Asianet Suvarna News Asianet Suvarna News

ಬಾಲಕಿ ಅಪಹರಿಸಿ ರಹಸ್ಯ ಸ್ಥಳದಲ್ಲಿ ಅತ್ಯಾಚಾರ : ಆರೋಪಿ ಅರೆಸ್ಟ್

ಬಾಲಕಿಯನ್ನು ಅಪಹರಿಸಿ ರಹಸ್ಯ ಸ್ಥಳದಲ್ಲಿ ಇರಿಸಿ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. 

Man Arrested For Kidnap And Rape Case in Ramanagara snr
Author
Bengaluru, First Published Oct 7, 2020, 12:07 PM IST
  • Facebook
  • Twitter
  • Whatsapp

ಚನ್ನಪಟ್ಟಣ (ಅ.07): ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಫಲ ಗೊಂಡಿರುವ ಗ್ರಾಮಾಂತರ ಪೊಲೀಸರು ಸಂತ್ರಸ್ತ ಬಾಲಕಿಯನ್ನು ರಕ್ಷಿಸಿ ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ.

ನಿಂಗರಾಜು(25) ಬಂಧಿತ ಆರೋಪಿ. ತಾಲೂಕಿನ ಹಾರೋಹಳ್ಳಿ ದೊಡ್ಡಿ ಗ್ರಾಮದ ಈತ ಅಪ್ರಾಪ್ತ ಯುವತಿಯನ್ನು ಅಪಹರಿಸಿ ರಹಸ್ಯ ಸ್ಥಳದಲ್ಲಿ ಇರಿಸಿ ಅತ್ಯಾಚಾರ ನಡೆಸಿದ್ದ. ಈ ಸಂಬಂಧ ಬಾಲಕಿಯ ಪೋಷಕರು ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಸಾಲಭಾದೆ: ತಾಯಿ, ಮಗ ನೇಣಿಗೆ ಶರಣು ..

ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈಗಾಗಲೇ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ಭಾರೀ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ಪ್ರಕರಣವೂ ಕೂಡ  ನಡೆದಿದೆ. 

Follow Us:
Download App:
  • android
  • ios