Murugha Math incident: ಮಠ-ಮಾನ್ಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ - ಸಾಹಿತಿ ಕು.ವೀರಭದ್ರಪ್ಪ

By Kannadaprabha News  |  First Published Sep 4, 2022, 1:26 PM IST
  • ಚಿತ್ರದುರ್ಗ ಘಟನೆಯಿಂದ ಮಠ-ಮಾನ್ಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ
  • ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ
  • ಮಠಗಳಿಗೆ ಸ್ವಾಮಿಗಳಾಗುವವರು ವಿವಾಹಿತರು ಆಗುವುದು ಒಳ್ಳೆಯದು

ಹರಪನಹಳ್ಳಿ (ಸೆ.4) : ಚಿತ್ರದುರ್ಗ ಮಠದಲ್ಲಿ ನಡೆದಿರುವ ಘಟನೆ ರಾಜ್ಯದ ಯಾವ ಮಠದ ಸ್ವಾಮಿಗಳಿಗೂ ಆಗಬಾರದು. ಇದರಿಂದ ಮಠಮಾನ್ಯಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ(kumbar Veerabhadrappa) ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಾಹಿತಿ ಡಿ. ರಾಮನಮಲಿ ಅವರ ನಾನು ಕ್ವಾರಂಟೈನ್‌ ಆದದ್ದು ಪ್ರಬಂಧ ಸಂಕಲನ ಬಿಡುಗಡೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Hinduism: ನಾನು ಹಿಂದೂ ಅಲ್ಲ ಭಾರತೀಯ: ಕುಂ. ವೀರಭದ್ರಪ್ಪ

Tap to resize

Latest Videos

undefined

ಚಿತ್ರದುರ್ಗ ಮಠ(Chitradurga Murugh mutt)ದ ಬಸವರಾಜನ್‌(Basavarajan) ಹಾಗೂ ಶ್ರೀಗಳು(Murugh sharana) ಇಬ್ಬರು ಬಾಲ್ಯ ಸ್ನೇಹಿತರಾಗಿದ್ದು, ಪರಸ್ಪರ ಒಪ್ಪಂದದ ಮೇಲೆ ಮಠ ನಡೆಸುತ್ತಿದ್ದರು. ಅವರ ನಡುವೆ ಬಾಂಧವ್ಯ ಉತ್ತಮವಾಗಿತ್ತು, ಸೌಭಾಗ್ಯಮ್ಮ ಜಿಪಂ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿದೆ. ಅಲ್ಲಿಂದ ಆಡಳಿತಾಧಿಕಾರಿ ಶ್ರೀಗಳ ವಿರುದ್ಧ ಒಳಗೊಳಗೆ ತಂತ್ರ ರೂಪಿಸುತ್ತ ಬಂದಿದ್ದರು ಎನ್ನುವುದು ಜನರ ಅಭಿಪ್ರಾಯವಾಗಿದ್ದು, ಸ್ವಾಮಿಗಳಾದವರ ಕೈ, ಬಾಯಿ, ಕಚ್ಚೆ, ಶುದ್ಧವಾಗಿರಬೇಕು. ಈ ರೀತಿ ಘಟನೆ ನಡೆದಿರುವುದು ನಮಗೆ ಅನುಮಾನ ಮೂಡಿಸಿದೆ. ಆದರೂ ದಲಿತ ಮಗುವಿನ ಮೇಲೆ ಲೈಂಗಿಕ ಹಲ್ಲೆಯಾಗಿರುವುದನ್ನು ನಾನು ಖಂಡಿಸುತ್ತೇನೆ ಎಂದರು.

ನ್ಯಾಯ, ಅನ್ಯಾಯವನ್ನು ಸರ್ಕಾರ, ನ್ಯಾಯಾಂಗ ಪರಿಶೀಲಿಸಿ ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ನಾಡಿನ ಲಿಂಗಾಯಿತ ಸಮುದಾಯದ ದೊಡ್ಡ ಮಠ ಇದಾಗಿದೆ, ಶ್ರೀಗಳು ವಿಚಾರವಾದಿಗಳು, ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದವರು, ಉತ್ತಮ ವಾಗ್ಮಿಗಳು, ಈ ಕಾರಣಕ್ಕಾಗಿ ಜಾತಿವಾದಿಗಳು ಮತ್ತು ಸನಾತನವಾದಿಗಳು ಸೇರಿ ನಡೆಸಿರಬಹುದಾದ ಸಂಚು ಎನ್ನುವುದು ಮೇಲ್ನೋಟಕ್ಕೆ ಕಾಣುತ್ತದೆ. ಇದು ಎಷ್ಟುವಾಸ್ತವೋ ಗೊತ್ತಿಲ್ಲ. ರಾಜ್ಯದ ಮುರಾಘಾಮಠಕ್ಕೆ ತಗುಲಿರುವ ದೊಡ್ಡ ಕಪ್ಪುಚುಕ್ಕೆ ಇದಾಗಿದೆ. ಇದು ಖೇದದ ಸಂಗತಿಯಾಗಿದೆ ಎಂದ ಬೇಸರ ವ್ಯಕ್ತಪಡಿಸಿದರು. ಮಠಗಳಿಗೆ ಸ್ವಾಮಿಗಳಾಗುವವರು ವಿವಾಹಿತರು ಆಗುವುದು ಒಳ್ಳೆಯದು. ಮುಂದಿನ ದಿನಗಳಲ್ಲಿ ಮಠಗಳಿಗೆ ಕುಟುಂಬ ನಿಯಂತ್ರಣಕ್ಕೆ ಒಳಪಟ್ಟಸ್ವಾಮಿಗಳನ್ನು ನೇಮಿಸಬೇಕು ಎಂದರು.

Mysore ಹಿಂದೂ ಧರ್ಮ ಮಾತ್ರ ಉಳಿಯಬೇಕು ಎನ್ನುವ ನಿಟ್ಟಿನಲ್ಲಿ ಕೆಲಸವಾಗುತ್ತಿದೆ

ಸಾಹಿತಿ, ಪತ್ರಕರ್ತ ಪಿ.ಸಾಯಿನಾಥ ಅವರು ಮಠದಿಂದ ಸ್ವೀಕರಿಸಿದ ಬಸವಶ್ರೀ ಪ್ರಶಸ್ತಿಯನ್ನು ವಾಪಸ್‌ ನೀಡಲು ಮುಂದಾಗಿದ್ದಾರೆ. ಅದನ್ನು ಸ್ವಾಮಿಗಳು ನೀಡಿಲ್ಲ, ಮಠ ನೀಡಿದೆ, ವಾಪಸ್‌ ನೀಡುವುದಾದರೆ ಸಂತ್ರಸ್ತ ಮಕ್ಕಳಿಗೆ ಪ್ರಶಸ್ತಿ ಹಣ ನೀಡಲಿ, ಇದು ಅವರ ಶಿಕ್ಷಣಕ್ಕೆ ನೆರವಾಗಲಿದೆ ಎಂದರು.

ಜಾತಿ-ಧರ್ಮ ಮಧ್ಯ ಸಂಘರ್ಷವಾಗಿ ಭಯದ ವಾತಾವರಣ ನಿರ್ಮಾಣ: ಕುಂ.ವೀ.

ದಯೆ ಇಲ್ಲದ ಧರ್ಮದ ಬದಲಾಗಿ, ಭಯವಿಲ್ಲದ ಧರ್ಮ ಯಾವುದಯ್ಯ ಎನ್ನುವ ಹಾಗೆ ದೇಶದಲ್ಲಿ ಜಾತಿ, ಧರ್ಮದ ನಡುವೆ ಸಂಘರ್ಷ ಉಂಟಾಗಿ ಭಯದ ವಾತಾವರಣ ಆವರಿಸಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸಾಹಿತಿ ಡಿ. ರಾಮನಮಲಿ ಅವರ ‘ನಾನು ಕ್ವಾರಂಟೈನ್‌ ಆದದ್ದು’ ಪ್ರಬಂಧ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಏನಾದರೂ ಮಾತನಾಡಿದರೆ ಪ್ರಕರಣ ದಾಖಲಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ದೇಶ ಎಲ್ಲಿದೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದರು. ಇಂದು ಪಠ್ಯದಲ್ಲಿ ಯಾವುದೋ ವ್ಯಕ್ತಿ ಅಂಡಮಾನ ಜೈಲ್‌ನಿಂದ ಹಕ್ಕಿಯ ಮೇಲೆ ಹಾರಿ ಹೋಗುತ್ತಾರೆ ಎಂಬುದು ಸೇರಿಸಿದ್ದಾರೆ. ಆತನ ಹೆಸರು ಹೇಳಿದರೆ ಬೆದರಿಕೆ ಪತ್ರಗಳು ಬರುತ್ತಿವೆ.ಈಗಾಗಲೇ ನನಗೆ 7 ಬೆದರಿಕೆ ಪತ್ರಗಳು ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಹೆಚ್ಚು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದರೆ ಖಾಸಗಿ ಶಾಲಾ-ಕಾಲೇಜುಗಳಿಗೆ ಭವಿಷ್ಯವಿಲ್ಲದಂತೆ ಮಾಡಬಹುದು ಎಂದ ಅವರು, ಲೇಖಕರು ಬರೆದ ಪುಸ್ತಕಗಳನ್ನು ಪ್ರತಿಯೊಬ್ಬರು ಖರೀದಿಸಿ ಓದಿದಾಗ ಮಾತ್ರ ಪ್ರಕಟಿಸಿದ ಪುಸ್ತಕಗಳಿಗೆ ಬೆಲೆ ಸಿಕ್ಕಂತಾಗುತ್ತದೆ. ಓದುಗರು ಸ್ಥಳೀಯ ಸಾಹಿತಿಗಳಿಗೆ ಬೆಂಬಲಿಸಬೇಕು ಎಂದು ಸಲಹೆ ನೀಡಿದರು. ಸಾಹಿತಿ ಡಿ.ರಾಮನಮಲಿ ಬರೆದಿರುವ ಕ್ವಾರಂಟೈನ್‌ ಪದ ಅನೇಕ ಅರ್ಥಗಳನ್ನು ಕೊಡುತ್ತದೆ. ಅದು ಬಹಳ ಮಾರಣಾಂತಿಕವಾಗಿರುವ ರೋಗದ ಬಗ್ಗೆ ತಿಳಿಸುವ ಪದ. ಕೊರೋನಾ ಸಂದರ್ಭದಲ್ಲಿ ಕ್ವಾರಂಟೈನ್‌ನಲ್ಲಿ ಹೋದರು ಎನ್ನುವ ಮಾತುಗಳನ್ನು ಕೇಳಿದ್ದು, ಅತ್ಯಂತ ಬೀಭತ್ಸಕಾರಿಯಾದ ಘಟನೆ, ಜೀವನದಲ್ಲಿ ಮರೆಯಲಾಗದ್ದು ಎಂದು ಪುಸ್ತಕದ ಬಗ್ಗೆ ಬಣ್ಣಿಸಿದರು.

ಲೇಖಕರಾದವರು ಸಾಮಾಜಿಕ ವೈರುಧ್ಯಗಳನ್ನು ಮತ್ತು ಸಮಕಾಲೀನ ತಲ್ಲಣಗಳನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ, ಬಸವಣ್ಣನ ಅನುಯಾಯಿ ಒಬ್ಬ ಮಠಾಧೀಶ ಲೈಂಗಿಕವಾಗಿ ಮಕ್ಕಳನ್ನು ಶೋಷಣೆ ಮಾಡುತ್ತಾರೆ ಎಂದರೆ ಯೋಚಿಸಬೇಕಾಗಿದೆ. ನಾವು ಯಾವ ಸ್ಥಿತಿಯಲ್ಲಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು. ಲೇಖಕ ಡಿ.ರಾಮನಮಲಿ ಬೆಂಗಳೂರಿನ ರೇಡಿಯೋ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ. ಗಿರಿಧರ ಹವಾಲ್ದಾರ್‌ ಹಾಗೂ ಅಮೇರಿಕದ ನ್ಯೂಯಾರ್ಕ್ನ ಬ್ರಾಕ್‌ಪೋರ್ಚ್‌ ವಿವಿ ವಿಶ್ರಾಂತ ಕುಲಪತಿ ಡಾ. ಟಿ. ಮಹಾದೇವರಾವ್‌ ಅವರು ನಾನು ಕ್ವಾರಂಟೈನ್‌ ಆದದ್ದು ಪುಸ್ತಕ ಕುರಿತು ಮಾತನಾಡಿದರು.

click me!