ಬಾಬಾ ಸಂದೇಶ ಓದಿದ ನಂತರ ಮಾಂಸಾಹಾರ ಸೇವನೆ ಬಿಟ್ಟೆ: ಸಿಎಂ ಬೊಮ್ಮಾಯಿ

By Kannadaprabha NewsFirst Published Aug 28, 2021, 8:56 AM IST
Highlights

*  ಬಾಬಾ ಅವರಿದ್ದ ಕಾಲದಲ್ಲಿ ನಾವೂ ಇದ್ದೆವು ಎಂಬುದೇ ಸಂಸತದ ವಿಷಯ
*  ಸತ್ಯಸಾಯಿ ಗ್ರಾಮದಲ್ಲಿ ಸಾಕ್ಷಾತ್‌ ಭಗವಂತನ ಸಾಕ್ಷಾತ್ಕಾರದ ಅನುಭವ
*  ಕರಾರು ರಹಿತ ಪ್ರೀತಿಯೇ ಭಕ್ತಿ

ಚಿಕ್ಕಬಳ್ಳಾಪುರ(ಆ.28):  ಬಾಬಾ ಸಂದೇಶ ಓದಿದ ಬಳಿಕ ನಾನು ಮಾಂಸಹಾರ ಸೇವನೆ ಬಿಟ್ಟೆ. ಒಮ್ಮೆ ನಮ್ಮ ತಾಯಿ ಆರೋಗ್ಯ ಅತಂತ್ಯ ಸಂಕಷ್ಟದಲ್ಲಿದ್ದಾಗ ಒಮ್ಮೆ ಬಾಬಾರನ್ನು ಸ್ಮರಿಸಿ ಪೂಜಿಸಿ ಆಸ್ಪತ್ರೆಗೆ ನಾನು ಹೋಗುವಷ್ಟರಲ್ಲಿ ನಮ್ಮ ತಾಯಿ ಎದ್ದು ಕೂತಿದ್ದರು. ಹೀಗೆಂದು ಹೇಳಿದ್ದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.

ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಗ್ರಾಮದಲ್ಲಿ ಶುಕ್ರವಾರ ಶ್ರೀ ಸತ್ಯಸಾಯಿ ಸರಳ ಮೆಮೋರಿಯಲ್‌ ಆಸ್ಪತ್ರೆ ಉದ್ಘಾಟಿಸಿದ ಭಗವಾನ್‌ ಸತ್ಯಸಾಯಿ ಬಾಬಾರನ್ನು 1998 ರಲ್ಲಿ ಒಮ್ಮೆ ಬೆಂಗಳೂರಿನ ವೈಟ್‌ಪೀಲ್ಡ್‌ನಲ್ಲಿ ಭೇಟಿ ಆಗಿದ್ದೆ. ಆ ಸಂದರ್ಭದಲ್ಲಿ 2 ಗಂಟೆ ಕಾಲ ಸಮಯವಿತ್ತು. ಆ ವೇಳೆ ನನ್ನ ಹಿಂದೆ ಇದ್ದವರು ‘ಕಂಪ್ಯಾರಿಸನ್‌ ಆಫ್‌ ವೆಜಿಟೇರಿಯನ್‌, ನಾನ್‌ ವೆಜಿಟೇರಿಯನ್‌ ಸೈಂಟಿಫಿಕ್‌ ರೀಸನ್‌’ ಎಂಬ ಒಂದು ಪುಸ್ತಕ ನೀಡಿದರು. ಆ ಪುಸ್ತಕದಲ್ಲಿ ಬಾಬಾರ ಒಂದು ಸಂದೇಶ ಇದೆಯೆಂಬ ಭಾವನೆ ಮೂಡಿತು. ಅಂದಿನಿಂದ ಮಾಂಸಹಾರ ಸೇವನೆ ಬಿಟ್ಟೆ ಎಂದರು.

ಜಲವಿವಾದ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ

ಒಮ್ಮೆ ನನ್ನ ತಾಯಿ ಅತ್ಯಂತ ಕಷ್ಟದಲ್ಲಿದ್ದಾಗ ಬಾಬಾರನ್ನು ಸ್ಮರಿಸಿಕೊಂಡು ಪೂಜೆ ಮಾಡಿದೆ. ಆಗ ಬಾಬಾ ಮುಂಬೈನಲ್ಲಿದ್ದರು. ಆಸ್ಪತ್ರೆಗೆ ಹೋದಾಗ ನನ್ನ ತಾಯಿ ಎದ್ದು ಕುಳಿತಿದ್ದರು. ಕರಾರು ರಹಿತ ಪ್ರೀತಿಯೇ ಭಕ್ತಿ. ಗುರಿವಿನಲ್ಲಿ ಕರಗಬೇಕು. ಕರಗಿ ಲೀನ ಆಗಬೇಕು, ದೈವತ್ವ ಗುರುವನ್ನು ಮನಸ್ಸಿನಲ್ಲಿಟ್ಟುಕೊಂಡು, ಮಾನವೀಯತೆಯೊಂದಿಗೆ ಕಟ್ಟಕಡೆಯ ವ್ಯಕ್ತಿಗೂ ನೆರವಗುವ ಮನೋಭಾವವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಸಿಎಂ ಬೊಮ್ಮಾಯಿ ತಿಳಿಸಿದರು.
ಭಗವಂತ ಕಣ್ಣಿಗೆ ಕಾಣುವುದಿಲ್ಲ ಎನ್ನುತ್ತಾರೆ. ಆದರೆ ಸತ್ಯಸಾಯಿ ಗ್ರಾಮದಲ್ಲಿ ಸಾಕ್ಷಾತ್‌ ಭಗವಂತನ ಸಾಕ್ಷಾತ್ಕಾರದ ಅನುಭವವಾಗಲಿದೆ. ಭಗವಂತನನ್ನು ಕಣ್ಣಿಗೆ ಕಾಣುವಂತ ಅನುಭವನ್ನು ಇಲ್ಲಿನ ವಾತಾವರಣ, ಉಸಿರಾಡುವ ಪ್ರತಿಯೊಂದು ಉಸಿರಿನಲ್ಲಿ ಪಡೆಯುತ್ತಿದ್ದೇವೆ ಎಂದೆನಿಸುತ್ತದೆ. ಸತ್ಯಸಾಯಿ ಬಾಬಾ ಅವರಿದ್ದ ಕಾಲದಲ್ಲಿ ನಾವು ಇದ್ದೆವೆಂಬುದನ್ನು ಸ್ಮರಿಸಿಕೊಂಡರೆ ಸಂತಸವಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.
 

click me!