ಹುಲಿಹೈದರ ಘಟನೆ: ಡಿಸಿ ನೇತೃತ್ವದ ತಂಡ ಭೇಟಿ, ಸಾಂತ್ವನ

By Govindaraj SFirst Published Aug 14, 2022, 10:54 PM IST
Highlights

ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ತಾಲೂಕಿನ ಹುಲಿಹೈದರ್‌ ಗ್ರಾಮಕ್ಕೆ ಜಿಲ್ಲಾಧಿಕಾರಿ ಸುಂದರೇಶಬಾಬು ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ, ಸಂತ್ರಸ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿತು. 

ಕನಕಗಿರಿ (ಆ.14): ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿದ್ದ ತಾಲೂಕಿನ ಹುಲಿಹೈದರ್‌ ಗ್ರಾಮಕ್ಕೆ ಜಿಲ್ಲಾಧಿಕಾರಿ ಸುಂದರೇಶಬಾಬು ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ, ಸಂತ್ರಸ್ತರ ಮನೆಗಳಿಗೆ ಹೋಗಿ ಸಾಂತ್ವನ ಹೇಳಿತು. ಮೊದಲಿಗೆ ಗ್ರಾಪಂ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಎಸ್‌ಪಿ ಅರುಣಾಂಗ್ಷುಗಿರಿ ಜತೆ ಚರ್ಚಿಸಿ ಪ್ರಕರಣ ಹಾಗೂ ಗ್ರಾಮದ ವಾಸ್ತವದ ಬಗ್ಗೆ ಮಾಹಿತಿ ಪಡೆದುಕೊಂಡರು. ಘರ್ಷಣೆಯಲ್ಲಿ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಧರ್ಮಣ್ಣ ಹರಿಜನ ಮನೆಗೆ ಭೇಟಿ ನೀಡಿದ ತಂಡ ಪರಿಹಾರದ ಭರವಸೆ ನೀಡಿದರು. ಧರ್ಮಣ್ಣ ಚೇತರಿಸಿಕೊಳ್ಳುತ್ತಿದ್ದು, ಸರ್ಕಾರದ ಸೌಲಭ್ಯ ನೀಡಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 

ಘರ್ಷಣೆಯಲ್ಲಿ ಮೃತಪಟ್ಟವರ ಮನೆಗಳಿಗೂ ಭೇಟಿ ನೀಡಿದಾಗ ಕುಟುಂಬಸ್ಥರಾರ‍ಯರು ಇರಲಿಲ್ಲ. ಮನೆಗೆ ಬೀಗ ಹಾಕಿರುವುದನ್ನು ಕಂಡ ಜಿಲ್ಲಾಧಿಕಾರಿ ಬೇಸರದಿಂದ ವಾಪಸ್‌ ಆದರು. ಆನಂತರ ಮಾತನಾಡಿದ ಜಿಲ್ಲಾಧಿಕಾರಿ, ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮಣ್ಣನಿಗೆ .4 ಲಕ್ಷ ಹಾಗೂ ಮೃತಪಟ್ಟಯಂಕಪ್ಪ ತಳವಾರ ಕುಟುಂಬಕ್ಕೆ .8 ಲಕ್ಷ ಪರಿಹಾರ ನೀಡಲಾಗುವುದು. ಇನ್ನೊಬ್ಬ ಮೃತ ವ್ಯಕ್ತಿ ಪಾಷಾವಲಿ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಹಾಗೂ ಸೌಲಭ್ಯ ಕಲ್ಪಿಸಲಾಗುವ ಭರವಸೆ ನೀಡಿದರು. ಧರ್ಮಣ್ಣನ ಕುಟುಂಬಕ್ಕೆ ಜಿಲ್ಲಾಧಿಕಾರಿ 50 ಸಾವಿರ ಚೆಕ್‌ ನೀಡಿದರು.

ಹುಲಿಹೈದರ ಇನ್ನೂ ಬೂದಿ ಮುಚ್ಚಿದ ಕೆಂಡ: ಗ್ರಾಮದಲ್ಲಿ ಸ್ಮಶಾನ ಮೌನ

16ಕ್ಕೆ ಶಾಲೆ, ಅಂಗನವಾಡಿ ಆರಂಭ: ಘಟನೆಗೆ ಕಾರಣ ತಿಳಿದು ಬಂದಿಲ್ಲ. ಎರಡ್ಮೂರು ದಿನಗಳಲ್ಲಿ ಗ್ರಾಮ ಸಹಜ ಸ್ಥಿತಿಗೆ ಬರಲಿದೆ. ತನಿಖೆ ಹೇಗೆ ನಡೆಸಬೇಕೆಂದು ಐಜಿ, ಎಸ್‌ಪಿ ಅವರಿಗೆ ಮಾರ್ಗದರ್ಶನ ನೀಡಿದ್ದು, ಅದರಂತೆ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದವರನ್ನು ಮಾತ್ರ ತನಿಖೆ ಮಾಡಲಾಗುತ್ತಿದೆ. ತಪ್ಪಿತಸ್ಥರು ಯಾರೇ ಇರಲಿ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಲಿದೆ. ಆ. 16ರ ಆನಂತರ ಗ್ರಾಮದ ಅಂಗನವಾಡಿ, ಶಾಲೆ, ವಸತಿ ನಿಲಯಗಳು ಎಂದಿನಂತೆ ಆರಂಭಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ತಿಳಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚಿದಾನಂದ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸುರೇಶ, ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ, ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಪರಸಪ್ಪ ಭಜಂತ್ರಿ, ತಾಪಂ ಇಒ ಕಾವ್ಯರಾಣಿ, ಪಿಡಿಒ ರವೀಂದ್ರ ಕುಲಕರ್ಣಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಮೃತರ ಕುಟುಂಬಸ್ಥರಿಗೆ ಶಾಸಕರ ಸಾಂತ್ವನ: ಹುಲಿಹೈದರ ಗ್ರಾಮದಲ್ಲಿ ಆ. 11ರಂದು ಎರಡು ಗುಂಪುಗಳ ಘರ್ಷಣೆಯಲ್ಲಿ ಮೃತಪಟ್ಟವರ ನಿವಾಸಕ್ಕೆ ಶಾಸಕ ಬಸವರಾಜ ದಢೇಸ್ಗೂರು ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗ್ರಾಮದ ಕರಡಿ ಓಣಿಯಲ್ಲಿ ಪಾಷಾವಲಿ ಮಾಳಿಗದ್ದಿ ಮನೆಗೆ ಹಾಗೂ ತಳವಾರ ಓಣಿಯಲ್ಲಿ ಯಂಕಪ್ಪನ ಮನೆಗೆ ಶಾಸಕರು ಭೇಟಿ ನೀಡುತ್ತಿದ್ದಂತೆ ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಟ್ಟರು. ಮೃತ ಪಾಷಾವಲಿಯ ಪತ್ನಿಗೆ ಮೂರು ತಿಂಗಳ ಹಿಂದೆ ಹೆರಿಗೆಯಾಗಿತ್ತು. ಕೆಲವೇ ದಿನಗಳಲ್ಲಿ ಪಾಷಾವಲಿ ಘರ್ಷಣೆಯಲ್ಲಿ ಮೃತಪಡುವಂತಾಯಿತು ಎಂದು ಕುಟುಂಬಸ್ಥರು ಕಣ್ಣೀರಿಟ್ಟು ನ್ಯಾಯ ಕೊಡಿಸುವಂತೆ ಶಾಸಕರಿಗೆ ಕೈಮುಗಿದರು.

ಕೊಪ್ಪಳದ ಕನಕಗಿರಿ ತಾಲೂಕಿನಲ್ಲಿ ಗುಂಪು ಘರ್ಷಣೆ: ಇಬ್ಬರ ಸಾವು

ಬಳಿಕ ತಳವಾರ ಓಣಿಯ ಯಂಕಪ್ಪನ ನಿವಾಸಕ್ಕೆ ಭೇಟಿ ನೀಡಿದ ದಢೇಸ್ಗೂರು, ನಾವು ಕೂಲಿ ಮಾಡಿ ಜೀವನ ನಡೆಸುವ ನಮ್ಮ ಮೇಲೆ ದಿಢೀರ್‌ ಮನೆಗೆ ಅಕ್ರಮವಾಗಿ ಬಂದು ಹೊಡಿದು ನಮ್ಮ ಮನೆಯ ಯಜಮಾನನನ್ನು ಕೊಲೆ ಮಾಡಿದ್ದಾರೆ. ತಪ್ಪು ಮಾಡಿದವರು ಯಾರೇ ಇರಲಿ, ಅವರಿಗೆ ಶಿಕ್ಷೆಗೆ ಗುರಿಪಡಿಸಬೇಕು ಎಂದು ಮನವಿ ಮಾಡಿದರು. ಇದಕ್ಕೂ ಮೊದಲು ಗ್ರಾಮದ ನಾನಾ ಬೀದಿಗಳಲ್ಲಿ ನಡೆದುಕೊಂಡೆ ಹೋಗಿ. ಜನರಿಗೆ ಭಯಭೀತರಾಗಬೇಡಿ. ನಿಮ್ಮ ಜತೆ ನಾವು, ನಮ್ಮ ಸರ್ಕಾರವಿದೆ ಎಂದು ಧೈರ್ಯ ತುಂಬಿದರು.

click me!