ಶಿಕ್ಷಣದಿಂದಲೇ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವುದರಿಂದ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ : ಶಿಕ್ಷಣದಿಂದಲೇ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವುದರಿಂದ ತಂದೆ-ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಡೆಲ್ಲಿ ವಲ್ಡ್ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ಎಜುಕೇಷನಲ್ ಹಬ್ ಆಗಬೇಕು ಎಂಬ ಉದ್ದೇಶದಿಂದ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸರಕಾರದಿಂದ ಎಲ್ಲಾ ಜಾತಿ ವರ್ಗದ ಮಕ್ಕಳಿಗೆ 8 ಮೊರಾರ್ಜಿ ಶಾಲೆಗಳನ್ನು ಮಂಜೂರು ಮಾಡಿಸಿ ಸುಮಾರು 230 ಕೋಟಿ ರು.ಗಳ ವೆಚ್ಚದಲ್ಲಿ ಮೊರಾರ್ಜಿ ಶಾಲೆಗಳನ್ನು ಸ್ಥಾಪಿಸಲಾಗಿತ್ತು. ಈಗ ಈ ಶಾಲೆಗಳಲ್ಲಿ ಸುಮಾರು 3500 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದರಿಂದ ತಾಲೂಕಿನಲ್ಲಿ ಶಿಕ್ಷಣದ ಬದಲಾವಣೆಯಾಗಿದೆ. ಶಿರಾ ತಾಲೂಕನ್ನು ಎಜುಕೇಷನಲ್ ಹಬ್ ಮಾಡಬೇಕೆಂದು ನನ್ನ ಕನಸು ಸಾಕಾರಗೊಳ್ಳುತ್ತಿದೆ ಎಂದರು.
undefined
ಡೆಲ್ಲಿ ವಲ್ಡ್ ಶಾಲೆಯ ಸಂಸ್ಥಾಪಕ ನಲ್ಲಪಾಟಿ ವೆಂಕಟೇಶ್ವರ ರಾವ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ. ಮಕ್ಕಳಿಗೆ ಅವರದೇ ಆದ ಕೌಶಲ್ಯ ಇರುತ್ತದೆ. ಮಕ್ಕಳು ಅವರಿಗೆ ಇಷ್ಟವಾದ ರೀತಿಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಅವಕಾಶ ಮಾಡಿಕೊಡಿ. ಅವರಿಗೆ ಪ್ರೋತ್ಸಾಹ ನೀಡಿ. ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಆಗ ನಿಮ್ಮ ಮಕ್ಕಳು ಉತ್ತಮ ಪ್ರಜೆಯಾಗಿ, ಉತ್ತಮ ನಾಯಕನಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಡೆಲ್ಲಿ ವಲ್ಡ್ ಶಾಲೆಯ ಪ್ರಾಂಶುಪಾಲ ಶ್ರೀಜೆಶ್, ಆಡಳಿತ ಅಧಿಕಾರಿ ಪುಷ್ಪರಾಜ್, ನಲ್ಲಪಾಟಿ ರಾಜೇಶ್ವರಿ, ಶಿವಮೊಗ್ಗ ಶಾಖೆಯ ಪ್ರಾಂಶುಪಾಲ ಪ್ರಕಾಶ್ ಜೋಗಿ ಸೇರಿದಂತೆ ಹಲವರು ಹಾಜರಿದ್ದರು.
ಖಾಸಗಿ ಬೇಡಿಕೆಗೆ ಮಣಿದ ಸರ್ಕಾರ
ಬೆಂಗಳೂರು (ಫೆ.19): ಕೊನೆಗೂ ಖಾಸಗಿ ಶಾಲೆಗಳ ಸಮಸ್ಯೆ ಬಗೆ ಹರಿಸಲು ಸರ್ಕಾರ ಮುಂದಾಗಿದೆ. ಕೆಲ ತಿಂಗಳ ಹಿಂದೆ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರ ಕುರಿತು ದಾಖಲೆ ಸಮೇತ ಬಿಡುಗಡೆ ಮಾಡಿದ್ದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರಧಾನಿ ನರೇಂದ್ರ ಮೋದಿಗೂ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಪತ್ರ ಬರೆದಿದ್ರು. ಇದೀಗ ಶಿಕ್ಷಣ ಇಲಾಖೆ ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಬೇಡಿಕೆ ಈಡೇರಿಸಲು ಮುಂದಾಗಿದೆ. ಈ ಹಿಂದೆ 1 ರಿಂದ 10 ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಲು ಆಯುಕ್ತರ ಅನುಮತಿ ಬೇಕಾಗಿತ್ತು. ಆಲ್ಲದೆ ಮಧ್ಯ ವರ್ತಿಗಳ ಭ್ರಷ್ಟಾಚಾರಕ್ಕೂ ಇದು ಕಾರಣವಾಗಿತ್ತು ಅಂತ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
ಶಾಲೆ ಮಾನ್ಯತೆ, ಶಾಲೆ ಸ್ಥಳ ಬದಲಾವಣೆ, ಹೊಸ ಶಾಲೆ ಅನುಮತಿ ಸೇರಿದಂತೆ ಹಲವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನ ಇದೀಗ ಡಿಡಿಪಿಐಗೆ ಹಸ್ತಾಂತರ ಮಾಡಲಾಗಿದೆ ಅಂತ ತಿಳಿದು ಬಂದಿದೆ. ಆಲ್ಲದೆ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ವಾಗತಿಸಿದ್ದಾರೆ.
ಈ ಹಿಂದೆ ಶಾಲೆಗಳ ಮಾನ್ಯತೆ, ಹೊಸ ಶಾಲೆಗೆ ಅನುಮತಿ ಹಾಗೂ ಶಾಲೆ ಸ್ಥಳ ಬದಲಾವಣೆ ಮಾಡಿಕೊಳ್ಳಲು ಆಯುಕ್ತರ ಅನುಮತಿ ಕಡ್ಡಾಯ ಮಾಡಲಾಗಿತ್ತು. ಇದರಿಂದ ಸಾಕಷ್ಟು ಶಾಲೆಗಳಿಗೆ ತೊಂದರೆ ಆಗಿದೆ.
UDUPI: ಕಾಪು ಕಳತೂರಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಉದ್ಘಾಟನೆ
ಮಧ್ಯವರ್ತಿಗಳ ಭ್ರಷ್ಟಾಚಾರ ಮೀತಿ ಮೀರಿತ್ತು. ಹೀಗಾಗಿ ಶಿಕ್ಷಣ ಇಲಾಖೆಯ ಕಾಯಿದೆಯನ್ನ, ಸರಳೀಕೃತಗೊಳಿಸುವಂತೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ವಿ, ಆಲ್ಲದೆ ಇಲಾಖೆಯಲ್ಲಿ ನಡೆಯುತ್ತಿದ್ದ ಅಧಿಕಾರಿಗಳ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಲಾಗಿತ್ತು.
ದ್ವಿತೀಯ ಪಿಯು ಪ್ರವೇಶ ಪತ್ರದಲ್ಲಿ ತಪ್ಪಾಗಿದೆಯೇ.?: ತಿದ್ದುಪಡಿಗೆ ಈ ನಂಬರ್‌ಗೆ ಕರೆ
ಪ್ರಧಾನಿ ನರೇಂದ್ರ ಮೋದಿಗೂ ಈ ಬಗ್ಗೆ ಪತ್ರ ಬರೆಯಲಾಗಿತ್ತು. ಇದೀಗ ನಮ್ಮ ಹೋರಾಟಕ್ಕೆ ಸರ್ಕಾರ ಮನ್ನಣೆ ಕೊಟ್ಟಿದೆ. ಆಯುಕ್ತರ ಪರಧಿಯಲ್ಲಿದ್ದ ಅಧಿಕಾರವನ್ನ ಡಿಡಿಪಿಐಗೆ ಕೊಡಲಾಗಿದೆ. ಇದರಿಂದ ದೂರದ ಊರುಗಳಿಂದ ಆಯುಕ್ತರ ಕಚೇರಿಗೆ ಅಲೆಯೋದು ತಪ್ಪುತ್ತೆ. ಆಯಾ ಜಿಲ್ಲೆಯ ಶಾಲೆಯ ಮುಖ್ಯಸ್ಥರು ಡಿಡಿಪಿಐ ಬಳಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.