ಚಿತ್ರದುರ್ಗವನ್ನೇ ಬೆಚ್ಚಿಬೀಳಿಸಿದ ಮಚ್ಚಿನೇಟು: ಬಸ್‌ ನಿಲ್ದಾಣದಲ್ಲಿ ಪತ್ನಿಯನ್ನು ಕೊಚ್ಚಿ ಹಾಕಿದ ಸೈಕೋ ಪತಿ

By Sathish Kumar KH  |  First Published Nov 22, 2023, 6:13 PM IST

ಪತ್ನಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಚಳ್ಳಕೆರೆ ಬಸ್‌ ನಿಲ್ದಾಣದಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಪತಿಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.


ವರದಿ- ಕಿರಣ್.ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ನ.22):
ಗಂಡ ಹೆಂಡತಿ ಜಗಳ ಉಂಡು ಮಲಗೋ ತನಕ ಎನ್ನುವ ಮಾತೊಂದಿದೆ. ಆದ್ರೆ ಚಳ್ಳಕೆರೆ ನಗರದ ನಡು ರಸ್ತೆಯಲ್ಲಿಯೇ ತನ್ನ ಪತ್ನಿಯನ್ನ ಗಂಡ ಮಚ್ಚಿನಿಂದ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ನಡೆದಿದೆ. ಈ ಕುರಿತು ವರದಿ ಇಲ್ಲಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಬುಧವಾರ ಬೆಳ್ಳಂಬೆಳಗ್ಗೆ ನಡು ರಸ್ತೆಯಲ್ಲಿ ತೀವ್ರ ರಕ್ತಸ್ರಾವದಿಂದ ನರಳಾಡ್ತಿರೋ ಮಹಿಳೆ. ಮತ್ತೊಂದೆಡೆ ಸ್ಥಳೀಯರಿಂದ ಗೂಸ ತಿಂತಿರೋ ಕಿರಾತರ ಯುವಕ. ಈ ದೃಶ್ಯಗಳು ಕಂಡು ಬಂದಿದೆ. ಚಳ್ಳಕೆರೆ ತಾಲ್ಲೂಕಿನ ಹೆಗ್ಗೆರು ಗ್ರಾಮದ ಆಶಾ ಹಾಗೂ ಆರೋಪಿ ಕುಮಾರಸ್ವಾಮಿಗೆ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಮದುವೆ ಆಗಿರುತ್ತದೆ. ಮದುವೆ ಆಗಿ ಮೊದಲೆರಡು ವರ್ಷ ಸಂಸಾರವನ್ನು ಚೆನ್ನಾಗಿಯೇ ನಡೆಸಿದ್ದ ಪಾಪಿ ಪತಿರಾಯ, ಎರಡು ವರ್ಷ ಕಳೆದ ಬಳಿಕ ತನ್ನ ಪತ್ನಿಗೆ ಸುಖಾ ಸುಮ್ಮನೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. 

Tap to resize

Latest Videos

undefined

ಪಿಎಸ್‌ಐ ಇಲ್ಲದೇ ಅನಾಥವಾದ ಬೆಂಗಳೂರು ಪೊಲೀಸ್ ಠಾಣೆ: ಗೃಹ ಸಚಿವರೇ ಎಲ್ಲಿದ್ದೀರಿ?

ಎಷ್ಟೇ ಆಗ್ಲಿ ಗಂಡ ಆದವನು ಇಂದಲ್ಲ ನಾಳೆ ಸರಿ ಹೋಗ್ತಾನೆ ಎಂದು ಹೆಂಡತಿ ಕೂಡ ಸಹಿಸಿಕೊಂಡು ಬಂದಿದ್ದಾಳೆ. ನಿತ್ಯ ಆರೋಪಿ ಕುಡಿದು ಮನೆಗೆ ಬಂದು ಪತ್ನಿ ಆಶಾಳಿಗೆ ಮಾನಸಿಕ ಹಿಂಸೆ ಕೊಟ್ಟು, ನಿತ್ಯ ಜಗಳ ಆಡ್ತಿದ್ದನಂತೆ. ಇದ್ರಿಂದ ಬೇಸತ್ತ ಆಶಾ ಇವನ ಸಹವಾಸವೇ ಬೇಡ ಎಂದು ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾಳೆ. ಅದರಂತೆ ಕಳೆದ ಒಂದು ವರ್ಷದಿಂದಲೂ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿತ್ತು. ಆದ್ರೆ ಇಂದು ಕೊನೆಯ ದಿನ ಆದೇಶ ಬರುವ ದಿನವಾಗಿತ್ತು. ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಆರೋಪಿ ಕುಮಾರಸ್ವಾಮಿ, ಪತ್ನಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಏಕಾಏಕಿ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದ್ರಿಂದಾಗಿ ಮಹಿಳೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾಳೆ. ಇಂತಹ ಪಾಪಿಗೆ ಕಠಿಣ ಶಿಕ್ಷೆಯೇ ವಿಧಿಸಬೇಕು ಎಂದು ಗಾಯಾಳು ತಂದೆ ಆಗ್ರಹಿಸಿದ್ದಾರೆ.

ಈ ಸೈಕೋ ಕುಮಾರಸ್ವಾಮಿ ಮದುವೆ ಆದ ಎರಡೇ ವರ್ಷಕ್ಕೆ ತನ್ನ ಹೆಂಡತಿ ಮೇಲೆ ಶೀಲ ಶಂಕಿಸಿ ಅನುಮಾನ ವ್ಯಕ್ತಪಡಿಸಿದ್ದನು. ಅದೇ ಉದ್ದೇಶಕ್ಕೆ ನಿತ್ಯ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸುತ್ತಿದ್ದನು. ಇದನ್ನೆಲ್ಲ ಮನಗಂಡು ಅವನು ನಮಗೆ ಬೇಡವೇ ಬೇಡ ಎಂದು ನಿರ್ಧರಿಸಿ ಕಾನೂನು ಮೊರೆ ಹೋಗಿದ್ದವು. ಕೋರ್ಟ್ ನಿಯಮದಂತೆ ಕೇಸ್ ಇದ್ದಾಗ ಬಂದು ಅವರ ಪಾಡಿಗೆ ಅವರು ಬಂದು ಹೋಗ್ತಿದ್ದರು. ಆದ್ರೆ ಇಂದು ಆದೇಶ ಅವರ ವಿರುದ್ದವೇ ಆಗಿ, ವಿಚ್ಚೇದನಕ್ಕೆ ಅವಕಾಶ ಕೊಡಲಿದೆ ಎನ್ನುವ ಒಂದೇ ಕಾರಣಕ್ಕೆ ತನ್ನ ಹೆಂಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಕೂಡಲೇ ಸ್ಥಳೀಯರು ಆರೋಪಿಯನ್ನು ಹಿಡಿದು ಧರ್ಮದೇಟು ನೀಡಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

'ಕುಮಾರ್‌ಸೋಮಿ ಕರೆಂಟ್ ಕಳ್ಳ' ಪೋಸ್ಟರ್ ಅಂಟಿಸಿದವ ಸಿಕ್ಬಿಟ್ಟ: ಪೆನ್‌ಡ್ರೈವ್‌ನಲ್ಲಿ ಸಾಕ್ಷಿ ಕೊಟ್ಟ ಜೆಡಿಎಸ್ ಮುಖಂಡರು

ಒಟ್ಟಾರೆ ತನ್ನ ಪೋಷಕರನ್ನು ಲೆಕ್ಕಸಿದೇ ಗಂಡನೇ ಸರ್ವಸ್ವ ಎಂದು ಬರುವ ಹೆಣ್ಣು ಮಕ್ಕಳಿಗೆ, ಕೆಲವು ಕಿರಾತಕರ ಗಂಡಂದಿರು ಈ ರೀತಿ ಹಲ್ಲೆ ನಡೆಸೋದು ನಿಜಕ್ಕೂ ದುರಂತ. ಇಂತಹ ರಣಹೇಡಿ ಖದೀಮರಿಗೆ ಕಾನೂನು ಕಠಿಣ ಶಿಕ್ಷೆಯನ್ನು ವಿಧಿಸಿ, ನೊಂದವರಿಗೆ ನ್ಯಾಯ ಒದಗಿಸಬೇಕಿದೆ.

click me!