ಕೊರೊನಾದ ಪಾಜಿಟಿವ್ ಪ್ರಕರಣಗಳಿಲ್ಲದೇ ಗ್ರೀನ್ ಝೋನಲ್ಲಿದ್ದ ಚಿತ್ರದುರ್ಗ ಜಿಲ್ಲೆಗೆ ಇದೀಗ ಗಡಿಗಳೇ ಗಂಡಾಂತದರವಾಗಿ ಪರಿಣಿಮಿಸಿದ್ದು ಭೀತಿ ಮೂಡಿಸಿವೆ.
ಚಿತ್ರದುರ್ಗ(ಏ.18): ಕೊರೊನಾದ ಪಾಜಿಟಿವ್ ಪ್ರಕರಣಗಳಿಲ್ಲದೇ ಗ್ರೀನ್ ಝೋನಲ್ಲಿದ್ದ ಚಿತ್ರದುರ್ಗ ಜಿಲ್ಲೆಗೆ ಇದೀಗ ಗಡಿಗಳೇ ಗಂಡಾಂತದರವಾಗಿ ಪರಿಣಿಮಿಸಿದ್ದು ಭೀತಿ ಮೂಡಿಸಿವೆ.
ಶುಕ್ರವಾರ ಹೊಸಪೇಟೆಯಲ್ಲಿ ಒಂದೇ ದಿನ ಆರು ಕೊರೊನಾ ಪಾಜಿಟಿವ್ ಪ್ರಕರಣ ವರದಿಯಾಗಿದ್ದರೆ, ಮತ್ತೊಂದು ಕಡೆ ಆಂಧ್ರದ ಗಡಿ ಅನಂತಪುರ ಜಿಲ್ಲೆಯಲ್ಲಿ ಗಂಟೆ ಓಬಯ್ಯನಹಟ್ಟಿಗ್ರಾಮದ ಮಹಿಳೆಗೆ ಕೊರೋನಾ ಪಾಜಿಟಿವ್ ಕಂಡು ಬಂದಿದೆ. ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮ ಹಾಗೂ ಆಂಧ್ರದ ಗಂಟೆ ಓಬಯ್ಯನಹಟ್ಟಿಗ್ರಾಮಕ್ಕೂ ಕೇವಲ ನಾಲ್ಕು ಕಿಮೀ ನಷ್ಟುಅಂತರವಿರುವುದು ಭೀತಿ ಇಮ್ಮಡಿಯಾಗಲು ಕಾರಣವಾಗಿದೆ.
ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ PSI..!
ಬಳ್ಳಾರಿ ಜಿಲ್ಲೆಯ ಹೊಸಪೇಟೆ ಚಿತ್ರದುರ್ಗದಿಂದ 135 ಕಿಮೀ ಅಂತರದಲ್ಲಿದ್ದರೂ ಸಂಚಾರ ಹಾಗೂ ಪ್ರಯಾಣದ ದೃಷ್ಟಿಯಿಂದ ವಿಶೇಷ ನಂಟು ಪಡೆದಿದೆ. ಚಿತ್ರದುರ್ಗದಿಂದ ವಿಜಯಪುರ, ಬಾಗಲಕೋಟೆ,ಮಹರಾಷ್ಟ್ರದ ಸೊಲ್ಲಾಪುರಕ್ಕೆ ಹೋಗಬೇಕಾದರೆ ಹೊಸಪೇಟೆ ಹಾದಿ ಕ್ರಮಿಸಲೇ ಬೇಕು. ಅದೇ ರೀತಿ ಹೊಸಪೇಟೆಯವರು ಬೆಂಗಳೂರಿಗೆ ಹೋಗಬೇಕಾದರೆ ಚಿತ್ರದುರ್ಗ ಸ್ಪರ್ಶಿಸಲೇಬೇಕು. ಹಾಗಾಗಿ ಹೊಸಪೇಟೆಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಇಮ್ಮಡಿಯಾಗುತ್ತಿರುವುದು ಸಹಜವಾಗಿಯೇ ಚಿತ್ರದುರ್ಗ ಜನರಲ್ಲಿ ಒಂದಿಷ್ಟುನೆಮ್ಮದಿ ಕೆಡಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿಗೆ ಅಂಟಿಕೊಂಡಂತಿರುವ ಮೊಳಕಾಲ್ಮುರು ತಾಲೂಕಿನ ದೇವಮುದ್ರ ಹೋಬಳಿಯ ರಾಂಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ಆಂತಕಕ್ಕೆ ಒಳಗಾಗಿದ್ದಾರೆ. ಬಳ್ಳಾರಿಯಲ್ಲಿ ಕೊರೋನಾ ಪ್ರಕರಣ ಬೆಳಕಿಗೆ ಬಂದ ಗುಗ್ಗರಹಟ್ಟಿಗ್ರಾಮ ತಾಲೂಕಿಗೆ ಕೆಲವೇ ಕೆಲವು ಕಿಮೀ ಅಂತರದಲ್ಲಿದೆ. ಹಾಗಾಗಿ ತಮ್ಮೇನಹಳ್ಳಿಯ ಬಳಿಯ ಚೆಕ್ ಪೋಸ್ಟ್ ಇನ್ನಷ್ಟುಬಿಗಿ ಗೊಳಿಸಬೇಕು. ಅಗತ್ಯ ವಾಹನಗಳ ಹೊರತು ಪಡಿಸಿ ಅನಗತ್ಯವಾಹನಗಳ ಓಡಾಟಕ್ಕೆ ಕಡಿವಾಣ ಹಾಕಬೇಕು ಎಂಬುದು ಈ ಭಾಗದ ಜನರ ಆಗ್ರಹ.
ಮಧ್ಯದಾರಿಯಲ್ಲೇ ಹೆರಿಗೆ, ತಾಯಿ ಮಗುವಿಗೆ ಮರುಜನ್ಮ ನೀಡಿದ ಬೆಂಗಳೂರಿನ ಡಾ. ರಮ್ಯ
ಚಳ್ಳಕೆರೆಯಿಂದ ಆಂಧ್ರಪ್ರದೇಶಕ್ಕೆ ಹೋಗಬೇಕಾದರೆ ಪರಶುರಾಂಪುರ ದಾಟಬೇಕು. ಜಾಜೂರು ಗ್ರಾಮದಿಂದ ಒಂದು ಮಾರ್ಗವಿದ್ದರೆ ಹಿರಿಯೂರು ಹರಿಯಬ್ಬೆ ಮೂಲಕವೂ ಆಂಧ್ರ ಪ್ರವೇಶಿಸಬಹುದಾಗಿದೆ. ಸಂಚಾರ ನಿರ್ಬಂಧಿಸುವುದ ಚಿತ್ರದುರ್ಗ ಪೊಲೀಸರಿಗೆ ಅನಿವಾರ್ಯವಾಗಿದ್ದು ಜೆಸಿಬಿ ಯಂತ್ರದ ಮೂಲಕ ಟ್ರೆಂಚ್ ಹೊಡೆದು ಕಂದಕಗಳ ಸೃಷ್ಟಿಸುತ್ತಿದ್ದಾರೆ. ಇದು ವಾಹನಗಳು ಗಡಿಯೊಳಗೆ ಪ್ರವೇಶಿಸದಂತೆ ಮಾಡುವಲ್ಲಿ ಸಫಲವಾಗಿದೆ.
ಲಾಕ್‌ಡೌನ್: ಮನೆ ಬಾಗಿಲಿಗೇ ಬರುತ್ತೆ ಎಟಿಎಂ
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಜಿಟಿವ್ ಪ್ರಕರಣಗಳಿಲ್ಲ. ಬಳ್ಳಾರಿ ಹಾಗೂ ಆಂಧ್ರ ಅನಂತಪುರ ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳು ಇರುವುದು ಸಹಜವಾಗಿಯೇ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲಾಡಳಿತ ಈಗಾಗಗಲೇ ಬಿಗಿ ಕ್ರಮಗಳ ಕೈಗೊಂಡಿರುವುದರಿಂದ ಜನತೆ ಭೀತಿಗೆ ಒಳಗಾಗುವುದುಬೇಡ. ಜಾಜೂರಿನ ಒಂದು ಕುಟುಂಬದ ಮೂವರ ಗಂಟಲು ಮಾದರಿ ಪಡೆದು ಈಗಾಗಲೇ ಪ್ರಯೋಗಾಲಯಕ್ಕೆ ಕಳಿಸಲಾಗಿದೆ . ಜಾಜೂರು ಸುತ್ತ ಐದು ಕಿ.ಮೀ ವ್ಯಾಪ್ತಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.