'ಬಿಎಸ್‌ವೈ ಮತ್ತೆ ಅವರ ನಡುವೆ ಇರೋದು ಲವ್'

Kannadaprabha News   | Asianet News
Published : Dec 03, 2020, 11:36 AM ISTUpdated : Dec 03, 2020, 11:46 AM IST
'ಬಿಎಸ್‌ವೈ ಮತ್ತೆ ಅವರ ನಡುವೆ ಇರೋದು ಲವ್'

ಸಾರಾಂಶ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಹಾಗೂ ಅವರ ನಡುವೆ ಇರೋದು ಲವ್ ಎಂದು ಬಿಜೆಪಿ ಸಚಿವರೋರ್ವರು ಹೇಳಿದ್ದಾರೆ. 

ಮಂಡ್ಯ (ನ.03): ಸಿಎಂ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ನಾರಾಯಣಗೌಡರ ನಡುವೆ ಲವ್‌ ಇದೆಯೇ ಹೊರತು ಲವ್‌ ಜಿಹಾದ್‌ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಮಾಷೆ ಮಾಡಿದರು.

ಕೆ.ಆರ್‌.ಪೇಟೆಯಲ್ಲಿ ನಡೆದ ಗ್ರಾಮ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿ, ನಾರಾಯಣಗೌಡರು ಸಿಎಂ ಯಡಿಯೂರಪ್ಪ ಅವರಿಗೆ, ಬಿ.ವೈ.ವಿಜಯೇಂದ್ರಗೆ ಏನು ಮೋಡಿ ಮಾಡಿದ್ದಾರೋ ಗೊತ್ತಿಲ್ಲ ಎಂದರು. 

ನಮಗೆಲ್ಲಾ ಒಂದೊಂದೇ ಖಾತೆ. ಅವರಿಗೆ ಮಾತ್ರ ಮೂರು ಖಾತೆಗಳನ್ನು ಕೊಟ್ಟಿದ್ದಾರೆ. ಅದು ತವರಿನ ಪ್ರೀತಿಯೋ ಏನೋ ಗೊತ್ತಿಲ್ಲ ಎಂದರು.

ಡಿಸಿ ರೋಹಿಣಿ ಪರ ಪ್ರತಾಪ್ ಬ್ಯಾಟಿಂಗ್ : ಸವಾಲ್ ಹಾಕಿದ ಸಂಸದ .

ಕಳೆದ ಉಪ ಚುನಾವಣೆ ವೇಳೆ ನೀವು ನಮಗೆಲ್ಲಾ ತಲೆಮಾಂಸದ ಊಟ ಕೊಟ್ಟು ಚೆನ್ನಾಗಿ ನೋಡಿಕೊಂಡಿದ್ದೀರಿ. ಮುಂಬೈನಲ್ಲೂ ನಮಗೆ ಉತ್ತಮ ವ್ಯವಸ್ಥೆ ಮಾಡಿದ್ರಿ ಎಂದು ಕಾಲೆಳೆದರು.

ರಾಜ್ಯದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದ್ದು ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. 

PREV
click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ಕಾರವಾರ: ಉಂಡ‌ ಮನೆಗೆ ದ್ರೋಹ; ಮನೆ ಕೆಲಸದವನಿಂದಲೇ ಲಕ್ಷಾಂತರ ರೂಪಾಯಿ ಕದ್ದವನ ಬಂಧನ