ಶಿವಮೊಗ್ಗ: ಮುದ್ದಾಗಿ ಸಾಕಿದ್ದ ಬೆಕ್ಕು ಕಚ್ಚಿ ಸಾವನ್ನಪ್ಪಿದ ಮನೆಯೊಡತಿ!

By Sathish Kumar KH  |  First Published Aug 9, 2024, 8:57 PM IST

ಶಿವಮೊಗ್ಗಲ್ಲಿ ಮಹಿಳೆಯೊಬ್ಬರು ತಾನು ಮುದ್ದಾಗಿ ಸಾಕಿದ್ದ ಬೆಕ್ಕು ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ.


ಶಿವಮೊಗ್ಗ (ಆ.09): ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಿದ ಬೆಕ್ಕು ಮನೆಯೊಡತಿಗೆ ಕಚ್ಚಿ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಕ್ಕು ಕಚ್ಚಿದ್ದರೂ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ಮಾಡಿದ ಮಹಿಳೆ ರೇಬಿಸ್ ರೋಗಕ್ಕೆ ತುತ್ತಾಗಿದ್ದಾಳೆ.

ಹೌದು, ಇದು ಸಾಕಿದ ಪ್ರಾಣಿಯೇ ಜವರಾಯನಾಗಿ ಬಂದ ಕಥೆಯಾಗಿದೆ. ಬೆಕ್ಕನ್ನು ಸಾಕುವವರೇ ಇನ್ಮೇಲೆ ಹುಷಾರಾಗಿರಿ. ಮನೆಯಲ್ಲಿ ಮುದ್ದಾಗಿ ಸಾಕಿದ್ದ ಬೆಕ್ಕು ಕಚ್ಚಿ ಶಿವಮೊಗ್ಗದಲ್ಲಿ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಮಹಿಳೆ ಗಂಗೀಬಾಯಿ (50) ಆಗಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಮಹಿಳೆಗೆ ಬೆಕ್ಕು ಕಚ್ಚಿದೆ. ಆದರೆ, ಇದಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ಬೆಕ್ಕಿನ ಜೊಲ್ಲು ರಸದದಿಂದ ಹರಡುವ ರೇಬಿಸ್ ಕಾಯಿಲೆ ಬಂದು ಮಹಿಳೆ ಮೃತಪಟ್ಟಿದ್ದಾರೆ. 

Tap to resize

Latest Videos

undefined

ಮಕ್ಕಳಿಗೆ ಜ್ವರ, ಶೀತ, ಕೆಮ್ಮು, ಕಫ ನಿವಾರಣೆಗೆ ದೊಡ್ಡಪತ್ರೆ ಎಲೆ ಬಳಸುವ ವಿಧಾನಗಳು

ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿ ಯುವಕನೋರ್ವನ ಮೇಲೆ ಬೆಕ್ಕು ದಾಳಿ ಮಾಡಿತ್ತು. ಆದರೆ, ಯುವಕ ಸೂಕ್ತ ಚಿಕಿತ್ಸೆ ಪಡೆದ ಹಿನ್ನೆಲೆಯಲ್ಲಿ ಆರೋಗ್ಯವಾಗಿದ್ದರು. ಈಗ ಪುನಃ ಇದೇ ಕ್ಯಾಂಪ್‌ನಲ್ಲಿ ಗಂಗೀಬಾಯಿ ಅವರಿಗೆ ಕಚ್ಚಿದ್ದು, ಇವರು ಚಿಕಿತ್ಸೆ ಪಡೆಯದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಬೆಕ್ಕು ಸಾಕಣೆ ಮಾಡಿದ್ದ ಮಹಿಳೆಯ ಕಾಲಿಗೆ ಕಚ್ಚಿತ್ತು. ಕೂಡಲೇ ವೈದ್ಯರನ್ನು ಸಂಪರ್ಕಿಸಿದಾಗ ಒಂದು ಇಂಜೆಕ್ಷನ್ ಮಾಡಿ, ಇನ್ನೂ 4 ಇಂಜೆಂಕ್ಷನ್ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಒಟ್ಟಾರೆ 5 ಇಂಜೆಕ್ಷನ್ ತೆಗೆದುಕೊಳ್ಳಬೇಕಿದ್ದ ಮಹಿಳೆಯ ಆರೋಗ್ಯದಲ್ಲಿ ಯಾವುದೇ ಅನಾರೋಗ್ಯ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಆಕೆ ಆಸ್ಪತ್ರೆಗೆ ಹೋಗಿಲ್ಲ. 

ಆದರೆ, ಭತ್ತದ ನಾಟಿ ಸೇರಿದಂತೆ ದೈನಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ಮಹಿಳೆ ಸಾಕಿದ್ದ ಬೆಕ್ಕಿಗೆ ಅವರ ಮನೆಯಲ್ಲಿದ್ದ ಇನ್ನೊಂದು ನಾಯಿ ಕಚ್ಚಿತ್ತು ಎಂದು ತಿಳಿದುಬಂದಿದೆ‌. ಆದರೆ, ನಾಯಿಗೆ ಹುಚ್ಚು ಬಂದ ಹಿನ್ನೆಲೆಯಲ್ಲಿ ಅದನ್ನು ಸಾಯಿಸಲಾಗಿತ್ತು. ಆದರೆ, ನಾಯಿ ಕಚ್ಚಿದ್ದರಿಂದ ಬೆಕ್ಕಿಗೂ ರೇಬಿಸ್ ರೋಗ ಬಂದಿದೆ. ಈಗ ಬೆಕ್ಕು ಕಚ್ಚಿದ್ದರಿಂದ ಮಹಿಳೆಗೆ ಬೇಗನೇ ರೇಬಿಸ್ ರೋಗ ತಗುಲಿ ಸಾವಿಗೀಡಾಗಿದ್ದಾರೆ. ಇನ್ನು ಮೊನಚಾದ ಹಲ್ಲುಗಳುಳ್ಳ ಹಾಗೂ ಬೇಟೆಯಾಡುವ ಸಾಕು ಪ್ರಾಣಿಗಳ ಕಚ್ಚುವಿಕೆಯಿಂದಲೂ ರೇಬಿಸ್ ಹರಡುವ ಸಾಧ್ಯತೆ ಇದೆ  ಎಂದು ವೈದ್ಯರು ತಿಳಿಸಿದ್ದಾರೆ.

ಕಲ್ಲು ಪ್ರಕೃತಿ, ಕಡಿದರೆ ಆಕೃತಿ; ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್!

ಇನ್ನು ಗಂಗೂಬಾಯಿ ಅವರು ರೇಬಿಸ್ ರೋಗ ಸಂಪೂರ್ಣವಾಗಿ ಉಲ್ಬಣಗೊಂಡು ಗುಣಪಡಿಸಲಾಗದ ಸ್ಥಿತಿ ತಲುಪಿದ ನಂತರ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಮುಂದಾಗಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದುದರಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಗಂಗಿಬಾಯಿ ಸಾವನ್ನಪ್ಪಿದ್ದಾರೆ.

click me!