ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದ್ದಾರೆ.
ಮೈಸೂರು(ಡಿ.01): ಹೈದರಾಬಾದ್‌ನಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿದವರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟಿಸಿದ್ದಾರೆ.
ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಜೀವಂತವಾಗಿ ದಹನ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕ್ರೂರ ಘಟನೆಗೆ ಕಾರಣರಾದವರಿಗೆ ಮರಣ ದಂಡನೆ ವಿಧಿಸಬೇಕು. ಈ ಘಟನೆ ನಡೆದು 2 ದಿನಗಳವರೆಗೆ ತನಿಖೆ ಚುರುಕುಗೊಳಿಸದ ಪೊಲೀಸರ ನಡೆ ಮತ್ತು ಸುರಕ್ಷತೆ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸುಟ್ಟ ಸ್ಥಿತಿಯಲ್ಲಿ ಮತ್ತೋರ್ವ ಮಹಿಳೆ ಶವ ಪತ್ತೆ!
ತೆಲಂಗಾಣ ಗೃಹ ಸಚಿವರು ನೀಡಿರುವ ಹೇಳಿಕೆ ಅವರ ಕೀಳು ಮಾನಸಿಕತೆಯನ್ನು ಬಿಂಬಿಸುತ್ತದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಬದಲು ಹತ್ಯೆಗೀಡಾದ ವೈದ್ಯೆಯೇ ಮೇಲೆಯೆ ಪ್ರಶ್ನೆ ಎತ್ತಿರುವುದು ಚಿಂತಾಜನಕವಾಗಿದೆ.
ಟೀ ಮಾರಿ ಜೀವನ ಸಾಗಿಸ್ತಿದ್ದ ಒಂಟಿ ಮಹಿಳೆ: ರೇಪ್ ಮಾಡಿ ಕೊಲೆಗೈದ ಕಾಮುಕ!
ಯಾವುದೇ ಒಬ್ಬ ಮಹಿಳೆ ಸಹಾಯ ಅಪೇಕ್ಷಿಸಿದಾಗ ಸಹಾಯ ಮಾಡುವ ಬದಲು ಮಹಿಳೆಯನ್ನೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬೆಂಕಿಯಿಟ್ಟು ಸುಡುವುದು ಮಾನಸಿಕತೆ ಉಳ್ಳವರು ಭೂಮಿ ಮೇಲೆ ಬದುಕಲು ಯೋಗ್ಯರಲ್ಲ. ಹೀಗಾಗಿ, ತ್ವರಿತ ನ್ಯಾಯಾಲಯ ಮೂಲಕ ಈ ಘಟನೆಗೆ ಕಾರಣರಾದವರಿಗೆ ಕೂಡಲೇ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಎಬಿವಿಪಿ ಮೈಸೂರು ವಿಭಾಗ ಸಂಚಾಲಕ ರಾಕೇಶ್ ನೇತೃತ್ವ ವಹಿಸಿದ್ದರು.
ಪ್ರಿಯತಮೆಗೆ ಕಾಟ: ಕೊಲೆ ಮಾಡಿ ಮೃತದೇಹ ಎಸೆದು ಪೊಲೀಸ್‌ಗೆ ಫೋನ್ ಮಾಡಿದ..!