Chitradurga; ಟೊಮ್ಯಾಟೊ ಬೆಲೆ ಗಗನಕ್ಕೇರಿದ್ರೂ ರೈತನಿಗೆ ತಪ್ಪದ ಸಂಕಷ್ಟ

By Suvarna News  |  First Published May 25, 2022, 5:06 PM IST
  • ಒಂದ್ಕಡೆ ಗಗನಕ್ಕೇರಿದ ಟೊಮ್ಯಾಟೊ ಬೆಲೆ, ಮತ್ತೊಂದೆಡೆ ಬೆಳೆ ನಾಶದಿಂದ ರೈತ ಕಂಗಾಲು.
  • ಲಕ್ಷಾಂತರ ರೂ ಖರ್ಚು ಮಾಡಿ ಟೊಮ್ಯಾಟೊ ಬೆಳೆದಿದ್ದ ರೈತ ಪ್ರಹ್ಲಾದ್.
  • ಅಕಾಲಿಕ ಮಳೆಯಿಂದ ಜಮೀನಿನಲ್ಲೇ ಕೊಳೆಯುತ್ತಿದೆ ಟೊಮ್ಯಾಟೊ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮೇ.25): ಈ ಭಾಗವನ್ನ ಎಲ್ಲರೂ ಬರಪೀಡಿತ ಪ್ರದೇಶ ಅಂತಾರೆ. ಅಲ್ಲಿನ ಬಹುತೇಕ ರೈತರು ಲಾಭಕ್ಕಿಂತ ನಷ್ಟ ಅನುಭವಿಸಿದ್ದೇ‌ ಹೆಚ್ಚು. ಹೀಗಾಗಿ ಈ ಬಾರಿ ಟೊಮ್ಯಾಟೊ ಬೆಳೆದು‌ ಅಪಾರ ಲಾಭ‌ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರಿಗೆ ಟೊಮ್ಯಾಟೊ ಬೆಲೆ (Tomato Price) ಗಗನಕ್ಕೇರಿದ್ರು ಸಹ ಸಂಕಷ್ಟ ಮಾತ್ರ ತಪ್ಪಿಲ್ಲ. ಹೀಗಾಗಿ ರೈತರ ಬದುಕಿಗೆ  ಸಿಹಿಯಾಗಬೇಕಿದ್ದ ಟಮೋಟೊ ಮತ್ತೆ ಹುಳಿ ಹಿಂಡಿದೆ.  

Tap to resize

Latest Videos

ಗಿಡದಲ್ಲೇ ಕೊಳೆಯುತ್ತಿರೊ ಟೊಮ್ಯಾಟೊ, ಬೆಳೆ ನಾಶದಿಂದಾಗಿ ಲಕ್ಷಾಂತರ ರೂ ನಷ್ಟದಿಂದ ಕಂಗಾಲಾದ ರೈತ‌ (Farmer). ಈ ದೃಶ್ಯಗಳು ಕಂಡುಬಂದಿದ್ದು ಚಿತ್ರದುರ್ಗ (Chitradurga ) ತಾಲ್ಲೂಕಿನ ಹಂಪಯ್ಯನಮಾಳಿಗೆ ಗ್ರಾಮದಲ್ಲಿ.  ಈ ಗ್ರಾಮದ ರೈತ ಪ್ರಹ್ಲಾದ್ ಕಳೆದ ವರ್ಷ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ‌ ಎನಿಸಿರೊ  ಈರುಳ್ಳಿ‌ ಬೆಳೆದು, ದಿಢೀರ್ ಅಂತ ಎದುರಾದ ಬೆಲೆ ಕುಸಿತದಿಂದಾಗಿ ಬಾರಿ ನಷ್ಟ ಅನುಭವಿಸಿದ್ರು. ಹೀಗಾಗಿ ಈ ಬಾರಿ ಬೇಸಿಗೆಯಲ್ಲಾದ್ರೂ  ಲಾಭ ಗಳಿಸೋಣ ಅಂತ  ಲಕ್ಷಾಂತರ ರೂಪಾಯಿ ಸಾಲ-ಸೂಲ‌ ಮಾಡಿ ಉತ್ತಮವಾಗಿ ಟೊಮ್ಯಾಟೊ ಬೆಳೆದಿದ್ದಾರೆ. ಹೀಗಾಗಿ ಆ ರೈತರ ನಿರೀಕ್ಷೆಯಂತೆ‌ ಟೊಮ್ಯಾಟೊ ಬೆಲೆ ಸಹ ಗಗನಕ್ಕೇರಿದೆ.

BBMP Election ಬೆನ್ನಲ್ಲೇ 10 ಕೋಟಿ ವೆಚ್ಚದಲ್ಲಿ ಹೊಸ ಕೌನ್ಸಿಲ್ ಸಭಾಂಗಣ

ಆದ್ರೆ ಇತ್ತೀಚೆಗೆ ಸುರಿದ ಅಕಾಲಿಕ ಮಳೆ ರೈತನ ಕನಸಿಗೆ ಕೊಳ್ಳಿ ಇಟ್ಟಿದೆ. ಮಳೆಯ ಆರ್ಭಟದಿಂದಾಗಿ ಎರಡು ಎಕರೆ ಜಮೀನಿನಲ್ಲಿ ತಂಪು ಹೆಚ್ಚಾಗಿ ಟೊಮ್ಯಾಟೊ ಗಿಡದಲ್ಲೇ ಕೊಳೆಯುತ್ತಿದೆ. ಮಳೆಯ (Rain) ಬಿರುಸಾದ ಹೊಡೆತಕ್ಕೆ ಸಿಲುಕಿರೊ ಟಮ್ಯಾಟೊ ಹಣ್ಣಿಗೆ ಹಾನಿಯಾಗಿದೆ.ಹೀಗಾಗಿ ರೈತನ ಕೈಗೆ ಬಂದ‌ ತುತ್ತು ಬಾಯಿಗೆ ಬಾರದಂತಾಗಿದ್ದೂ, ರೈತ‌ ಪ್ರಹ್ಲಾದ್ ಟೊಮ್ಯಾಟೊ ಬೆಳೆಯಲು ಮಾಡಿದ ಸಾಲ ತೀರಿಸಲು ದಾರಿ ಕಾಣದೇ ಪರದಾಡುವಂತಾಗಿದೆ.

ಇನ್ನು ಮಾರುಕಟ್ಟೆಯಲ್ಲಿ ಒಂದು ಕೆಜಿ ಟೊಮೆಟೊ ಬೆಲೆ ನೂರು ರೂಪಾಯಿಯ ಗಡಿ‌ ದಾಟಿದೆ. ಅಲ್ಲದೇ ಇತರೆ ತರಕಾರಿಗಳ ಬೆಲೆ‌ ಸಹ‌ ಗಗನಕ್ಕೇರಿದೆ. ಆದ್ರೆ  ಪ್ರಕೃತಿಯ ಕೋಪದಿಂದಾಗಿ ರೈತರಿಗೆ ಮಾತ್ರ ನಯಾಪೈಸ ಲಾಭ ಸಿಗಲಾರದಂತಾಗಿದೆ. ಹೀಗಾಗಿ ರೈತರು‌ ಬೇಸಿಗೆಯಲ್ಲೂ ಬಾರಿ‌ ಸಂಕಷ್ಟ ಅನುಭವಿಸುವಂತಾಗಿದೆ.ಆದ್ದರಿಂದ ಸರ್ಕಾರ  ಸೂಕ್ತ ಸಮೀಕ್ಷೆ ನಡೆಸಿ  ತರಕಾರಿ ನಾಶದಿಂದ ಸಮಸ್ಯೆಗೆ ಸಿಲುಕಿರೋ ಅನ್ನದಾತರಿಗೆ ಸೂಕ್ತ‌ ಪರಿಹಾರ ಒದಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

Chamarajanagara ಕೆರೆ ತುಂಬಿದ್ದಕ್ಕೆ ಕ್ರೆಡಿಟ್, ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ

ಒಟ್ಟಾರೆ ಇತ್ತೀಚೆಗೆ‌ ಸುರಿದ ಅಕಾಲಿಕ ಮಳೆ ಟೊಮ್ಯಾಟೊ ಬೆಳೆದ ರೈತರ ಕನಸನ್ನು ಕಮರುವಂತೆ ಮಾಡಿದೆ. ಹೀಗಾಗಿ, ಕೋಟೆನಾಡಿನ ರೈತರು ಮತ್ತೆ ಸಾಲದ ಸುಳಿಗೆ ಸಿಲುಕಿದ್ದಾರೆ. ಇನ್ನಾದ್ರು ಸರ್ಕಾರ ಅನ್ನದಾತರ ಸಂಕಷ್ಟಕ್ಕೆ ಪರಿಹಾರ ಹುಡುಕಿ, ಅವರ ಸಮಸ್ಯೆ ಬಗೆಹರಿಸಬೇಕಿದೆ.

click me!