ್ಕಾಚಾರ ನಡೆಯುತ್ತಿದೆ. ಬೆಳೆ ನಾಶಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡುತ್ತೇವೆ. ಸಂತ್ರಸ್ತರಿಗೆ ಉಚಿತ ನಿವೇಶನ ನೀಡಲಾಗುವುದು. ಈಗಾಗಲೇ ಇದಕ್ಕಾಗಿ ಸರ್ಕಾರಿ ಭೂಮಿ ಗುರುತಿಸಲು ಸೂಚಿಸಿದ್ದೇನೆ. ಈ ಬಗ್ಗೆ ಜಿಲ್ಲಾಧಿಕಾರಿ, ತಹಸೀಲ್ದಾರ್​ಗೆ ಸೂಚಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ.

click me!