ಚಿತ್ರದುರ್ಗ: ಬಿಲ್ ಆಗುವ ಮುನ್ನವೇ ಬಿರುಕು ಬಿಟ್ಟ ರಸ್ತೆ; ಯಾರ ಜೇಬು ಸೇರಿತು ಕೋಟ್ಯಂತರ ಹಣ?

By Ravi Janekal  |  First Published Sep 14, 2023, 2:54 PM IST

ರಸ್ತೆ ಅಭಿವೃದ್ಧಿಗಾಗಿ  ಸರ್ಕಾರ ವಿಶೇಷ ಕೋಟಾದಡಿ ಕೋಟ್ಯಾಂತರ ರೂಪಾಯಿ ಹಣ ನೀಡಿದೆ‌. ಆದ್ರೆ ಚಿತ್ರದುರ್ಗದಲ್ಲಿ ನಿರ್ಮಾಣವಾಗಿರುವ ಕಳಪೆ ರಸ್ತೆಗಳು ಬಿಲ್ ಆಗುವ ಮುನ್ನವೇ ಬಿರುಕು ಬಿಟ್ಟಿವೆ. ಹೀಗಾಗಿ ಆ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದ್ದು, ಸರ್ಕಾರದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಸೆ.14) : ರಸ್ತೆ ಅಭಿವೃದ್ಧಿಗಾಗಿ  ಸರ್ಕಾರ ವಿಶೇಷ ಕೋಟಾದಡಿ ಕೋಟ್ಯಾಂತರ ರೂಪಾಯಿ ಹಣ ನೀಡಿದೆ‌. ಆದ್ರೆ ಚಿತ್ರದುರ್ಗದಲ್ಲಿ ನಿರ್ಮಾಣವಾಗಿರುವ ಕಳಪೆ ರಸ್ತೆಗಳು ಬಿಲ್ ಆಗುವ ಮುನ್ನವೇ ಬಿರುಕು ಬಿಟ್ಟಿವೆ. ಹೀಗಾಗಿ ಆ ರಸ್ತೆಗಳಲ್ಲಿ ಓಡಾಡುವ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದ್ದು, ಸರ್ಕಾರದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.

Latest Videos

undefined

ಒಂದ್ಕಡೆ ಬಿರುಕು ಬಿಟ್ಟ ರಸ್ತೆಗಳು, ಮತ್ತೊಂದೆಡೆ ರಸ್ತೆ ದಾಟಲು ಹರಸಾಹಸ ಪಡ್ತಿರುವ ವಾಹನ ಸವಾರರು. ಈ ದೃಶ್ಯಗಳು ಕಂಡುಬಂದಿದ್ದು,ಚಿತ್ರದುರ್ಗದ ಐಯುಡಿಪಿ‌ ಬಡಾವಣೆ, ಬ್ಯಾಂಕ್ ಕಾಲೋನಿ ಮತ್ತು ಕೆಳಗೋಟೆಯಲ್ಲಿ. ಹೌದು, ಸರ್ಕಾರದ ವಿಶೇಷ ಯೋಜನೆಯಡಿ 25 ಕೋಟಿಗು ಅಧಿಕ ಹಣವನ್ನು‌ ರಸ್ತೆ‌ಗಳ ಅಭಿವೃದ್ದಿಗಾಗಿ ಸರ್ಕಾರ  ನೀಡಿದೆ. ಆದ್ರೆ ಗುತ್ತಿಗೆದಾರರು ಹಾಗು ಅಧಿಕಾರಿಗಳು ಶಾಮೀಲಾಗಿ  ಚಿತ್ರದುರ್ಗ ನಗರದಾದ್ಯಂತ ಕಳಪೆ ಸಿಸಿ ರಸ್ತೆಗಳನ್ನು ನಿರ್ಮಾಣ ಮಾಡಿದ್ದಾರೆ. ಪರಿಣಾಮ,ರಸ್ತೆ ನಿರ್ಮಾಣವಾಗಿ ಒಂದು ವರ್ಷ ಕಳೆಯುವ ಮುನ್ನವೇ ಆ ರಸ್ತೆಗಳು ಬಿರುಕು ಬಿಟ್ಟಿವೆ‌.

 

ಬಿಕೆ ಹರಿಪ್ರಸಾದ್ ಹೇಳಿಕೆ ವಿರುದ್ದ ಕಾಗಿನೆಲೆ ಈಶ್ವರಾನಂದಪುರಿ ಶ್ರೀ ಆಕ್ರೋಶ

ರಸ್ತೆಯುದ್ದಕ್ಕು ಗುಂಡಿಗಳ ಸರಮಾಲೆ ಎದ್ದು ಕಾಣ್ತಿದೆ. ಇದರಿಂದಾಗಿ,ವಾಹನ ಸವಾರರಿಗೆ ಈ ರಸ್ತೆಗಳಲ್ಲಿ‌ಓಡಾಡಿದರೆ ಅಪಘಾತ ಕಟ್ಟಿಟ್ಟ ಬುತ್ತಿ‌ ಎನ್ನುವ ಆತಂಕ ಕಾಡುತ್ತಿದೆ. ಅಲ್ಲದೇ ವಾಹನ ಸವಾರರು ಹಾಗು ವಯಸ್ಸಾದ ವೃದ್ಧರು ಈ ರಸ್ತೆಗಿಳಿಯಲು ಒಮ್ಮೆ ಯೋಚಿಸುವಂತಾಗಿದ್ದು,ಕಳಪೆ ರಸ್ತೆಗಳಿಂದ ಸರ್ಕಾರದ‌ ಹಣ ನೀರಲ್ಲಿ ಹೋಮ‌ ಮಾಡಿದಂತಾಗಿದೆ. ಹೀಗಾಗಿ ಆಕ್ರೋಶಗೊಂಡಿರುವ ಸ್ಥಳೀಯರು, ನಗರಸಭೆ ಹಾಗು ಪಿಡಬ್ಲುಡಿ‌ ಅಧಿಕಾರಿಗಳು ಮತ್ತು  ಗುತ್ತಿಗೆದಾರರ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ‌. ಈ ರಸ್ತೆ ಅಭಿವೃದ್ಧಿ ಯೋಜನೆಗಳ  ಬಗ್ಹೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇನ್ನು ಈ ಬಗ್ಗೆ ಚಿತ್ರದುರ್ಗ ನಗರಸಭೆ‌ ಪೌರಾಯುಕ್ತರಾದ ರೇಣುಕ ಅವರನ್ನು ಕೇಳಿದ್ರೆ,ರಸ್ತೆ ಕಾಮಗಾರಿಯಲ್ಲಿ ಗೋಲ್ಮಾಲ್‌ ಆಗಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಹೀಗಾಗಿ ಡಿಸಿ ನೇತೃತ್ವದಲ್ಲಿ‌ತನಿಖಾ ಸಮಿತಿ ರಚಿಸಲಾಗಿದೆ.ಅಲ್ದೇ ಪಿಡಬ್ಲುಡಿ ಇಲಾಖೆ‌ ನಿರ್ಮಾಣ‌ ಮಾಡಿರುವ ರಸ್ತೆಗಳಿಗೆ ಅರ್ಧ ಹಣವನ್ನು ನೀಡಲಾಗಿದ್ದು, ಉಳಿದ‌‌ ಹಣವನ್ನು ತನಿಖೆ ಮುಗಿದು,ವರದಿ ಬರುವವರೆಗೆ ತಡೆ ಹಿಡಿದು, ಸಮರ್ಪಕ ರಸ್ತೆ ನಿರ್ಮಾಣ ಮಾಡಿಸುವುದಾಗಿ ಭರವಸೆ  ತಿಳಿಸಿದ್ದಾರೆ.

ಏನೇನೋ ಮಾತಾಡಿ ಕಾಂಗ್ರೆಸ್ ವರ್ಚಸ್ಸು ಹಾಳುಮಾಡ್ಬೇಡಿ: ಹರಿಪ್ರಸಾದ್‌ಗೆ ಸುರೇಶ್ ಬಾಬು ಸಲಹೆ

ಒಟ್ಟಾರೆ ಚಿತ್ರದುರ್ಗದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ, ವಿಶೇಷ   ಅನುಧಾನದ್ಲಿ ಕಳಪೆ ರಸ್ತೆ ನಿರ್ಮಾಣದ ಆರೋಪ‌ ಕೇಳಿ ಬಂದಿದೆ. ಹೀಗಾಗಿ ಸಾರ್ವಜನಿಕರು ಅಪಘಾತಕ್ಕೀಡಾಗಿ ಯಾತನೆ ಅನುಭವಿಸುವಂತಾಗಿದೆ. ಇನ್ನಾದ್ರು ನಿಯಮದಂತೆ‌ ರಸ್ತೆ ನಿರ್ಮಾಣ‌ ಮಾಡಿದ ಬಳಿಕ ನಿರ್ವಹಣೆ ಮಾಡಬೇಕಾದ‌ ಗುತ್ತಿಗೆದಾರರು ಮತ್ತು‌ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ, ಸುಸಜ್ಜಿತ‌ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ‌ಕೈಗೊಳ್ಳಬೇಕಿದೆ.

click me!