ಈ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಝೀರೋ

Kannadaprabha News   | Asianet News
Published : Feb 06, 2021, 03:27 PM IST
ಈ ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ಝೀರೋ

ಸಾರಾಂಶ

ವಿಶ್ವದಾದ್ಯಂತ ತನ್ನ ಅಟ್ಟಹಾಸ ಮೆರೆದಿದ್ದ ಕೊರೋನಾ ಮಹಾಮಾರಿ ಇದೀಗ ಕೊಂಚ ಮಟ್ಟಿಗೆ ತಣ್ಣಗಾಗುತ್ತಾ ಬಂದಿದೆ. ಇದೀಗ ಈ ಜಿಲ್ಲೆಯಲ್ಲಿ ಪ್ರಕರಣ ಸಂಖ್ಯೆ ಸೊನ್ನೆಯಾಗಿದೆ. 

ಶಿವಮೊಗ್ಗ (ಫೆ.06): ಲಾಕ್‌ಡೌನ್‌ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ. ನಿಯಮದ ಪ್ರಕಾರ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಹಸಿರು ವಲಯಕ್ಕೆ ಬಂದಿದೆ.

ಶುಕ್ರವಾರ ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಿಸಿದ ಕೋವಿಡ್‌-19 ಬುಲೆಟಿನ್‌ ಪ್ರಕಾರ ಜಿಲ್ಲೆಯಲ್ಲಿ ಕೇವಲ ಒಂದು ಕೊರೋನಾ ದೃಢಪಟ್ಟಿದೆ. ಈ ಪ್ರಕರಣ ಕೂಡ ಬೇರೆ ಜಿಲ್ಲೆಯಿಂದ ಬಂದ ವ್ಯಕ್ತಿಯದ್ದಾಗಿದೆ. ಇದರ ಹೊರತಾಗಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್‌ ಪ್ರಕರಣ ದಾಖಲಾಗಿಲ್ಲ.

ಕೊರೋನಾ ನಿಯಂತ್ರಣಕ್ಕೆ ಭಾರತದ ಸಿಂಪಲ್ ಟೆಕ್ನಿಕ್ಸ್: ಭೇಷ್ ಎಂದ WHO

ಲಾಕ್‌ಡೌನ್‌ ಆರಂಭಗೊಂಡ ಬಳಿಕ ಏಪ್ರಿಲ್‌ ತಿಂಗಳಲ್ಲಿ ದೆಹಲಿಯಿಂದ 9 ಮಂದಿ ತಬ್ಲಿಕಿಗಳಲ್ಲಿ ಕೊರೋನಾ ವೈರಾಣು ಪತ್ತೆಯಾಗಿದ್ದು, ಇಡೀ ಜಿಲ್ಲೆ ಕಂಗಾಲಾಗಿತ್ತು. 10 ತಿಂಗಳ ಬಳಿಕ ಪುನಃ ಹಸಿರು ವಲಯಕ್ಕೆ ಜಿಲ್ಲೆ ಬಂದಂತಾಗಿದೆ.

ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 39 ಸಕ್ರಿಯ ಕೊರೋನಾ ಪ್ರಕರಣವಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 12, ಖಾಸಗಿ ಆಸ್ಪತ್ರೆಯಲ್ಲಿ 4 ಮಂದಿ ಮತ್ತು 23 ಜನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

PREV
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ