ಚಿತ್ರದುರ್ಗ: ಶಾಸಕರ ನೇತೃತ್ವದಲ್ಲಿ ಸಂತ್ರಸ್ತರಿಗೆ ವಸ್ತುಗಳ ಸಂಗ್ರಹ

By Kannadaprabha NewsFirst Published Aug 13, 2019, 9:11 AM IST
Highlights

ನೆರೆ ಸಂತ್ರಸ್ತರಿಗೆ ನೆವಾಗುವಂತೆ ಶಾಸಕ ಟಿ.ರಘುಮೂರ್ತಿ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಹೇಳಿದರು.  ಪ್ರತಿಯೊಬ್ಬರೂ ನಮ್ಮಲ್ಲಿರುವ ಆಹಾರ ಪದಾರ್ಥಗಳು ಹಾಗೂ ವಸ್ತುಗಳನ್ನು ನೀಡಿ ಸಂಕಷ್ಟದ ಬದುಕಿನಲ್ಲಿ ಹೊಸ ಆಶಾಕಿರಣ ಹುಟ್ಟುಹಾಕಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಿತ್ರದುರ್ಗ(ಆ.13): ಹಲವು ವರ್ಷಗಳಿಂದ ಬಡತನದ ಮಧ್ಯೆಯೂ ಸಂತೃಪ್ತ ಬದುಕು ಕಟ್ಟಿಕೊಂಡಿದ್ದ ಉತ್ತರ ಕರ್ನಾಟಕ ಜನತೆ ಇಂದು ಸಂಕಷ್ಟಕ್ಕೆ ಸಿಲುಕಿದ್ದು ಅವರ ನೋವಿಗೆ ಸ್ಪಂದಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ದಯವಿಟ್ಟು ಪ್ರತಿಯೊಬ್ಬರೂ ನಮ್ಮಲ್ಲಿರುವ ಆಹಾರ ಪದಾರ್ಥಗಳು ಹಾಗೂ ವಸ್ತುಗಳನ್ನು ನೀಡಿ ಸಂಕಷ್ಟದ ಬದುಕಿನಲ್ಲಿ ಹೊಸ ಆಶಾಕಿರಣ ಹುಟ್ಟುಹಾಕಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಪ್ರವಾಹದಲ್ಲಿ ಕೊಚ್ಚಿ ಹೋಯ್ತು ವಿದ್ಯಾರ್ಥಿನಿ ಕನಸು!

ಚಳ್ಳಕೆರೆಯ ಮಹದೇವಿ ರಸ್ತೆಯಲ್ಲಿರುವ ಹಲವು ಅಂಗಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ, ಉತ್ತರ ಕರ್ನಾಟಕ ನೆರೆ ಪರಿಸ್ಥಿತಿ ಚಳ್ಳಕೆರೆ ಕ್ಷೇತ್ರದ ಜನರನ್ನು ದಂಗು ಬಡಿಸಿದೆ. ಪ್ರತಿಯೊಬ್ಬರೂ ಸಹ ಸ್ವಯಂ ಪ್ರೇರಿತರಾಗಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಪದಾರ್ಥ, ಹಣ ಹಾಗೂ ವಸ್ತುಗಳನ್ನು ನೀಡುತ್ತಿದ್ದಾರೆ. ಮಳೆ, ಬೆಳೆ ಇಲ್ಲದಿದ್ದರೂ ಉತ್ತರ ಕರ್ನಾಟಕ ಸಹೋದರ, ಸಹೋದರಿಯರಿಗೆ ನೆರವು ನೀಡುವಲ್ಲಿ ಇಲ್ಲಿನ ಜನತೆ ತಮ್ಮ ಹೃದಯ ವೈಶಾಲ್ಯತೆ ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ತಾಪಂ ಅಧ್ಯಕ್ಷ ವಿಜಯಲಕ್ಷ್ಮಿ, ತಾಪಂ ಸದಸ್ಯರಾದ ವೀರೇಶ್‌, ಎಚ್‌.ಆಂಜನೇಯ, ರಂಜಿತಾ, ಟಿ.ಗಿರಿಯಪ್ಪ, ನಗರಸಭಾ ಸದಸ್ಯರಾದ ವೈ.ಪ್ರಕಾಶ್‌, ಟಿ.ಮಲ್ಲಿಕಾರ್ಜುನ, ಚಳ್ಳಕೆರೆಯಪ್ಪ, ಹೊಯ್ಸಳ ಗೋವಿಂದ, ವಿರೂಪಾಕ್ಷಪ್ಪ, ಹಿರಿಯ ಮುಖಂಡ ಟಿ. ಪ್ರಭುದೇವ್‌, ಸುಮಾ ಭರಮಣ್ಣ, ಸುಮಾ ಆಂಜನೇಯ, ಬ್ಲಾಕ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪಿ. ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಆರ್‌. ಪ್ರಸನ್ನಕುಮಾರ್‌, ಚೇತನ್‌ ಕುಮಾರ್‌, ಎಸ್‌.ಎಚ್‌. ಸೈಯದ್‌, ಎನ್‌. ಮಂಜುನಾಥ, ಅನ್ವರ್‌ ಮಾಸ್ಟರ್‌, ರೆದ್ದಿಹಳ್ಳಿ ಶಿವಣ್ಣ, ಎಚ್‌. ವೀರಭದ್ರಪ್ಪ, ಗೀತಾಬಾಯಿ, ಸರಸ್ವತಮ್ಮ, ಲಕ್ಷ್ಮಿದೇವಿ, ವೆಂಕಟೇಶ್‌, ಡಿ.ಕೆ. ಕಾಟಯ್ಯ, ಸಿ.ಟಿ. ಶ್ರೀನಿವಾಸ್‌, ಭರಮಣ್ಣ, ಸ್ವಾಮಿ, ತಿಪ್ಪೇಸ್ವಾಮಿ, ಹನುಮಂತಪ್ಪ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

click me!