ಲಾಕಪ್‌ ಡೆತ್‌ ಪ್ರಕರಣ: ಪತ್ನಿಗೆ 4.15 ಲಕ್ಷ ರು. ಪರಿಹಾರ

By Kannadaprabha NewsFirst Published Oct 8, 2020, 3:04 PM IST
Highlights

ಪೊಲೀಸ್‌ ಠಾಣೆಗೆ ಹಾಜರಾಗಿದ್ದ   ಮರುಳುಸಿದ್ದಪ್ಪ ಅವರ ಲಾಕಪ್‌ ಡೆತ್‌ಗೆ ಸಂಬಂಧಿಸಿದಂತೆ ಮಾಯಕೊಂಡ ಠಾಣೆಯ ಪಿಎಸ್‌ಐ, ಹೆಡ್‌ ಕಾನ್‌ಸ್ಟೇಬಲ್‌, ಇಬ್ಬರು ಪಿಸಿಗಳು ಸೇರಿ ನಾಲ್ವರನ್ನು ಅಮಾನತುಗೊಳಿಸಲಾಗಿದೆ

ದಾವಣಗೆರೆ (ಅ.08):  ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಹಾಜರಾಗಿದ್ದ ವಿಠಲಾಪುರ ಗ್ರಾಮದ ಮರುಳುಸಿದ್ದಪ್ಪ ಅವರ ಲಾಕಪ್‌ ಡೆತ್‌ಗೆ ಸಂಬಂಧಿಸಿದಂತೆ ಮಾಯಕೊಂಡ ಠಾಣೆಯ ಪಿಎಸ್‌ಐ, ಹೆಡ್‌ ಕಾನ್‌ಸ್ಟೇಬಲ್‌, ಇಬ್ಬರು ಪಿಸಿಗಳು ಸೇರಿ ನಾಲ್ವರನ್ನು ಅಮಾನತುಗೊಳಿಸಿ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಪೊಲೀಸ್‌ ಠಾಣೆಗೆ ವಿಚಾರಣೆ ಸಂಬಂಧ ಕರೆಸಿಕೊಂಡ ವ್ಯಕ್ತಿ ಕಸ್ಟಡಿಯಲ್ಲಿರುವಾಗ ಮೃತಪಟ್ಟಿರುವ ಹಿನ್ನೆಲೆ ಪಿಎಸ್‌ಐ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮಾಯಕೊಂಡ ಠಾಣೆಯ ಪಿಎಸ್‌ಐ ಪ್ರಕಾಶ್‌, ಮುಖ್ಯ ಪೇದೆ ನಾಗರಾಜ್‌ ಮತ್ತು ಪೊಲೀಸ್‌ ಕಾನ್‌ಸ್ಟೇಬಲ್‌ ಶೇರ್‌ ಆಲಿಯನ್ನು ಮಂಗಳವಾರ ರಾತ್ರಿ ಅಮಾನತು ಮಾಡಿದ್ದು, ಬುಧವಾರ ರಂಗಸ್ವಾಮಿ ಎಂಬುವರನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಹೇಳಿದರು.

ಬಾಲಕಿ ಅಪಹರಿಸಿ ರಹಸ್ಯ ಸ್ಥಳದಲ್ಲಿ ಅತ್ಯಾಚಾರ : ಆರೋಪಿ ಅರೆಸ್ಟ್ ...

ಬುಧವಾರ ಮೃತ ಮರುಳಸಿದ್ದಪ್ಪ ಅವರ ಶವದ ಮರಣೋತ್ತರ ಪರೀಕ್ಷೆ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆ ಶವಾಗಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮೃತನ ಪತ್ನಿ ಪರಿಹಾರ ನೀಡದೇ ಹೋದರೆ ಪ್ರತಿಭಟನೆ ವಾಪಾಸು ಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಎಸ್ಪಿ ಡಿಸಿ ಸ್ಥಳಕ್ಕೆ ಧಾವಿಸಿ ಸಮಾಧಾನಿಸಲು ಪ್ರಯತ್ನಿಸಿದರು. ಆದರೆ ಪತ್ನಿ ಮತ್ತು ಕುಟುಂಬದವರು ಒಪ್ಪದ ಹಿನ್ನೆಲೆಯಲ್ಲಿ 4.15 ಲಕ್ಷ ರೂ ಪರಿಹಾರ ನೀಡಿದರು.

click me!