'ರಾತ್ರಿ ವೇಳೆ ಅಪ್ರಾಪ್ತ ಬಾಲಕಿಯರಿಂದ ಇಂತ ಕೆಲಸ : ರಕ್ಷಣೆ'

By Kannadaprabha News  |  First Published Feb 6, 2021, 4:15 PM IST

ರಾತ್ರಿ ವೇಳೆ ಇಂತಹ ಕೆಲಸದಲ್ಲಿ ತೊಡಗಿದ್ದ  ಅಪ್ರಾಪ್ತ ಬಾಲಕಿಯರನ್ನು ರಕ್ಷಣೆ ಮಾಡಲಾಗಿದೆ. ಮಂಗಳೂರಿನಲ್ಲಿ  ಕಾರ್ಯಾಚರಣೆ ಮಾಡಿ ರಕ್ಷಿಸಲಾಗಿದೆ.


ಮಂಗಳೂರು (ಫೆ.06): ಮಂಗಳೂರು ಪಟ್ಟಣದ ಕದ್ರಿ ಕೆಪಿಟಿ ಬಳಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಭಿಕ್ಷಾಟನೆಯಲ್ಲಿ ನಿರತರಾಗಿರುವ ಬಗ್ಗೆ ಸಾರ್ವಜನಿಕರಿಂದ ಖಚಿತ ಮಾಹಿತಿ ಚೈಲ್ಡ್‌ ಲೈನ್‌-1098 ದ.ಕ.ಜಿಲ್ಲೆಗೆ ಬಂದಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಮಕ್ಕಳನ್ನು ರಕ್ಷಿಸಿದೆ.

ಚೈಲ್ಡ್ ಲೈನ್‌ ನಿರ್ದೇಶಕ ರೆನ್ನಿ ಡಿಸೋಜಾ, ಕೇಂದ್ರ ಸಂಯೋಜಕ ದೀಕ್ಷಿತ್‌ ಅಚ್ರಪ್ಪಾಡಿ, ತಂಡದ ಸದಸ್ಯರಾದ ಅಸುಂತಾ ಡಿಸೋಜಾ, ಕವನ ಹಾಗೂ ಸುಪ್ರಿತ್‌ ಮತ್ತು ಕದ್ರಿ ಠಾಣಾ ಪೊಲೀಸ್‌ ಸಿಬ್ಬಂದಿ ಜಗನ್ನಾಥ್‌ ಜೊತೆ ಸ್ಥಳಕ್ಕೆ ಭೇಟಿ ನೀಡಿ ಬಾಲಕಿಯರನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಪುನರ್ವಸತಿ ಕಲ್ಪಿಸಲಾಗಿದೆ.

Latest Videos

undefined

ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದವರು ಲಾಕ್ ..

 ಬಾಲಕಿಯರು ರಾಜಸ್ಥಾನ ಮೂಲದವರಾಗಿದ್ದು ಲಾಲ್‌ಬಾಗ್‌ ಬಳಿಯ ಫುಟ್‌ಪಾತ್‌ನಲ್ಲಿ ವಾಸವಿರುವುದಾಗಿ ತಿಳಿದುಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ರಾತ್ರಿ ವೇಳೆ ಭಿಕ್ಷಾಟನೆಯಲ್ಲಿ ತೊಡಗಿರುವುದನ್ನು ಗಮನಿಸಿರುವ ಚೈಲ್ಡ್‌ ಲೈನ್‌-1098 ತಂಡ ಈ ಕುರಿತು ಈಗಾಗಲೇ ಸಂಬಂಧ ಇಲಾಖೆಗಳ ಜೊತೆ ಚರ್ಚಿಸಲಾಗಿದ್ದು ಸದ್ಯದ ದಿನಗಳಲ್ಲಿ ಇಲಾಖೆಗಳ ಜೊತೆಗೂಡಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವ ಎಲ್ಲ ಮಕ್ಕಳನ್ನು ರಕ್ಷಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

click me!