ರಾಜ್ಯದಲ್ಲಿ ಅದೆಷ್ಟೋ ಸರ್ಕಾರಗಳು ಅಧಿಕಾರಕ್ಕೆ ಬಂದವು ಹೋದವು. ಆದರೆ ಕೋಟೆನಾಡಿನ ಮೆಡಿಕಲ್ ಕಾಲೇಜು ಕನಸು ಮಾತ್ರ ಕನಸಾಗಿಯೇ ಉಳಿದಿತ್ತು. ಅಂತೂ ಇಂತೂ ಈ ವರ್ಷದಿಂದ ಮೆಡಿಕಲ್ ಕಾಲೇಜು ಅಡ್ಮಿಷನ್ ಪ್ರಕ್ರಿಯೆ ಆರಂಭವಾಗಿದ್ದು, ಕಟ್ಟಡ ಕಾಮಗಾರಿ ಕೂಡ ಚುರುಕಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.27) : ರಾಜ್ಯದಲ್ಲಿ ಅದೆಷ್ಟೋ ಸರ್ಕಾರಗಳು ಅಧಿಕಾರಕ್ಕೆ ಬಂದವು ಹೋದವು. ಆದರೆ ಕೋಟೆನಾಡಿನ ಮೆಡಿಕಲ್ ಕಾಲೇಜು ಕನಸು ಮಾತ್ರ ಕನಸಾಗಿಯೇ ಉಳಿದಿತ್ತು. ಅಂತೂ ಇಂತೂ ಈ ವರ್ಷದಿಂದ ಮೆಡಿಕಲ್ ಕಾಲೇಜು ಅಡ್ಮಿಷನ್ ಪ್ರಕ್ರಿಯೆ ಆರಂಭವಾಗಿದ್ದು, ಕಟ್ಟಡ ಕಾಮಗಾರಿ ಕೂಡ ಚುರುಕಾಗಿದೆ.
undefined
ಕಳೆದ ಐದು ವರ್ಷಗಳಲ್ಲಿ ರಾಜ್ಯವನ್ನಾಳಿದ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರ,ತಮ್ಮ ಅಧಿಕಾರದ ಅವಧಿಯೊಳಗೆ ಕೋಟೆನಾಡು ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು(Chitradurga medical collage) ನಿರ್ಮಾಣ ಮಾಡುತ್ತೇವೆಂಬ ಭರವಸೆ ನೀಡಿದ್ದವು. ಮೆಡಿಕಲ್ ಕಾಲೇಜಿಗಾಗಿ ಬಿಜೆಪಿ ಸರ್ಕಾರದ ಸಿಎಂ ಹಾಗೂ ಸಚಿವರು ಸ್ಥಳವನ್ನು ಪರಿಶೀಲನೆ ಕೂಡ ನಡೆಸಿ, ಡೀನ್ ಅವರನ್ನು ಸಹ ನೇಮಿಸಿದ್ರು. ಆದ್ರೆ ಈವರೆಗೆ ಅದು ಈಡೇರಿರಲಿಲ್ಲ್. ಇದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ(Congress government) ಮೆಡಿಕಲ್ ಕಾಲೇಜು ಆರಂಭಿಸುವ ವಿಚಾರದಲ್ಲಿ ಫುಲ್ ಆಕ್ಟಿವ್ ಆಗಿದೆ. 2023 - 24 ನೇ ಸಾಲಿನ ಅಡ್ಮಿಷನ್ ಪ್ರಕ್ರಿಯೆ ಆರಂಭಿಸಿದೆ. NMC 150ವಿಧ್ಯಾರ್ಥಿಗಳ ಪ್ರವೇಶಾತಿಗೆ ಒಪ್ಪಿಗೆ ಸೂಚಿಸಿದ್ದೂ, ಈಗಾಗಲೇ KAE ಮೂಲಕ 26 ವಿದ್ಯಾರ್ಥಿಗಳ ಅಡ್ಮಿಷನ್ ಆಗಿದೆ. ಹೀಗಾಗಿ ಮೆಡಿಕಲ್ ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದ ಪರಿಣಾಮ ಗುಡ್ಡದರಂಗವನಹಳ್ಳಿ ಬಳಿಯ ದಾವಣಗೆರೆ ಜ್ಞಾನಗಂಗೊತ್ರಿ ವಿಶ್ವವಿದ್ಯಾನಿಲಯದ ಕಟ್ಟಡದಲ್ಲಿ ತಾತ್ಕಲಿಕವಾಗಿ ಮೆಡಿಕಲ್ ಕಾಲೇಜು ಆರಂಭಿಸಲು ಸರ್ಕಾರ ಮುಂದಾಗಿದ್ದು, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣಪ್ರಕಾಶ ಪಾಟೀಲ್(Minister sharanaprakash patil) ಅಧಿಕಾರಿಗಳೊದಿಗೆ ನಿನ್ನೆ ಸಂಜೆ ಸಭೆ ನಡೆಸಿ, ಸ್ಥಳ ಪರಿಶೀಲನೆ ನಡೆಸಿದರು.
ಕೋಟೆನಾಡು ಚಿತ್ರದುರ್ಗದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್ ಕಿರಿಕ್!
ಕಳೆದ ಹತ್ತು ವರ್ಷಗಳಿಂದಲೂ ಮೆಡಿಕಲ್ ಕಾಲೇಜು ಆರಂಭಿಸುವುದಾಗಿ ಜಿಲ್ಲೆಯ ಜನಪ್ರತಿನಿಧಿಗಳು ಪ್ರಚಾರ ಗಿಟ್ಟಿಸಿದ್ದಷ್ಟೇ ಬಂತು, ಸ್ಥಳದ ಬಗ್ಗೆ ಯಾವುದೇ ನಿರ್ಧಾರ ಆಗಿರಲಿಲ್ಲ. ಇದೀಗ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಈ ಗೊಂದಲಕ್ಕೆ ತೆರ ಎಳೆದಿದ್ದಾರೆ. ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಬಹುದಿನಗಳ ಕನಸಾಗಿದ್ದ ಕೋಟೆನಾಡಿನ ಮೆಡಿಕಲ್ ಕಾಲೇಜು ಕನಸು ನನಸಾಗಿದೆ. ಈಗಾಗಲೇ ಅಡ್ಮಿಷನ್ ಆರಂಭವಾಗಿದ್ದು,ಸ್ಥಳ ಕೂಡ ನಿಗದಿಯಾಗಿ ಕಟ್ಟಡದ ನೀಲನಕ್ಷೆ ಬಿಡುಗಡೆಯಾಗಿದ್ದು, ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ಸಂತಸಮನೆ ಮಾಡಿದೆ.
ಕೋಟೆನಾಡು ಚಿತ್ರದುರ್ಗದಲ್ಲಿ ಕೈಕೊಟ್ಟ ಮಳೆ, ಬರಪೀಡಿತ ಜಿಲ್ಲೆ ಘೋಷಣೆಗೆ ರೈತರ ಆಗ್ರಹ