ನರಗುಂದ: 'ಪೌರ ಕಾರ್ಮಿಕರನ್ನು ಕೆಲಸದಿಂದ ತಗೆದರೆ ಆತ್ಮಹತ್ಯೆಗೆ ಸಿದ್ಧ'

Kannadaprabha News   | Asianet News
Published : Jul 02, 2020, 09:07 AM IST
ನರಗುಂದ: 'ಪೌರ ಕಾರ್ಮಿಕರನ್ನು ಕೆಲಸದಿಂದ ತಗೆದರೆ ಆತ್ಮಹತ್ಯೆಗೆ ಸಿದ್ಧ'

ಸಾರಾಂಶ

ಪೌರಕಾರ್ಮಿಕರ ವತಿಯಿಂದ ನರಗುಂದ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ| ಕಳೆದ ಹಲವಾರು ವರ್ಷಗಳಿಂದ 30 ಪೌರ ಕಾರ್ಮಿಕರು ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ| ಕಳೆದ 4-5 ತಿಂಗಳಿಂದ ಮಹಾಮಾರಿ ಕೊರೋನಾ ರೋಗ ಸಂದರ್ಭದಲ್ಲಿ ಜೀವದ ಹಂಗು ತೋರೆದು ನಾವೆಲ್ಲ ಸೇವೆ ಸಲ್ಲಿಸಿದ್ದೇವೆ|

ನರಗುಂದ(ಜು.02): ಕಳೆದ 10- 12 ವರ್ಷಗಳಿಂದ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು, ಬುಧವಾರ ಪುರಸಭೆಯವರು 30 ಪೌರಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಾಗಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಬುಧವಾರ ಪಟ್ಟಣದ ಪುರಸಭೆ ಮುಂದೆ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ 30 ಪೌರ ಕಾರ್ಮಿಕರು ಪುರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಮೇಲಾಗಿ ಕಳೆದ 4-5 ತಿಂಗಳಿಂದ ಮಹಾಮಾರಿ ಕೊರೋನಾ ರೋಗ ಸಂದರ್ಭದಲ್ಲಿ ಜೀವದ ಹಂಗು ತೋರೆದು ನಾವೆಲ್ಲ ಸೇವೆ ಸಲ್ಲಿಸಿದ್ದೇವೆ. ಈ ಎಲ್ಲ ಪೌರ ಕಾರ್ಮಿಕರು ಈ ಕೆಲಸವನ್ನು ನಂಬಿಕೊಂಡೇ ಜೀವನ ಸಾಗಿಸುತ್ತಿದ್ದು, ಸಧ್ಯ ನಮ್ಮನ್ನು ಕೆಲಸದಿಂದ ತಗೆದಲ್ಲಿ ನಮ್ಮ ಕುಟುಂಬಗಳು ಬೀದಿಗೆ ಬರಲಿದೆ. ಆದ್ದರಿಂದ ಸರ್ಕಾರ ನಮ್ಮನ್ನು ಪೌರ ಕಾರ್ಮಿಕರ ಕೆಲಸದಲ್ಲಿ ಮುಂದುವರೆಸಬೇಕು. ಒಂದು ವೇಳೆ ನಮ್ಮನ್ನು ಕೆಲಸದಿಂದ ತಗೆದಲ್ಲಿ ಎಲ್ಲ ಪೌರಕಾರ್ಮಿಕರು ಸಾಮೂಹಿಕವಾಗಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಕೊರೋನಾ ಕಾಟ: 'ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ'

ಪ್ರತಿಭಟನೆಯ ನಂತರ ಪೌರ ಕಾರ್ಮಿಕರು ಪುರಸಭೆ ಅಧಿಕಾರಿ ಸಂಗಮೇಶ ಬ್ಯಾಳಿ ಅವರಿಗೆ ಮನವಿ ಸಲ್ಲಿಸಿದರು. ನಾಗವ್ವ, ಉಮವ್ವ ಚಲವಾದಿ, ನಿಂಗವ್ವ ಕಾಳೆ, ದ್ಯಾಮವ್ವ ಹಳೇಮನಿ, ಶೋಭಾ ಕಾಡಮ್ಮನವರ, ಪದ್ಮವ್ವ ನರಗುಂದ, ಭಾರತಿ ಚಲವಾದಿ, ಸರಸ್ವತಿ ಕಪ್ಪಲಿ, ಫಕೀರವ್ವ ಸೋಮಣ್ಣವರ, ಪ್ರೇಮಾ ಭಂಗಿ, ನೀಲವ್ವ ಭಂಗಿ, ರೇಣುವ್ವ ಭಂಗಿ, ಯಮನವ್ವ ಸೋಮಣ್ಣವರ, ಲಲಿತಾ ದೊಡ್ಡಮನಿ ಸೇರಿದಂತೆ ಮುಂತಾದವರು ಇದ್ದರು.
 

PREV
click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!