ಮತಾಂತರಿಗಳ ವಿರುದ್ಧ ಕ್ರಮ ಇಲ್ಲ...ಪೊಲೀಸರ ಮೇಲೆ ಬೆಲ್ಲದ್ ಆಕ್ರೋಶ

By Suvarna News  |  First Published Oct 18, 2021, 12:05 AM IST

* ಮತ್ತೆ ಚರ್ಚೆಗೆ ಬಂದ ಮತಾಂತರ ವಿಚಾರ
* ಹುಬ್ಬಳ್ಳಿಯಲ್ಲಿ ಹಿಂದು ಸಂಘಟನೆಗಳ ಪ್ರತಿಭಟನೆ
* ಅಧಿಕಾರಿಗಳು ಮತಾಂತರಿಗಳನ್ನು ಬೆಂಬಲಿಸಿದರೆ ಸುಮ್ಮನೆ ಇರಲ್ಲ
* ಪ್ರತಿಭಟನೆಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ


ಹುಬ್ಬಳ್ಳಿ(ಅ. 17)  ಕ್ರಿಶ್ಚಿಯನ್ ಸಮುದಾಯದವರು ಮತಾಂತರಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ನವನಗರದಲ್ಲಿ ಹಿಂದುಪರ ಸಂಘಟನೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಯಿತು. ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆ ತಡೆದ ಪರಿಣಾಮ ಟ್ರಾಫಿಕ್ ಸಮಸ್ಯೆ ಉಂಟಾಯಿತು. 

Tap to resize

Latest Videos

ಮತಾಂತರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ, ಬಜರಂಗದಳ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

ಶಾಸಕರ ತಾಯಿ ಸೇರಿ ಹಲವು ಕುಟುಂಬಗಳು ಘರ್ ವಾಪ್ಸಿ

ಈಗಾಗಲೇ ದೂರು ನೀಡಿದ್ದರೂ  ಆರೋಪಿಗಳನ್ನು ಅರೆಸ್ಟ್ ಮಾಡಿಲ್ಲ ಎಂದು ಪೊಲೀಸ್ ಇಲಾಖೆ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.  ಅಧಿಕಾರಿಗಳು ಕಾನೂನು ಬದ್ಧವಾಗಿ ಕೆಲಸ ಮಾಡಲಿ. 
ಅವರಿಗೆ ಯಾವುದೇ ಜಾತಿ ಇರಲ್ಲ ಡಿಸಿಪಿ ಮತಾಂತರಿ ಇರಬಹುದು. ಆದರೆ. ಮತಾಂತರಿಗಳನ್ನು ಬೆಂಬಲಿಸಬಾರದು ಎಂದು ಶಾಸಕ ಅರವಿಂದ್ ಬೆಲ್ಲದ್ ಎಚ್ಚರಿಕೆ ನೀಡಿದರು.

ಪೊಲೀಸ್ ಅಧಿಕಾರಿಗಳು ಹಾಗೂ ಡಿಸಿಪಿ ವಿರುದ್ಧ ಹರಿಹಾಯ್ದ ಶಾಸಕ ಅರವಿಂದ ಬೆಲ್ಲದ್ ಡಿಸಿಪಿ ರಾಮ ರಾಜನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ಎದುರು ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ  ಪ್ರತಿಭಟನೆ ನಡೆಯಿತು. 

ಮತಾಂತರದ ವಿಚಾರ ವಿಧಾನಸಭೆಯಲ್ಲಿಯೂ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ತಾಯಿಯನ್ನೇ ಮತಾಂತರ ಮಾಡಲಾಗಿದೆ. ಕಠಿಣ ಕಾನೂನಿನ ಅಗತ್ಯ ಇದೆ ಎಂದು ಹೇಳಿದ್ದರು. ಕೆಲ ದಿನಗಳ ಹಿಂದೆ ಘರ್ ವಾಪ್ಸಿ ಕಾರ್ಯಕ್ರಮ ನಡೆದು ಶಾಸಕರ ತಾಯಿ ಜತೆಗೆ ಅನೇಕ ಕುಟುಂಬಗಳು ಹಿಂದೂ ಧರ್ಮಕ್ಕೆ ವಾಪಸ್ ಆಗಿದ್ದರು. 

 

 

click me!