ವಿಜಯನಗರ ಬಿಂಬ ಮಕ್ಕಳ ವಿಭಾಗದ ಈ ಚಿಣ್ಣರ ರಂಗ ಸಂಕ್ರಾಂತಿಯ ಎರಡು ನಾಟಕಗಳ ನಾಟಕೋತ್ಸವ ಬಹಳ ಅದ್ಧೂರಿಯಿಂದ ಸಂಭ್ರಮದಿಂದ ಜರುಗಿತು. ಮಕ್ಕಳ ಪೋಷಕರೇ ಪ್ರೇಕ್ಷಕರಾಗಿ ನಾಟಕಗಳನ್ನು ನೋಡಿ ಮೆಚ್ಚಿದರು. ಪ್ರಶಂಸಿದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳ ರಂಗಶಾಲೆಯ ಈ ನಾಟಕೋತ್ಸವ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಬೆಂಗಳೂರು(ಜ.04): ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಿನ್ನೆ(ಶುಕ್ರವಾರ) ಬೆಂಗಳೂರಿನ ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳ ವಿಭಾಗದಿಂದ ‘ಚಿಣ್ಣರ ರಂಗ ಸಂಕ್ರಾಂತಿ’ ಕಾರ್ಯಕ್ರಮ ನಡೆಯಿತು. ‘ಋಷ್ಯಮೂಕ’ ಹಾಗೂ ‘ಕೃಬು’ ಎಂಬ ಎರಡು ಮಕ್ಕಳ ನಾಟಕಗಳನ್ನು ಪ್ರಸ್ತುತ ಪಡಿಸಲಾಯಿತು. ಇದೇ ಸಮಯದಲ್ಲಿ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರನ್ನು ಸನ್ಮಾನಿಸಲಾಯಿತು.
ಈ ಎರಡೂ ನಾಟಕಗಳನ್ನು ಬರೆದು ‘ಕೃಬು’ ನಾಟಕವನ್ನು ಡಾ.ಎಸ್.ವಿ. ಕಶ್ಯಪ್ ನಿರ್ದೇಶಿಸಿದ್ದಾರೆ. ಮತ್ತೊಂದು ನಾಟಕ ‘ಋಷ್ಯಮೂಕ’ವನ್ನು ಡಾ.ಸುಷ್ಮಾ ಎಸ್.ವಿ. ನಿರ್ದೇಶಿಸಿದ್ದಾರೆ. ಎರಡೂ ನಾಟಕದ ಕಥಾವಸ್ತು ಗಹನವಾದರೂ ಸರಳ, ಸುಂದರ ಜಾಣ್ಮೆಯ ನಿರ್ದೇಶನ, ಮಕ್ಕಳ ಲವಲವಿಕೆಯ, ಸುಲಲಿತ ಅಭಿನಯಗಳಿಂದಾಗಿ ಪ್ರೇಕ್ಷಕರ ಮನಗೆದ್ದವು.
ಮೈಸೂರು: ರಂಗಾಯಣದ ಬಹುರೂಪಿ ನಾಟಕೋತ್ಸವಕ್ಕೆ ತೆರೆ
ಇದೇ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ-2024 ಪುರಸ್ಕೃತರಾದ ಕೃಷ್ಣಮೂರ್ತಿ ಬಿಳಿಗೆರೆ ಅವರನ್ನು ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೃಷ್ಣಮೂರ್ತಿ ಬಿಳಿಗೆರೆ ಮಕ್ಕಳ ಅಂತರಂಗ ಇಂತಹ ತತ್ವಾಧಾರಿತ ಆಲೋಚನೆಗಳ ಚಿಂತನೆಯಿಂದ ಅರಳುತ್ತವೆ. ಅವರು ಒಳ್ಳೆಯ ಮನುಷ್ಯತ್ವವಿರುವ ಮಕ್ಕಳಾಗಿ ಬೆಳೆಯುವಲ್ಲಿ ಇಂತಹ ನಾಟಕಗಳು ಪ್ರೇರಣಾದಾಯಕ ವಾಗಬಲ್ಲದು ಎಂದು ತಮ್ಮ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು.
ಜೋಗಿಯವರು ಎಲ್ಲರನ್ನೂ ಒಟ್ಟು ಗೂಡಿಸುವ ರಂಗಭೂಮಿ ಮಕ್ಕಳಿಗೆ ನಾಟಕ ಕಲಿಸಿ, ಭಾಷೆ ಬೆಳೆಸಿ, ಒಳ್ಳೆಯ ಮನುಷ್ಯರನ್ನಾಗಿ ಮಾಡುವ ಇಂತಹ ರಂಗಪ್ರಯೋಗಗಳು ಸಾಮಾಜಿಕ ನಾಟಕ ಭಾರತಕ್ಕೆ ಅತಿ ಅವಶ್ಯವೆಂದು ಅಭಿಪ್ರಾಯಪಟ್ಟರು.
ಕಲಾಕ್ಷೇತ್ರದಲ್ಲಿ ನಾಟಕ ಮಾಡುವುದು ಅಷ್ಟು ಸುಲಭವಲ್ಲ. ಇದು ರಂಗಭೂಮಿಯ ಕಾಶಿ. ಇಂತಹ ಅದ್ಭುತ ವೇದಿಕೆಯಲ್ಲಿ ಇಂತಹ ಕಷ್ಟ ಸಾಧ್ಯವಾದ ಎರಡೂ ನಾಟಕಗಳ ಪ್ರದರ್ಶನದ ಬಗ್ಗೆ ಅಪಾರ ಮೆಚ್ಚುಗೆಯ ಮಾತುಗಳನ್ನಾಡಿದರು. ಸಭೆಯಲ್ಲಿ ಉಪಸ್ಥಿತರಿದ್ದ ಆರ್.ಜೆ.ಹಳ್ಳಿ ನಾಗರಾಜ್ ಮತ್ತು ಗುಂಡಣ್ಣನವರು ನಾಟಕಗಳನ್ನು ಬಹುವಾಗಿ ಮೆಚ್ಚಿಕೊಂಡರು.
ಹಿಂಸೆ ಪ್ರೀತಿಗಳ ವಿಭಿನ್ನ ಲಯ: ಕರಾಳ ವರ್ಣಭೇದ ನೀತಿಯ ಕರಾಳ ಮುಖವಿದು!
ವಿಜಯನಗರ ಬಿಂಬ ಮಕ್ಕಳ ವಿಭಾಗದ ಈ ಚಿಣ್ಣರ ರಂಗ ಸಂಕ್ರಾಂತಿಯ ಎರಡು ನಾಟಕಗಳ ನಾಟಕೋತ್ಸವ ಬಹಳ ಅದ್ಧೂರಿಯಿಂದ ಸಂಭ್ರಮದಿಂದ ಜರುಗಿತು. ಮಕ್ಕಳ ಪೋಷಕರೇ ಪ್ರೇಕ್ಷಕರಾಗಿ ನಾಟಕಗಳನ್ನು ನೋಡಿ ಮೆಚ್ಚಿದರು. ಪ್ರಶಂಸಿದರು. ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳ ರಂಗಶಾಲೆಯ ಈ ನಾಟಕೋತ್ಸವ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ ಹಾಗೂ ಖ್ಯಾತ ಪತ್ರಕರ್ತರು, ಸಾಹಿತಿಗಳೂ ಆದ ಜೋಗಿ ಮತ್ತು ಖ್ಯಾತ ರಂಗಕರ್ಮಿ ಡಾ.ಬಿ.ವಿ.ರಾಜಾರಾಮ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.