ಬಾಗಿನ ಅರ್ಪಿಸುವುದರಲ್ಲಿ ಬಿಎಸ್‌ವೈ ದಾಖಲೆ..!

By Kannadaprabha NewsFirst Published Aug 30, 2019, 8:31 AM IST
Highlights

ಸಿಎಂ ಬಿ. ಎಸ್‌. ಯಡಿಯೂರಪ್ಪ ಅವರು ಬಾಗಿನ ಅರ್ಪಿಸುವಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು 4 ಬಾರಿ ಬಾಗಿನ ಅರ್ಪಿಸಿ ದಾಖಲೆ ಮಾಡಿದ್ದಾರೆ. ಕೆಲವರು 2-3 ಬಾರಿ ಸಲ್ಲಿಸಿದ್ದಾರೆ. ಕೆಲವರು ಒಂದು ಬಾರಿ ಮಾತ್ರ ಬಾಗಿನ ಸಮರ್ಪಿಸಿದ್ದಾರೆ.

ಮಂಡ್ಯ(ಆ.30): ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು 4 ಬಾರಿ ಬಾಗಿನ ಅರ್ಪಿಸಿ ದಾಖಲೆ ಮಾಡಿದ್ದಾರೆ. ಕೆಲವರು 2-3 ಬಾರಿ ಸಲ್ಲಿಸಿದ್ದಾರೆ. ಕೆಲವರು ಒಂದು ಬಾರಿ ಮಾತ್ರ ಬಾಗಿನ ಸಮರ್ಪಿಸಿದ್ದಾರೆ.

ಆರ್‌.ಗುಂಡೂರಾವ್‌ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭವಾಯಿತು. ಗುಂಡೂರಾವ್‌, ಎಸ್‌.ಬಂಗಾರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಮಾತ್ರವೇ ಮೂರು ಬಾರಿ ಕೆಆರ್‌ಎಸ್‌ ನಲ್ಲಿ ಬಾಗಿನ ಅರ್ಪಿಸಿದ್ದಾರೆ. ಕಳೆದ ವರ್ಷ ಜುಲೈ 20ರಂದೇ ಜಲಾಶಯ ಭರ್ತಿಯಾಗಿತ್ತು. ಅದೇ ದಿನದಂದು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕಾವೇರಿಗೆ ಬಾಗಿನ ಸಲ್ಲಿಸಿ ಪೂಜೆ ನೆರವೇರಿಸಿದ್ದರು.

ಬಿಎಸ್‌ವೈ ಸಿಎಂ ಆದಾಗ ಆಗಸ್ಟ್‌ನಲ್ಲಿಯೇ ಜಲಾಶಯ ಭರ್ತಿ:

ವಿಶೇಷವೆಂದರೆ ಯಡಿಯೂರಪ್ಪ ಮಾತ್ರ ಬಾಗಿನ ಸಲ್ಲಿಸಿದ ನಾಲ್ಕು ವರ್ಷಗಳಲ್ಲಿ ಮೂರು ವರ್ಷ ಆಗಸ್ಟ್‌ನಲ್ಲೇ ಜಲಾಶಯ ಭರ್ತಿಯಾಗಿದೆ. 2009ರಲ್ಲಿ ಜು.24ರಂದು ಜಲಾಶಯ ಭರ್ತಿಯಾಗಿತ್ತು. 2008ರಲ್ಲಿ ಆ.15ರಂದು, 2009ರಲ್ಲಿ ಆ.18ರಂದು ಜಲಾಶಯ ಭರ್ತಿಯಾಗಿತ್ತು. ಕಾಕತಾಳೀಯವಾಗಿ 4 ನೇ ಬಾರಿಯೂ ಸಹ ಯಡಿಯೂರಪ್ಪ ಈ ವರ್ಷವೂ ಆಗಸ್ಟ್‌ ನಲ್ಲೇ (ಆ.29) ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಮಾಡಿದ್ದಾರೆ.

ಜಿಲ್ಲೆಯ ಜೀವನಾಡಿ ಕಾವೇರಿಗೆ 4ನೇ ಬಾರಿಗೆ ಬಾಗಿನ ಅರ್ಪಿಸಿದ ಸಿಎಂ

ಕಳೆದ ಮೂರು ದಶಕಗಳಿಂದಲೂ ಬಾಗಿನ ಸಲ್ಲಿಕೆಯ ಪೂಜಾ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದೇನೆ. ಗುಂಡೂರಾವ್‌ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಿಸಿದರು. ಯಡಿಯೂರಪ್ಪ 16ನೇ ಮುಖ್ಯಮಂತ್ರಿಯಾಗಿ ಬಾಗಿನ ಸಲ್ಲಿಸುತ್ತಿದ್ದಾರೆ. ಮನೆಯ ಹೆಣ್ಣು ಮಗಳಿಗೆ ಬಾಗಿನ ಕೊಡುವಂತೆಯೇ ಕನ್ನಂಬಾಡಿಕಟ್ಟೆಯ ತುಂಬಿದ ಕೂಡಲೇ ಕಾವೇರಿ ಮಾತೆಗೆ ಬಾಗಿನ ಸಲ್ಲಿಸುವ ಸಂಪ್ರದಾಯವಿದೆ ಎಂದು ವೇದಬ್ರಹ್ಮ ಭಾನುಪ್ರಕಾಶ ಶರ್ಮ ಅವರು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

click me!