ಎತ್ತಿನಗಾಡಿಯಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಅಶೋಕ್‌ ಸವಾರಿ

By Kannadaprabha News  |  First Published Jan 16, 2020, 8:56 AM IST

ಮಕರ ಸಂಕ್ರಾಂತಿ ಅಂಗವಾಗಿ ಪದ್ಮನಾಭನಗರದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿದರು. ಸುಮಾರು ಮೂರು ಗಂಟೆ ಕಾಲ ವಿವಿಧ ಜಾನಪದ ಕಲಾ ತಂಡಗಳ ಹಾಡು ಮತ್ತು ನೃತ್ಯ ಪ್ರದರ್ಶನ ವೀಕ್ಷಿಸಿದ್ದಾರೆ.


ಬೆಂಗಳೂರು(ಜ.16): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಫುಲ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದರು. ಮಕರ ಸಂಕ್ರಾಂತಿ ಅಂಗವಾಗಿ ಪದ್ಮನಾಭನಗರದಲ್ಲಿ ಆಯೋಜಿಸಿದ್ದ ಜಾನಪದ ಜಾತ್ರೆಯಲ್ಲಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿದರು. ಸುಮಾರು ಮೂರು ಗಂಟೆ ಕಾಲ ವಿವಿಧ ಜಾನಪದ ಕಲಾ ತಂಡಗಳ ಹಾಡು ಮತ್ತು ನೃತ್ಯ ಪ್ರದರ್ಶನ ವೀಕ್ಷಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪದ್ಮನಾಭನಗರದ ಅಟಲ್‌ ಬಿಹಾರಿ ವಾಜಪೇಯಿ ಆಟದ ಮೈದಾನದಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ಜಾನಪದ ಜಾತ್ರೆ ಆಯೋಜಿಸಿತ್ತು. ಜಾತ್ರೆಯ ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮೈದಾನದ ಗೇಟ್‌ನಿಂದ ವೇದಿಕೆಗೆ ಅಲಂಕೃತ ಎತ್ತಿನಗಾಡಿಯಲ್ಲಿ ಕರೆತರಲಾಯಿತು. ಕಂದಾಯ ಸಚಿವ ಆರ್‌.ಅಶೋಕ್‌ ಜೊತೆ ಎತ್ತಿನಗಾಡಿ ಏರಿದ ಮುಖ್ಯಮಂತ್ರಿ ಅವರು ಮೈದಾನವನ್ನು ಒಂದು ಸುತ್ತು ಹಾಕಿ ವೇದಿಕೆಗೆ ಆಗಮಿಸಿದ್ದು ವಿಶೇಷವಾಗಿತ್ತು.

Latest Videos

ಉಳುಮೆ ಮಾಡಿಕೊಂಡಿರ್ತೀನಿ, ರೇಸಲ್ಲಿ ನಾನಿಲ್ಲ!: ಕಣದಿಂದ ಹಿಂದೆ ಸರಿದ್ರಾ ಡಿಕೆಶಿ?

ಬಳಿಕ ಜಾನಪದ ಜಾತ್ರೆ ಉದ್ಘಾಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಜಾನಪದ ಕಲೆಗಳ ಉಳಿವಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಹಾವೇರಿಯಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸಿದ್ದೆ. ಆ ಮೂಲಕ ಜಾನಪದ ಕಲೆಗಳ ಉಳಿವು, ಬೆಳವಣಿಗೆಗೆ ಕ್ರಮ ವಹಿಸಲಾಗಿತ್ತು. ಸರ್ಕಾರ ಜಾನಪದ ಕಲಾವಿದರಿಗೆ ಮಾಸಾಶನ ನೀಡುತ್ತಿದೆ. ಗುರು ಶಿಷ್ಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಜಾನಪದ ಕಲೆಗಳ ಉತ್ತೇಜನಕ್ಕೆ ಇನ್ನಷ್ಟುಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬೆಂವಿವಿ ದೂರ ಶಿಕ್ಷಣಕ್ಕೆ ಮಾನ್ಯತೆ ಅನುಮಾನ

ಬಳಿಕ ಜಾತ್ರೆಯಲ್ಲಿ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಕುಳಿತು, ನಾಡಿನ ಮೂಲೆ ಮೂಲೆಗಳಿಂದ ಬಂದಿದ್ದ ಜಾನಪದ ತಂಡಗಳು ನಡೆಸಿಕೊಟ್ಟಜನಪದ ಗೀತೆಗಳ ಗಾಯನ ಮತ್ತು ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಹಾಲಕ್ಕಿ ಜನಾಂಗದ ಸುಗ್ಗಿ ಕುಣಿತ, ಸಿದ್ದಿ ಸಮುದಾಯದ ಸಿದ್ದಿ ಕುಣಿತ, ಡೊಳ್ಳು ಕುಣಿತ, ಕಂಸಾಳೆ, ಪೂಜಾ ಕುಣಿತ ಸೇರಿದಂತೆ ಸುಮಾರು 500 ಕಲಾತಂಡಗಳು ವಿವಿಧ ಜಾನಪದ ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಿದವು.

click me!