ಯಲಬುರ್ಗಾ ಪಟ್ಟಣದ ಶ್ರೀ ಬೀರಲಿಂಗೇಶ್ವರ ಜಾತ್ರೆ ನಿಮಿತ್ತ ಜರುಗಿದ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಹಾಗೂ ಶಿಲಾ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಬಸವರಾಜ ನಿಡಗುಂದಿ ಹಾಗೂ ಪ್ರೀತಮ್ ನಿಡಗುಂದಿ ಮಕ್ಕಳಿಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ನಿತ್ಯ ಮನೆಯಲ್ಲಿ ಸಂಗ್ರಹಿಸಿದ್ದ ಹಣವನ್ನು ನೀಡಿದರು.
ಕುಕನೂರು : ಯಲಬುರ್ಗಾ ಪಟ್ಟಣದ ಶ್ರೀ ಬೀರಲಿಂಗೇಶ್ವರ ಜಾತ್ರೆ ನಿಮಿತ್ತ ಜರುಗಿದ ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣ ಹಾಗೂ ಶಿಲಾ ಮಂಟಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಬಸವರಾಜ ನಿಡಗುಂದಿ ಹಾಗೂ ಪ್ರೀತಮ್ ನಿಡಗುಂದಿ ಮಕ್ಕಳಿಬ್ಬರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ನಿತ್ಯ ಮನೆಯಲ್ಲಿ ಸಂಗ್ರಹಿಸಿದ್ದ ಹಣವನ್ನು ನೀಡಿದರು.
ತಮ್ಮ ಹೆಸರಿನ ಮಗುಗೆ ಹೂವಿನ ಹಾರ:
undefined
ಕಳೆದ ಎರಡು ವರ್ಷದ ಹಿಂದೆ ಕುಕನೂರು ತಾಲೂಕಿನ ದ್ಯಾಂಪೂರು ಗ್ರಾಮದ ಮಂಜುನಾಥ ಮರಡಿ ಎಂಬ ಯುವಕ ತನ್ನ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದ. ಕಾರ್ಯಕ್ರಮದಲ್ಲಿ ಪಾಲಕರು ಮಗುವನ್ನು ಎತ್ತಿಕೊಂಡು ಬಂದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಗುವಿಗೆ ಹೂವಿನ ಹಾರ ಹಾಕಿ ತಲೆ ಮೇಲೆ ಕೈಯಾಡಿಸಿದರು.
ಕೊಟ್ಟ ಮಾತಿನಂತೆ ನಡೆಯದಿದ್ದರೆ ರಾಜಕೀಯ ನಿವೃತ್ತಿ
ಕಲಾದಗಿ (ಫೆ.16): ಚುನಾವಣೆಗೆ ಇನ್ನು ಎರಡು ತಿಂಗಳು ಬಾಕಿ ಇದೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರಕ್ಕೆ ಇನ್ನೊಂದು ತಿಂಗಳಷ್ಟೇ ಅವಕಾಶ ಇದೆ. ಅದಾದ ನಂತರ ಜನ ಅವರನ್ನು ಮನೆಗೆ ಕಳುಹಿಸಲು ಕಾಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾಗಲಕೋಟೆ ತಾಲೂಕಿನ ಕಲಾದಗಿಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರಿಗೆ ಸಕ್ಕರೆ ಕೊಡುತ್ತೇವೆ ಎಂದು ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ತಯಾರಿ ಮಾಡುತ್ತಿರುವ ಇವರನ್ನು ಮನೆಗೆ ಕಳುಹಿಸದೆ ಬಿಟ್ಟರೆ ರಾಜ್ಯವನ್ನು ಲೂಟಿ ಮಾಡುತ್ತಾರೆ.
ಅದಕ್ಕೆ ಈ ಸರ್ಕಾರವನ್ನು ಅಲಿಬಾಬಾ ಮತ್ತು 40 ಮಂದಿ ಕಳ್ಳರ ಕೂಟ ಎಂದು ಕರೆಯುವುದು. ಇವರಿಗೆ ಮಾನ ಮಾರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟಜನರು. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರೈತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರು ಯಾರೂ ಉಳಿಯುವುದಿಲ್ಲ ಎಂದು ದೂರಿದರು. ಮೋದಿ ಅವರು ಪ್ರವಾಹ ಬಂದಾಗ, ಕೊರೋನಾ ಬಂದು ಜನ ಸಾಯುವಾಗ ಕರ್ನಾಟಕಕ್ಕೆ ಬರಲಿಲ್ಲ. ಈಗ ಚುನಾವಣೆ ಬಂದಿರುವುದರಿಂದ ಮೇಲಿಂದ ಮೇಲೆ ಬರುತ್ತಿದ್ದಾರೆ. ಮೋದಿ ಅವರು ಸೇಡಂನಲ್ಲಿ ಬಂಜಾರ ಜನಾಂಗದವರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದರು.
ಕಾಂಗ್ರೆಸ್ ಭಯೋತ್ಪಾದಕರ ಪಕ್ಷ: ನಳಿನ್‌ಕುಮಾರ್ ಕಟೀಲ್
ತಾಂಡಾಗಳು, ಕುರುಬರ ಹಟ್ಟಿ, ಮಜರೆಗಳು, ನಾಯಕನ ಹಟ್ಟಿಯಲ್ಲಿ ವಾಸ ಮಾಡುವ ಜನರಿಗೆ ವಾಸಿಸುವವನೆ ಮನೆಯೊಡೆಯ ಎಂಬ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು, ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿದ್ದು ನಮ್ಮ ಸರ್ಕಾರ. ಅಡುಗೆ ಮಾಡಿದ್ದು ನಾವು, ಅದನ್ನು ಬಡ್ಸೋಕೆ ಬಂದಿದ್ದು ಮೋದಿ ಅವರು ಎಂದು ಹೇಳಿದರು. ನಾವು ಕೊಟ್ಟಮಾತಿನಂತೆ ನಡೆದುಕೊಳ್ಳುತ್ತೇವೆ. ಇದೇ ಕಾರಣಕ್ಕೆ ನಮ್ಮ ಪ್ರಜಾಧ್ವನಿ ಯಾತ್ರೆಯನ್ನು ಬಸವಾದಿ ಶರಣರ ಕರ್ಮಭೂಮಿ ಕೂಡಲಸಂಗಮದಿಂದ ಆರಂಭ ಮಾಡಿದ್ದು.
ನಾನು ಕೊಟ್ಟಮಾತಿನಂತೆ ನಡೆದುಕೊಳ್ಳದೆ ಹೋದರೆ ಒಂದು ಕ್ಷಣವೂ ರಾಜಕೀಯದಲ್ಲಿ ಇರುವುದಿಲ್ಲ ಎಂದು ಘಂಟಾಘೋಷವಾಗಿ ಹೇಳಿದರು. ಬಿಜೆಪಿ ಸರ್ಕಾರ ಕಳೆದ 4 ವರ್ಷದಿಂದ ಒಂದೇ ಒಂದು ಹೊಸ ಮನೆ ಮಂಜೂರು ಮಾಡಿಕೊಟ್ಟಿಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ದುರ್ಬಲ ಜನರಿಗೆ ಸೂರು ನೀಡುವ ಕೆಲಸ ಮಾಡುತ್ತೇವೆ. ಸೈಟ್ ಕೊಡುತ್ತೇವೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಯಾರೇ ಬಂದರೂ ಅವರ ಮಾತುಗಳಿಗೆ ಮರುಳಾಗದೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮನವಿ ಮಾಡಿದರು.
ನನ್ನನ್ನು ಹೊಡೆದು ಹಾಕಲು ಬಿಡುತ್ತೀರಾ?: ಮಂಡ್ಯದಲ್ಲಿ ಸಚಿವ ಅಶ್ವತ್ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ರೀತಿ ಹೊಡೆದು ಹಾಕಬೇಕು ಎಂದು ಹೇಳಿದ್ದಾರೆ. ನೀವೆಲ್ಲ ನನ್ನನ್ನು ಹೊಡೆದುಹಾಕಲು ಬಿಡುತ್ತೀರ? ನಾನು ಟಿಪ್ಪು ಸುಲ್ತಾನ್, ಸಂಗೊಳ್ಳಿ ರಾಯಣ್ಣ, ಸಂತ ಸೇವಾಲಾಲ್, ಬಸವಣ್ಣ, ಕನಕದಾಸರು ಈ ಎಲ್ಲರನ್ನೂ ಗೌರವಿಸುತ್ತೇನೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಎಲ್ಲ ಧರ್ಮದವರನ್ನು ಸಮಾನವಾಗಿ ಕಾಣುತ್ತೇನೆ. ಎಲ್ಲ ಜನರನ್ನು ಪ್ರೀತಿ ಮಾಡುತ್ತೇನೆ. ಬಿಜೆಪಿಯವರು ಸಮಾಜದಲ್ಲಿ ದ್ವೇಷ ಹುಟ್ಟುಹಾಕುವವರು, ದಯವಿಟ್ಟು ಇಂಥಾ ಸ್ವಾರ್ಥಿಗಳಿಗೆ ನಿಮ್ಮ ಮತ ನೀಡಬೇಡಿ ಎಂದು ಹೇಳಿದರು.