ಬಾಗಿಲು ಮುರಿಯದೇ, ಕೀ ಬಳಸದೇ 2 ಕೆಜಿ ಚಿನ್ನ ಕಳವು

Kannadaprabha News   | Asianet News
Published : Sep 02, 2020, 08:05 AM IST
ಬಾಗಿಲು ಮುರಿಯದೇ, ಕೀ ಬಳಸದೇ 2 ಕೆಜಿ ಚಿನ್ನ ಕಳವು

ಸಾರಾಂಶ

ಸಿನಿಮಾ ರೀತಿಯಲ್ಲಿ ದರೋಡೆ ಒಂದು ನಡೆದಿದೆ. ದರೋಡೆಯೂ ವಿಚಿತ್ರವಾಗಿದೆ. ಯಾವದೇ ಬಾಗಿಲು ಮುರಿಯದೇ ಕೀ ಬಳಸದೇ ಬರೋಬ್ಬರಿ 2 ಕಜಿ ಚಿನ್ನ ಕದಿಯಲಾಗಿದೆ.

ಮೈಸೂರು (ಸೆ.02):  ನಕಲಿ ಕೀ ಬಳಸದೆ, ಬಾಗಿಲುಗಳನ್ನು ಮೀಟದೆ ಮನೆಯಲ್ಲಿದ್ದ 2 ಕೆಜಿ ಚಿನ್ನವನ್ನು ಕಳ್ಳತನ ಮಾಡಿರುವ ಘಟನೆ ಮೈಸೂರು ನಗರದ ಸರಸ್ವತಿಪುರಂ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಘಟನೆಯು ಕನ್ನಡದ ಬೆಲ್‌ಬಾಟಮ್‌ ಸಿನಿಮಾ ನೆನಪಿಸುವಂತಿದೆ.

ಈ ವಿಚಿತ್ರ ರೀತಿಯ ಕಳ್ಳತನ ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯಕುಮಾರ್‌ ಮತ್ತು ವನಜಾಕ್ಷಿ ಎಂಬವರ ಮನೆಯಲ್ಲಿ ನಡೆದಿದೆ. ಬಾಲಕಿಯೊಬ್ಬಳು ಮನೆಯಲ್ಲಿ ಮಲಗಿರುವಾಗಲೇ ಮನೆಯಲ್ಲಿದ್ದ ಚಿನ್ನ ಮಾಯವಾಗಿದೆ ಎನ್ನಲಾಗಿದೆ. ವಿಜಯಕುಮಾರ್‌ ಬ್ಯುಸಿನೆಸ್‌ಮೆನ್‌ ಆಗಿದ್ದು, ಅವರ ಪತ್ನಿ ವನಜಾಕ್ಷಿ ಮೈಸೂರು ನಗರ ಪೊಲೀಸ್‌ ವಿಭಾಗದಲ್ಲಿ ದಫೇದಾರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಡ್ರಗ್ಸ್ ಮಾಫಿಯಾ: ಅರೆ ಪ್ರಜ್ಞಾಸ್ಥಿತಿಯಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ ಸಲ್ಲಿಕೆ..

ವಿಜಯ್‌ಕುಮಾರ್‌ ಅವರಿಗೆ ಆ.17ರಂದು ಕೊರೋನಾ ಪಾಸಿಟಿವ್‌ ಇರುವುದು ದೃಢಪಟ್ಟಿತ್ತು. ಹೀಗಾಗಿ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೊತೆಗೆ ಅವರ ತಾಯಿಗೂ ಸೋಂಕು ದೃಢಪಟ್ಟಿದ್ದು, ಸೋಮವಾರ ಮಧ್ಯಾಹ್ನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ನಡುವೆ ಮನೆಯಲ್ಲಿದ್ದ 2 ಕೆಜಿಯಷ್ಟುಚಿನ್ನಾಭರಣವನ್ನು ಕಳ್ಳರು ಕದ್ದಿದ್ದಾರೆ. ಒಂದೂವರೆ ಕೆಜಿಯಷ್ಟುಚಿನ್ನಾಭರಣ ಇವರದ್ದಾಗಿದ್ದು, ಮತ್ತೆ ಅರ್ಧ ಕೆಜಿಯಷ್ಟುಚಿನ್ನ ಇವರ ಸಂಬಂಧಿಕರದು ಎಂದು ತಿಳಿದುಬಂದಿದೆ.

ಆದರೆ ಕಳ್ಳತನ ಮಾತ್ರ ವಿಚಿತ್ರ ರೀತಿಯಲ್ಲಿ ನಡೆದಿದೆ. ಮನೆಯ ನಕಲಿ ಕೀ ಬಳಕೆಯಾಗಿಲ್ಲ, ಬಾಗಿಲನ್ನು ಮೀಟಿಲ್ಲ, ಆದರೂ ಕಳ್ಳತನ ನಡೆದಿದೆ. ಸರಸ್ವತಿಪುರಂ ಪೊಲೀಸ್‌ ಠಾಣೆಯ ಠಾಣಾಧಿಕಾರಿ ವಿಜಯ್‌ಕುಮಾರ್‌ ಮತ್ತು ಭವ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯವರೇ ಯಾರೋ ತೆಗೆದಿರಬೇಕು ಅಥವಾ ಅವರ ಪರಿಚಿತರು ಕೃತ್ಯ ನಡೆಸಿರಬೇಕೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸರಸ್ವತಿ ಪುರಂಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!