ಚಿತ್ರದುರ್ಗ: ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಅಪ್ಪರಸನಹಳ್ಳಿ ಗ್ರಾಮಸ್ಥರ ಆಗ್ರಹ

By Suvarna News  |  First Published Jan 18, 2024, 8:17 PM IST

ಕಾಟಯ್ಯನ ಕೆರೆ ಒತ್ತುವರಿ ತೆರವಿಗೆ ಅಪ್ಪರಸನಹಳ್ಳಿ ಗ್ರಾಮಸ್ಥರ ಆಗ್ರಹ.  ಕೆರೆ‌ ಒತ್ತುವರಿ ಸರಿಪಡಿಸಿ ಎಂದು ರೈತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ


ಚಿತ್ರದುರ್ಗ (ಜ.18): ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಪ್ಪರಸನಹಳ್ಳಿ ಗ್ರಾಮದ ರೈತರು ತಮ್ಮ ಗ್ರಾಮದಲ್ಲಿರುವ ಕಾಟಯ್ಯನ ಕೆರೆಯನ್ನು ಆಜುಬಾಜಿನ ರೈತರು ಒತ್ತುವರಿ ಮಾಡಿದ್ದು, ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.  ಗ್ರಾಮದ ಸಾದರಹಳ್ಳಿ ರಿ.ಸ.ನಂ.೪೩ರ ೨೫ ಎಕರೆ ೧೯ ಗುಂಟೆ, ಅರಸನಘಟ್ಟ ರಿ.ಸ.ನಂ.೧೨೯ರ ೫೧ ಎಕರೆ ೩೯ ಗುಂಟೆ, ಮಾಕುಂಟೆ ರಿ.ಸ.ನಂ.೨೨ರಲ್ಲಿ ೧೧ ಎಕರೆ ೧೩ ಗುಂಟೆ ಕೆರೆ ಅಂಗಳದ ಜಾಗವನ್ನು ಅಕ್ಕಪಕ್ಕದ ರೈತರು ಒತ್ತುವರಿ ಮಾಡಿದ್ದಾರೆ.

ಹೀಗಾಗಿ ಕೆರೆಯನ್ನು ಅಳತೆ ಮಾಡಿಸಿ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಿ ಕೆರೆ ಸುತ್ತ ಏರಿ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕೆರೆ ಏರಿ ಶಿಥಿಲಗೊಂಡಿದ್ದು, ಏರಿಯು ಅಪಾಯ ಮಟ್ಟದಲ್ಲಿದೆ. ಆದ್ದರಿಂದ ಏರಿಯನ್ನು ಬಂದೊಬಸ್ತು ಮಾಡಿ ರಸ್ತೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.

Tap to resize

Latest Videos

undefined

ಜನಪ್ರಿಯ ನಟರುಗಳಿಗೆ ಧಮ್ಕಿ ಹಾಕಿದ ಪ್ರಸಿದ್ಧ ನಟಿಯ ವೃತ್ತಿ ಜೀವನ ಮುಂಗೋಪಕ್ಕೆ ಬಲಿಯಾಯ್ತು!

ಕೆರೆ ಒತ್ತುವರಿ ತೆರವುಗೊಳಿಸುವಂತೆ ಈಗಾಗಲೇ ಹೊಳಲ್ಕೆರೆ ತಾಲೂಕು ಕಚೇರಿ, ಕೆರೆ ಪ್ರಾಧಿಕಾರ, ಜಿಲ್ಲಾ ಕಚೇರಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು ಕೂಡ ಕ್ರಮ ತೆಗೆದುಕೊಂಡಿಲ್ಲ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ೮ ದಿನಗಳ ಒಳಗೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ಅಪ್ಪರಸನಹಳ್ಳಿ ಗ್ರಾಮದ ರೈತ ಮುಖಂಡ ಬಸವರಾಜಪ್ಪ ಮಾತನಾಡಿ, ಅಪ್ಪರಸನಹಳ್ಳಿ ಗ್ರಾಮದ ಕಾಟಯ್ಯನ ಕೆರೆಯಿಂದ ೧೨ ಹಳ್ಳಿಗಳ ರೈತರಿಗೆ ಅನುಕೂಲ ಆಗಿದೆ. 

ಆದರೆ ಕೆರೆಯ ಆಜುಬಾಜಿನ ರೈತರು ಕೆರೆಯನ್ನು ಎಥೇಚ್ಚವಾಗಿ ಒತ್ತುವರಿ ಮಾಡಿದ್ದಾರೆ. ೨ ಎಕರೆ ಜಮೀನು ವೊಂದಿರುವ ವ್ಯಕ್ತಿಯೊಬ್ಬ ೧೫ ಎಕರೆ ಕೆರೆ ಅಂಗಳವನ್ನು ಒತ್ತುವರಿ ಮಾಡಿದ್ದಾನೆ. ಸುತ್ತಮುತ್ತಲ ಗ್ರಾಮದವರು ಕೂಡ ಕೆರೆ ಒತ್ತುವಾರಿ ಮಾಡಿಕೊಂಡು ಸುತ್ತಾ ತಂತಿಬೇಲಿ ಹಾಕಿಕೊಂಡಿದ್ದಾರೆ. ಕೆರೆಯನ್ನು ಆಕ್ರಮಿಸಿಕೊಂಡು ಕೆರೆ ಒಳಗೆ ಏರಿ ಹಾಕಿಕೊಂಡಿದ್ದಾರೆ. ಇದರಿಂದಾಗಿ ನಮ್ಮ ಜಮೀನುಗಳಿಗೆ ಟ್ರಾಕ್ಟರ್ ಮೂಲಕ ಮಣ್ಣು ಹೊಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

24 ದಿನಗಳ ಬಳಿಕ ಘೋಷಣೆಯಾದ ಉದಯೋನ್ಮುಖ ಕನ್ನಡ ನಟಿಯ ಮರಣದ ಸುದ್ದಿ, ಗಿಣಿಶಾಸ್ತ್ರದಿಂದ ಸಾವಿನ ಸುಳಿವು ಸಿಕ್ಕಿತ್ತಾ?

ಮಳೆಗಾಲದಲ್ಲಿ ಕೆರೆ ಅಂಗಳವನ್ನು ಒತ್ತುವರಿ ಮಾಡಿ ಬೆಳಸಿಕೊಂಡಿರುವ ಅಡಕೆ ತೋಟ  ಮುಳುಗಡೆಯಾದರೆ ಕೆರೆ ಕೋಡಿಯನ್ನು ಒಡೆಯುತ್ತಾರೆ. ಇದರಿಂದಾಗಿ ನಮ್ಮ ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗುತ್ತಿದೆ. ತಹಶೀಲ್ದಾರ್ ಬಳಿ ಸಮಸ್ಯೆ ಹೇಳಿಕೊಂಡರೆ ಪ್ರಭಾವಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಇಲ್ಲಿಯವರೆಗೆ ನಾಲ್ವರು ಡಿಸಿಗಳಿಗೆ ಮನವಿ ಕೊಟ್ಟರು ಸಮಸ್ಯೆ ಬಗೆಹರಿದಿಲ್ಲ. 

ಹೀಗಾಗಿ ನೀವುಗಳು ೮ ದಿನಗಳ ಒಳಗೆ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವುಗೊಳಿಸಬೇಕು. ಅಲ್ಲದೆ ಮತ್ತೆ ಕೆರೆ ಒತ್ತುವರಿ ಮಾಡದಂತೆ ಕೆರೆ ಸುತ್ತ ಗುಂಡಿ ಹೊಡಿಸಬೇಕು ಎಂದು ಅಪ್ಪರಸನಹಳ್ಳಿ ಗ್ರಾಮದ ರೈತ ಸಂಘದಿAದ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕೆರೆಗಳು ಸಾರ್ವಜನಿಕರ ಸ್ವತ್ತು. ಅವುಗಳನ್ನು ಒತ್ತುವರಿ ಮಾಡುವುದು ತಪ್ಪು. ಕೆರೆಯನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ಅಧಿಕಾರಿಗಳಿಗೂ ಅದರ ಜವಾಬ್ದಾರಿ ಇದೆ. 

ಹೀಗಾಗಿ ಒತ್ತುವರಿಯಾಗಿರುವ ಕೆರೆಗಳನ್ನು ಅಳತೆ ಮಾಡುವುದಕ್ಕೆ ಸೂಚಿಸಿದ್ದೇವೆ. ತಿಂಗಳಿಗೆ ಇಂತಿಷ್ಟು ಕೆರೆ ಸರ್ವೇ ಮಾಡಬೇಕೆಂದು ಗುರಿ ಇಟ್ಟುಕೊಂಡಿದ್ದೇವೆ. ಆದ್ಯತೆ ಮೇರೆಗೆ ನಿಮ್ಮ ಊರಿನ ಕೆರೆಯನ್ನು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು..

click me!