ಹೇಮಾವತಿ ನಾಲೆಗೆ ಬಿದ್ದ ಮಕ್ಕಳು, ಇಬ್ಬರು ದುರಂತ ಅಂತ್ಯ, ಅದೃಷ್ಟವಶಾತ್ ಬದುಕಿದ ಬಾಲಕ

By Gowthami K  |  First Published Jul 7, 2023, 4:06 PM IST

 ಹೇಮಾವತಿ ನಾಲೆಗೆ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ನಡೆದಿದೆ. ಒಟ್ಟು ಮೂವರು ಮಕ್ಕಳು ನಾಲೆಗೆ ಬಿದ್ದಿದ್ದರು. 


ತುಮಕೂರು (ಜು.7): ಹೇಮಾವತಿ ನಾಲೆಗೆ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ದಾರುಣ ಘಟನೆ ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ನಡೆದಿದೆ. ಒಟ್ಟು ಮೂವರು ಮಕ್ಕಳು ನಾಲೆಗೆ ಬಿದ್ದಿದ್ದರು. ಮೂವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಹಮ್ಮದ್ ನಯೀಮ್ (7) ಮಿಸ್ಬಾಬಾನು(9) ಸಾವು ಕಂಡಿರುವ ನತದೃಷ್ಟ ಮಕ್ಕಳಾಗಿದ್ದಾರೆ.  ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ಮಿಸ್ಬಾಬಾನು ನಾಲೆಯಲ್ಲಿ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ದಳದಿಂದ ಮಿಸ್ಬಾಬಾನುವಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಮೂವರು ಮಕ್ಕಳು ನಾಲೆಗೆ ಬಿದ್ದಿದ್ದನ್ನು ಸ್ಥಳೀಯ ಯುವಕ ಗಮನಿಸಿದ್ದು, ಆತ ಮಹ್ಮದ್ ಬಿಲಾಲ್ ನನ್ನು ರಕ್ಷಣೆ ಮಾಡಿದ್ದಾನೆ. ಮತ್ತಿಬ್ಬರನ್ನು ರಕ್ಷಿಸಲು ಆಗಲಿಲ್ಲ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಯಸ್ಸಾದ ಮಾವನನ್ನು ರಸ್ತೆಯಲ್ಲೇ ಅಟ್ಟಾಡಿಸಿ ಹೊಡೆದ ಸೊಸೆ, ಇಷ್ಟಕ್ಕೂ ಆಗಿದ್ದೇನು?

Latest Videos

undefined

ಮಳೆ ದುರಂತ: ಕಾಲು ಜಾರಿ ಕೆರೆಗೆ ಬಿದ್ದು ವಿಕಲನಚೇತನ ಸಾವು
ಮೂಡುಬಿದಿರೆ: ಕಳೆದ ಬುಧವಾರ ರಾತ್ರಿ ಮತ್ತು ಗುರುವಾರ ನಿರಂತರ ಸುರಿದ ಭಾರಿ ಮಳೆಗೆ ಮೂಡುಬಿದಿರೆ ತಾಲೂಕು ವ್ಯಾಪ್ತಿಯಲ್ಲಿ ಹಲವೆಡೆ ತಗ್ಗು ಪ್ರದೇಶಗಳು, ಮನೆಗಳು ಜಲಾವೃತವಾಗಿದ್ದು ಓರ್ವ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಘಟನೆ ನಡೆದಿದೆ.

ನೆಲ್ಲಿಕಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಟ್ರಾಡಿಯ ವ್ಯಕ್ತಿಯೊಬ್ಬರು ಗುರುವಾರ ಬೆಳಗ್ಗೆ ಕಾಲು ಜಾರಿ ಕೆರೆಗೆ ಬಿದ್ದು, ಮೃತಪಟ್ಟಿದ್ದಾರೆ. ಪಂಚಾಯಿತಿ ಕಚೇರಿ ಬಳಿಯ ನಿವಾಸಿ ನಿರಂಜನ್‌ (42) ಮೃತರು. ವಿಕಲಚೇತನರಾಗಿದ್ದ ಅವರು ಅವಿವಾಹಿತರಾಗಿದ್ದರು.

ಮೂಡುಬಿದಿರೆ ಜ್ಯೋತಿನಗರ ಪರಿಸರದಲ್ಲಿ ಭಾರಿ ಸಾಲು ಮರವೊಂದು ಅಂಗಡಿಯೊಂದರ ಮೇಲೆ ಬೀಳುವುದು ಪವಾಡ ಸದೃಶ್ಯ ಎಂಬಂತೆ ತಪ್ಪಿದ್ದು ಸಂಭಾವ್ಯ ದುರಂತವೊಂದು ತಪ್ಪಿದಂತಾಗಿದೆ. ಕೆಲವೆಡೆ ಮನೆಯೊಳಗೆ ನೀರು ಒಸರಿನಂತೆ ಹರಿದು ಬರುವ ಸಮಸ್ಯೆಗಳು ಕಾಣಿಸಿಕೊಂಡಿವೆ.

ಮನೆಗಳು ಜಲಾವೃತ: ಪುರಸಭೆ ವ್ಯಾಪ್ತಿಯ, ಆಲಂಗಾರು ಉಳಿಯ, ಬೈಲಾರೆಯ ಮೂರು ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ಕಲ್ಯಾಣಿ ಪೂಜಾರ್ತಿ, ಲಲಿತಾ ಪೂಜಾರ್ತಿ ಹಾಗೂ ಉದಯ ಎಂಬವರ ಮನೆಗಳಿಗೆ ನೀರು ನುಗ್ಗಿದೆ. ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯರ್‌ ಪುಂಡು ಕಾಲನಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ, ತೋಟದತ್ತ ಸಾಗಿ ತುಂಬಿಕೊಂಡಿತ್ತು.

 ಕೆಆರ್‌ಎಸ್‌ನಲ್ಲಿ ನೀರು ಕಡಿಮೆ: ಸಂಸದೆ ಸುಮಲತಾ ಅಂಬರೀಶ್‌ ಕಳವಳ

ತಪ್ಪಿದ ದುರಂತ:
ಮೂಡುಬಿದಿರೆ ಪೇಟೆಯ ಮೆಸ್ಕಾಂ ಕಚೇರಿ ಎದುರಿನ ತಾಜಾ ಮೀನಿನ ಮಳಿಗೆಯ ಮೇಲೆ ಅಪರಾಹ್ನದ ವೇಳಗೆ ಪಕ್ಕದ ಸಾಲು ಮರಗಳ ಪೈಕಿ ಭಾರಿ ಮರವೊಂದು ಉರುಳಿತಾದರೂ ಪಕ್ಕದ ಮರದ ಸಣ್ಣ ಕೊಂಬೆಗೆ ತಾಗಿ ನಿಂತದ್ದು ಪವಾಡವೇ ಎಂಬಂತಿತ್ತು. ಘಟನೆ ನಡೆದಾಗ ಅಂಗಡಿಯೊಳಗೆ ಐದು ಮಂದಿ ಇದ್ದರು.

ಕೂಡಲೇ ಅರಣ್ಯಾಧಿಕಾರಿಗಳು, ಪೋಲೀಸ್‌, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕ್ರೇನ್‌, ಜೆಸಿಬಿ ಬಳಸಿ ಭಾರೀ ಮರವನ್ನು ತೆರವುಗೊಳಿಸಲು ಶ್ರಮಿಸಿದರು. ಅಕ್ಕ ಪಕ್ಕದ ಅಪಾಯಕಾರಿ ಮರದ ಕೊಂಬೆಗಳನ್ನೂ ಸವರಿದರು. ಸಂಜೆವರೆಗೂ ನಡೆದ ಈ ತೆರವು ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ, ಬಂಟ್ವಾಳದತ್ತ ಸಾಗುವ ಜನ ವಾಹನ ಸವಾರರಿಗೆ ಕೊಂಚ ಅಡಚಣೆಯಾಗಿತ್ತು.

ಕೋಟೆ ಬಾಗಿಲು ಪರಿಸರದಲ್ಲಿ ಕೆಲವು ಮನೆಯೊಳಗೆ ಒಸರು ನೀರು ತುಂಬಿದ ಘಟನೆ ನಡೆದಿದ್ದು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕೆಲವೆಡೆ ಪಂಪ್‌ಸೆಟ್‌ ಬಳಸಿ ತಗ್ಗು ಪ್ರದೇಶದ ವಸತಿ ಸಂಕೀರ್ಣದ ಬೇಸ್‌ಮೆಂಟ್‌ಗಳಲ್ಲಿ ತುಂಬಿದ ನೀರನ್ನು ನಿರಂತರ ಹೊರಚೆಲ್ಲುವ ಸಾಹಸ ನಡೆದಿದೆ.

 

click me!