ಚಿತ್ರದುರ್ಗದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಲ್ಲಾ ಪೊಲೀಸರು ಸಿಸಿ ಕ್ಯಾಮರಾ ಅಳವಡಿಕೆ ಮೂಲಕ ಅಪಘಾತಗಳನ್ನು ತಗ್ಗಿಸಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಜೂ.15): ಮಧ್ಯ ಕರ್ನಾಟಕದ ಪ್ರಮುಖ ಜಿಲ್ಲೆ ಚಿತ್ರದುರ್ಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಹೀಗಾಗಿ ವರ್ಷಕ್ಕೆ 400 ಅಪಘಾತ ಸಂಭವಿಸಿ ಸಾವು ನೋವುಗಳಾಗ್ತಿದ್ದವು. ಇದರಿಂದಾಗಿ ಎಚ್ಚೆತ್ತ ಪೊಲೀಸ್ ಇಲಾಖೆ ವಿನೂತನ ಪ್ರಯೋಗ ಮಾಡಿದೆ. ಆ ಮೂಲಕ ಆಕ್ಸಿಡೆಂಟ್ ಗಳಿಗೆ ಬ್ರೇಕ್ ಹಾಕಿದೆ. ಆ ಪ್ರಯೋಗ ಇತರರಿಗೆ ಮಾದರಿ ಎನಿಸಿದೆ.
ನೋಡಿ ಹೀಗೆ ಹೆದ್ದಾರಿಗಳಲ್ಲಿ ಅಳವಿಡಿಸಿರೋ ಸಿಸಿಟಿವಿಗಳು ಹಾಗೂ ಕ್ಯಾಮರಾದಲ್ಲಿ ಸೆರೆಯಾಗ್ತಿರೋ ವಾಹನಗಳ ಚಲನವಲನ. ಈ ದೃಶ್ಯಗಳು ಕಂಡು ಬಂದಿದ್ದು,ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ, ಹೌದು, ಚಿತ್ರದುರ್ಗ ಒಳಗೆ ಹಾದು ಹೋಗಿರುವ ಮೂರು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಾಕಷ್ಟು ಅಪಘಾತಗಳು ಸಂಭವಿಸ್ತಿದ್ವು. ಕನಿಷ್ಟ ಅಂದ್ರೂ ವರ್ಷಕ್ಕೆ 400 ಜನ ಸಾವನ್ನಪ್ಪಿದ್ದರು. ಹೀಗಾಗಿ ಚಿತ್ರದುರ್ಗಜಿಲ್ಲಾ ಪೊಲೀಸ್ ವರಿಷ್ಠಾಧಿಕಾರು ಪರಶುರಾಮ್ ನೇತೃತ್ವದಲ್ಲಿ ಹೆದ್ದಾರಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ.
PSI Scam ಆರೋಪಿಗಳನ್ನು ಬಿಟ್ಟು ನೇಮಕಾತಿ ಮುಂದುವರೆಸಲು ಸಾಧ್ಯವೇ? ಹೈಕೋರ್ಟ್ ಪ್ರಶ್ನೆ
ಅಜಾಗರೂಕ ಚಾಲನೆ ಕಂಡುಬಂದಲ್ಲಿ ಕೂಡಲೇ ತಡೆಯಲು ಅನುಕೂಲ: ಆ ರಾಷ್ಟ್ರೀಯ ಹೆದ್ದಾರಿಗಳಲ್ಲಿದ್ದ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಆ ಸ್ಥಳದಲ್ಲಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬರವವರ ದೃಶ್ಯಗಳನ್ನು ಸೆರೆ ಹಿಡಿದು ಆ ಚಾಲಕರಿಗೆ ಟೋಲ್ ಗಳಲ್ಲಿ ದಂಡ ವಿಧಿಸಲಾಗ್ತಿದೆ. ಈ ಮೂಲಕ ಹೆದ್ದಾರಿಯಲ್ಲಿ ಆಗ್ತಿದ್ದ ಅಪಘಾತಗಳಿಗೆ ಬ್ರೇಕ್ ಹಾಕಲಾಗ್ತಿದೆ. ಈ ಕಾರ್ಯದಿಂದಾಗಿ ಹೆದ್ದಾರಿಗಳಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಚಿತ್ರದುರ್ಗದಿಂದ ಹಾವೇರಿಯವರೆಗೆ ಈ ಸಿಸಿಟಿವಿ ಅಳವಡಿಸಿರೋದು ಜನ ಸಾಮಾನ್ಯರ ಸಾವು ನೋವು ತಡೆಯಲು ಮುಂದಾಗಿರುವ ಚಿತ್ರದುರ್ಗ ಪೊಲೀಸರ ಕಾರ್ಯಕ್ಕೆ ಚಿತ್ರದುರ್ಗ ನಾಗರೀಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ರೀತಿ ನಗರದಲ್ಲೂ ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಿ ಅವುಗಳ ಮೇಲೂ ಪೊಲೀಸರು ನಿಗಾ ವಹಿಸಿ ಸೂಕ್ತ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ
ಸಾವಿನ ಸಂಖ್ಯೆ ತಗ್ಗಿಸಲು ಕ್ರಮ: ಒಟ್ಟಾರೆ ಹೆದ್ದಾರಿಗಳಲ್ಲಿ ಅಪಘಾತಕ್ಕೆ ಬ್ರೇಕ್ ಹಾಕಲು ಸಿಸಿಟಿವಿ ಅಳವಡಿಸಲಾಗಿದೆ. ಪ್ರತಿವರ್ಷ ಹೆದ್ದಾರಿಯಲ್ಲಿ ನೂರಾರು ಜೀವಗಳು ಅಪಘಾತದಿಂದ ಬಲಿಯಾಗುತ್ತಿವೆ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಚಿತ್ರದುರ್ಗ ಪೊಲೀಸ್ ಅಧಿಕಾರಿಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಕೇವಲ ನಗರದ ರಸ್ತೆಗಳನ್ನು ಮಾತ್ರ ನೋಡಿಕೊಂಡು ಸುಮ್ಮನಿರದೇ ಹೆದ್ದಾರಿಗಳಲ್ಲಿಯೂ ಸುರಕ್ಷತೆಗೆ ಮುಂದಾಗಿದ್ದಾರೆ. ಹೀಗಾಗಿ ವಾಹನ ಚಾಲಕರು ಅಜಾಗರೂಕತೆ ಹಾಗು ಅತಿ ವೇಗವಾಗಿ ಬರೋದು ಕಡಿಮೆಯಾದ ಪರಿಣಾಮ ಸಾವು ನೋವುಗಳ ಸಂಖ್ಯೆ ತಗ್ಗುತ್ತಿದೆ. ಈ ಕಾರ್ಯ ಇತರೆ ಜಿಲ್ಲೆಗಳಿಗೂ ಮಾದರಿ ಎನಿಸಿದೆ.
BBMP Scam: 118 ಕೋಟಿ ರೂ. ಹಗರಣ ಮಾಡಿದ ಬಿಬಿಎಂಪಿ ಇಂಜಿನಿಯರ್‌ಗಳು ಸಸ್ಪೆಂಡ್
ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಳೆದೊಂದು ತಿಂಗಳ ಅಫಘಾತ ಹೆಚ್ಚಳ: ಇನ್ನು ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವ ಸಂಖ್ಯೆಯಲ್ಲಿ ತೀವ್ರ ಹೆಚ್ಚಾಗುತ್ತಿವೆ. ಈ ಪೈಕಿ ಕಾರುಗಳನ್ನು ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಹೋಗಿ ಬಸ್, ಲಾರಿ, ಬೈಕ್ ಹಾಗೂ ಮತ್ತಿತರ ವಾಹನಗಳಿಗೆ ಗುದ್ದುತ್ತಿದ್ದಾರೆ. ಇದರಿಂದ ತಮ್ಮ ಪ್ರಾಣದ ಜೊತೆಗೆ, ವಾಹನದಲ್ಲಿರುವ ಇತರೆ ಪ್ರಯಾಣಿಕರು ಹಾಗೂ ಎದುರಿನ ವಾಹನ ಸವಾರರೂ ಕೂಡ ಪ್ರಾಣಹಾನಿಗೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ, ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ, ವಿಜಯಪುರ, ಮೈಸೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಚಿಕ್ಕೋಡಿ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಪಘಾತ ಮತ್ತು ಸಾವಿನ ಸಂಖ್ಯೆ ಹೆಚ್ಚಾಗಿದೆ. ಆದರೆ, ಚಿತ್ರದುರ್ಗದಲ್ಲಿ ಪೊಲೀಸರ ಕಾರ್ಯಾಚರಣೆಯಿಂದ ಅಪಘಾತಗಳ ಸಂಖ್ಯೆ ಕೊಂಚ ತಗ್ಗಿದೆ.