ತಾಯಿಯನ್ನು ಸುಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಚಿಂತಾಮಣಿ ಯುವಕ

Published : Jul 27, 2019, 12:24 PM ISTUpdated : Jul 27, 2019, 12:27 PM IST
ತಾಯಿಯನ್ನು ಸುಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡ ಚಿಂತಾಮಣಿ ಯುವಕ

ಸಾರಾಂಶ

ಕೋಲಾರದ ಜಯರಾಮ ಎಂಬವರು ತಾಯಿಯನ್ನು ಸುಟ್ಟು ಕೊಂದು, ತಾವೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂತಾಮಣಿ ತಾಲೂಕಿನಲ್ಲಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಕೋಲಾರ(ಜು.27): ಯುವಕನೊಬ್ಬ ತನ್ನ ತಾಯಿಗೆ ಬೆಂಕಿಯಿಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂತಾಮಣಿ ತಾಲೂಕಿನಲ್ಲಿ ನಡೆದಿದೆ. ಜಯರಾಮ (55) ಎಂಬವರು ತಮ್ಮ ತಾಯಿ ವೆಂಕಟಮ್ಮ (85) ಅವರಿಗೆ ಬೆಂಕಿಯಿಟ್ಟು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟೈಲರ್ ವೃತ್ತಿ ಮಾಡುತ್ತಿದ್ದ ಜಯರಾಮ ಅವರು ತಾಯಿ ವೆಂಕಟಮ್ಮ ಪತ್ನಿ ರಾಮ ದೇವಿ ಜೊತೆ ವಾಸವಿದ್ದರು. ಜಯರಾಮ ಪತ್ನಿ ಕೃಷಿ ಕೆಲಸ ಮಾಡಿ ದಿನಗೂಲಿಗೆ ದುಡಿಯುತ್ತಿದ್ದರು.

ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು

ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ತಾಯಿಗೆ ಬೆಂಕಿ ಹಚ್ಚಿದ ಜಯರಾಮ ಸೀಲಿಂಗ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಪತ್ನಿ ರಾಮದೇವಿ ಮನೆಯಲ್ಲಿರಲಿಲ್ಲ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಯರಾಮ ಅವರು ವೆಂಕಟಮ್ಮ ಅವರ 5ನೇ ಮಗನಾಗಿದ್ದು, ಇಬ್ಬರು ಪುತ್ರರು ಸ್ವಲ್ಪ ಸಮಯದ ಹಿಂದೆ ಮೃತಪಟ್ಟಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಕೆ. ಎಂ. ಶ್ರೀನಿವಾಸ್ ಹೇಳಿದ್ದಾರೆ.

PREV
click me!

Recommended Stories

ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!
5 ಸಾವಿರ ಕೊಡ್ತೀನಿ ರೂಮ್‌ಗೆ ಬಾ ಅಂದ್ರು? ಬ್ರಹ್ಮಾನಂದ ಗುರೂಜಿಯ ವಿಡಿಯೋ ವೈರಲ್