BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ದವಿದೆ : ಸಚಿವ ಶ್ರೀರಾಮುಲು

By Suvarna NewsFirst Published Sep 30, 2022, 3:24 PM IST
Highlights

ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಸರ್ಕಾರ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿತ್ತು. BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು. 

ಚಿತ್ರದುರ್ಗ: ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಿದೆ. ಸರ್ಕಾರ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿತ್ತು. BBMP ಚುನಾವಣೆ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಶ್ರೀರಾಮುಲು, ಯಾವುದೇ ಸಂದರ್ಭದಲ್ಲಿ ಬಿಬಿಎಂಪಿ ಚುನಾವಣೆಗೆ ಸಿದ್ದವಿರಲು ಸಿಎಂ ಸೂಚಿಸಿದ್ದರು ಅದರಂತೆ ನಾವೆಲ್ಲರೂ ಸಿದ್ದರಾಗಿದ್ದೇವೆ ಎಂದರು.

ಡಿಕೆಶಿ, ಸಿದ್ಧರಾಮಯ್ಯ ಜೊತೆಯಲ್ಲಿ ರಾಹುಲ್ ಪಾದಯಾತ್ರೆ ಕುರಿತು ಮಾತನಾಡಿದ ಅವರು, ಭಾರತ್ ಜೋಡೋ ಪಾದಯಾತ್ರೆ ಮೂಲಕ ರಾಹುಲ್ ಆಗಮಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತ ರಾಹುಲ್ ಪಾದಯಾತ್ರೆ ಮಾಡ್ತಾರೆ ಎಂದು ವ್ಯಂಗ್ಯವಾಡಿದರು. ಸಿದ್ಧರಾಮಯ್ಯ ಆಡಳಿತದಲ್ಲಿ ಹಲವು ಹಗರಣ ನಡೆದಿವೆ. ಮಾಟಿಕ್ಸ್ ಮ್ಯಾಗ್ಝಿನ್ ವಿಚಾರದಲ್ಲಿ ಹಲವು ಹಗರಣ ನಡೆದಿವೆ. ಸಿದ್ಧರಾಮಯ್ಯ ಕುಟುಂಬಸ್ಥರೂ ಒಳಗೊಂಡು ಭ್ರಷ್ಟಾಚಾರ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಬಳಿಕ ಸಿದ್ಧರಾಮಯ್ಯ ತಮ್ಮ ಪುತ್ರರನ್ನು ಹಗರಣದಿಂದ ಹೊರ ತಂದಿದ್ದಾರೆ ಶಿಕ್ಷಕರ ನೇಮಕಾತಿಯಲ್ಲೂ ಹಗರಣ ಆಗಿದೆ ಎಂದು ಆರೋಪಿಸಿದರು.

ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್
ಡಿಕೆಶಿ ಭ್ರಷ್ಟಾಚಾರದ ಬ್ರ್ಯಾಂಡ್ ಅಂಬಾಸಿಡರ್ ಇದ್ದಂತೆ, ಭ್ರಷ್ಟಾಚಾರ ಅಂದರೆ ಕಾಂಗ್ರೆಸ್ ಪಕ್ಷ, ದೇಶ ಮುಳುಗಿಸಿದ ಪಕ್ಷ ಕಾಂಗ್ರೆಸ್  ಎಂದರು. ಜಾಮೀನು ಮೇಲೆ ಹೊರಗಿದ್ದವರು ಸಿಎಂ ಬೊಮ್ಮಾಯಿ ಬಗ್ಗೆ ಮಾತಾಡ್ತಾರೆ ಎಂದು ಕಿಡಿಕಾರಿದ ಶ್ರೀರಾಮುಲು, ಸಿದ್ಧರಾಮಯ್ಯ ಆಡಳಿತದ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ಆಗ್ತಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆಂಬ ಹಂತದಲ್ಲಿದೆ ಎಂದರು. ಸಿಎಂ ಬೊಮ್ಮಾಯಿಯಿಂದ  ಲೋಕಾಯುಕ್ತದ ಬಲ ಪಡಿಸುವ ಕೆಲಸ ಆಗ್ತಿದೆ. ತಮ್ಮ ಹಗರಣ ಮುಚ್ಚಿಕೊಳ್ಳಲು ಕಾಂಗ್ರೆಸ್‌  ಪೆಸಿಎಂ ತಂತ್ರ ಮಾಡಿದೆ. ತಾಕತ್ತಿದ್ದರೆ ಈ ಬಗ್ಗೆ ಚರ್ಚೆ ಮಾಡಿ ಅಂದರೆ ಸದನ ದಿಂದಲೇ ಓಡಿದ್ದಾರೆ ಎಂದರು. 

ಹೆಸರಲ್ಲಿ ರಾಮ, ಉಂಡ ಮನೆಗೆ ನಾಮ; ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಶ್ರೀರಾಮುಲು

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜ್ಯ ಲೂಟಿ ಮಾಡಿದ್ದಾರೆ, ಹಗರಣ ಮಾಡಿದ ಸಿದ್ಧರಾಮಯ್ಯ ಸತ್ಯವಂತ ಎಂದು ಹೇಳಿಕೊಳ್ಳುತ್ತಾರೆ. RSS ಮತ್ತು PFI ಜತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. RSS ದೇಶ ಐಕ್ಯತೆಗಾಗಿ ಶ್ರಮ ವಹಿಸುತ್ತಿದೆ. RSS ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ, ದೇಶ ಕಟ್ಟುವ ಕೆಲಸ ಮಾಡಿದೆ. ದೇಶಕ್ಕೆ ಅಪಾಯ ತರುವ ಕೆಲಸ RSS ಮಾಡಿಲ್ಲ. RSS ದೇಶದ ಭವಿಷ್ಯ, ಜನರ ಸುರಕ್ಷತೆಗಾಗಿ ಹೋರಾಡುತ್ತಿದೆ. RSS ಅಂದರೆ ದೇಶ, ದೇಶ ಅಂದರೆ RSS ಎಂಬ ಭಾವನೆ ಇದೆ. PFI ಭಯೋತ್ಪಾದಕರನ್ನು ಹುಟ್ಟು ಹಾಕುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ PFI ಸಂಘಟನೆಯನ್ನು ಬ್ಯಾನ್ ಮಾಡಿದೆ ಎಂದರು.

Karnataka Politics: ಎಸ್‌ಆರ್ ಪಾಟೀಲ್‌ಗೆ ಟಿಕೆಟ್‌ ತಪ್ಪಿಸಲು ಸಿದ್ದರಾಮಯ್ಯ ಕಾರಣ: ಶ್ರೀರಾಮುಲು

ಭಾರತ್ ಜೋಡೋ ಯಾತ್ರೆ ವೇಳೆ ಫ್ಲೆಕ್ಸ್ ಹರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಚೀಪ್ ಪಾಲಿಟಿಕ್ಸ್ ಮಾಡುವುದು ಬಿಜೆಪಿ ನರನಾಡಿಯಲ್ಲಿ, ರಕ್ತದಲ್ಲಿ ಇಲ್ಲ.  ಬೇಲ್ ಮೇಲಿರುವ ಹೊರಗಿರುವ ಡಿಕೆಶಿ, ಹಗರಣ ಮಾಡಿದ ಸಿದ್ಧರಾಮಯ್ಯ ಪೇಸಿಎಂ ವಾಲ್ ಪೋಸ್ಟರ್ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಭ್ರಷ್ಟಾಚಾರದ ಹೋರಾಟಕ್ಕೆ ತಿರುಗೇಟು ನೀಡಿದರು. 

RSS ಸಂಘಟನೆ ಬಿಜೆಪಿಯ ಪಾಪದ ಕೂಸು ಎಂಬ ಸಿದ್ಧರಾಮಯ್ಯ ಹೇಳಿಕೆಗೆ  ಪ್ರತಿಕ್ರಿಯಿಸಿದ ಶ್ರೀರಾಮುಲು, RSS ಪಾಪದ ಕೂಸಲ್ಲ, ಭಾರತ ದೇಶದ ಮಣ್ಣಿನ ಕೂಸು ದೇಶದ ಪ್ರತಿ ಜನ, ಯುವಕರು, ಸ್ವತಂತ್ರ ಹೋರಾಟಗಾರರಿಗೆ RSS ಶಕ್ತಿ ಎಂದರು.  ಶ್ರೀರಾಮುಲು ಕಾಂಗ್ರೆಸ್ ಸೇರಲು ಶಾಸಕ ನಾಗೇಂದ್ರ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ದಾರಿಯಲ್ಲಿ ಹೋಗುವವರಿಗೆಲ್ಲಾ ನಾನು ಉತ್ತರಿಸಲ್ಲ ಎಂದು ತಿಳಿಸಿದರು.
 

click me!