ಪ್ರೊಫೆಸರ್‌ಗಳ ಕಿತ್ತಾಟ| ಬಾಟನಿ ಎಚ್‌ಓಡಿಗೆ ಸೈಕಾಲಜಿ ಪ್ರೊಫೆಸರ್ ಕಪಾಳಮೋಕ್ಷ| ವಿವಿ ಕುಲಪತಿ, ಕುಲಸಚಿವರಿಗೆ ನಡೆದ ಘಟನೆ ವಿವರಿಸಿ ಮೇಲ್ಕೇರಿ ವಿರುದ್ಧ ಕಾನೂನು ಕ್ರಮಗಳಿಗೆ ಆಗಹಿಸಿದ ಡಾ.ವಿದ್ಯಾಸಾಗರ್| ದೂರನ್ನಾಧರಿಸಿ ವಿವಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರ ಬರೆದ ಕುಲಸಚಿವ|
ಕಲಬುರಗಿ(ಆ.20): ಇಬ್ಬರು ಹಿರಿಯ ಪ್ರೊಫೆಸರ್ಸ್ ಗುಲ್ಬರ್ಗ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲೇ ಹೊಡೆದಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆ.18ರ ಮಂಗಳವಾರ ಸೈಕಾಲಜಿ ವಿಭಾಗದ ಹಿರಿಯ ಪ್ರೊಫೆಸರ್ ಆಗಿರುವ ಗುವಿವಿ ಮಾಜಿ ಪ್ರಭಾರಿ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಅವರು ಸಸ್ಯಶಾಸ್ತ್ರ (ಬಾಟನಿ) ವಿಭಾಗದ ಮುಖ್ಯಸ್ಥ ಡಾ. ಜಿ.ಎಂ.ವಿದ್ಯಾಸಾಗರ್ ಅವರಿಗೆ ಅವರ ಚೆಂಬರ್‌ನಲ್ಲಿಯೇ ಕಪಾಳಮೋಕ್ಷ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಪ್ರೊ.ಮೇಲ್ಕೇರಿ ಅಣ್ಣನ ಪುತ್ರ ಶಿವಕುಮಾರ್ ಗುವಿವಿ ಸಸ್ಯಶಾಸ್ತ್ರ ವಿಭಾಗದ ಪೂರ್ಣಕಾಲಿಕ ಎಂಫಿಲ್ ವಿದ್ಯಾರ್ಥಿಯಾಗಿದ್ದಾನೆ. ಅವನಿಂದ ‘ತಾವು ಬೇರೆಲ್ಲೂ ಕೆಲಸ ಮಾಡುತ್ತಿಲ್ಲ’ ಎಂದು ಮುಚ್ಚಳಿಕೆ ಪತ್ರ ಕೊಡುವಂತೆ ಡಾ.ವಿದ್ಯಾಸಾಗರ ಕೇಳಿದ್ದರು. ಇದಕ್ಕೆ ಸಿಟ್ಟಾದ ಪ್ರೊ.ಮೇಲ್ಕೇರಿ ಮುಚ್ಚಳಿಕೆ ಪತ್ರ ಕೇಳಲು ನೀವ್ಯಾರು ಎಂದು ಪ್ರಶ್ನಿಸಿ, ಅವಾಚ್ಯವಾಗಿ ನಿಂದಿಸುತ್ತ, ಅಸಂವಿಧಾನಿಕ ಪದಗಳನ್ನು ಬಳಸಿ ಹಲ್ಲೆ ನಡೆಸಿದ್ದಾರೆ. ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಪ್ರತಿಮಾ ಮಠ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ವಿದ್ಯಾಸಾಗರ ದೂರಿದ್ದಾರೆ.
undefined
ಕಲಬುರಗಿ: ಸಂಸದ ಉಮೇಶ ಜಾಧವ್ ಪುತ್ರ, ಶಾಸಕ ಅವಿನಾಶ್ ಇಬ್ಬರಿಗೂ ಕೊರೋನಾ
ಡಾ.ವಿದ್ಯಾಸಾಗರ್ ಅವರು ವಿವಿ ಕುಲಪತಿ, ಕುಲಸಚಿವರಿಗೆ ನಡೆದ ಘಟನೆ ವಿವರಿಸಿ ಮೇಲ್ಕೇರಿ ವಿರುದ್ಧ ಕಾನೂನು ಕ್ರಮಗಳಿಗೆ ಆಗಹಿಸಿದ್ದಾರೆ. ಡಾ.ವಿದ್ಯಾಸಾಗರ ಅವರ ದೂರನ್ನಾಧರಿಸಿ ಕುಲಸಚಿವರು ವಿವಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅವರಿಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ.
ನನಗೆ ಜೀವ ಬೆದರಿಕೆ ಇದೆ:
ಪ್ರೊ.ಮೇಲ್ಕೇರಿ, ಡಾ. ಪ್ರತಿಮಾ ಮಠ ರೌಡಿಗಳನ್ನು ಬಳಸಿ ನಿನ್ನ ಕುಟುಂಬದ ಮೇಲೆ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ವಿದ್ಯಾಸಾಗರ ಆರೋಪಿಸಿದ್ದಾರೆ. ತನಗೆ ಸೂಕ್ತ ರಕ್ಷಣೆ ನೀಡುವಂತೆ ವಿವಿ ಕುಲಸಚಿವರಿಗೆ ಪತ್ರ ಬರೆದು ಕೋರಿದ್ದಾರೆ.