ಮೂಡಿಗೆರೆಯ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಮೂಲಕ ಹಾದುಹೋಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಹತ್ತಾರು ಕಡೆ ತಡೆಗೋಡೆಗಳಿಲ್ಲದೇ ಅಪಘಾತಗಳಾಗುತ್ತಿವೆ. ಈ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಸಂಜಯ ಗೌಡ ಕೊಟ್ಟಿಗೆಹಾರ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು(ಆ.04): ಮೂಡಿಗೆರೆಯ ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟ್ ಮೂಲಕ ಹಾದುಹೋಗಿದ್ದು, ಚಾರ್ಮಾಡಿ ಘಾಟ್‌ನಲ್ಲಿ ಹತ್ತಾರು ಕಡೆ ತಡೆಗೋಡೆಗಳಿಲ್ಲದೇ ಅಪಘಾತಗಳಾಗುತ್ತಿವೆ. ಈ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಸಂಜಯ ಗೌಡ ಕೊಟ್ಟಿಗೆಹಾರ ಆಗ್ರಹಿಸಿದ್ದಾರೆ.
ಚಾರ್ಮಾಡಿ ಘಾಟ್‌ನಲ್ಲಿ ಮಳೆಗಾಲದಲ್ಲಿ ಮಂಜು ಮುಸುಕಿದ ವಾತಾವರಣವಿದೆ. ತಡೆಗೋಡೆಗಳಿಲ್ಲದೇ ವಾಹನಗಳು ಪ್ರಪಾತಕ್ಕೆ ಬೀಳುತ್ತಿವೆ. ಗುರುವಾರ ರಾತ್ರಿ ಲಾರಿಯೊಂದು ತಡೆಗೋಡೆ ಇಲ್ಲದೆ ಪ್ರಪಾತಕ್ಕೆ ಬಿದ್ದು, ಅದರಲ್ಲಿದ್ದವರು ಸಣ್ಣಪುಟ್ಟಗಾಯಗಳಿಂದ ಪಾರಾಗಿದ್ದರು. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಇದಕ್ಕೆ ತಡೆಗೋಡೆಗಳು ಇಲ್ಲದಿರುವುದೇ ಕಾರಣವಾಗಿದೆ ಎಂದರು.
ಮಲೆನಾಡಿನಲ್ಲಿ ಮಳೆಯಬ್ಬರ, ಭೂಕುಸಿತ
ತಡೆಗೋಡೆಗಳು ಇಲ್ಲದಿರುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ಇಬ್ಬದಿಯಲ್ಲಿ ಎಚ್ಚರಿಕೆ ಸೂಚನಾ ಪ್ರತಿಫಲಕಗಳು ಇಲ್ಲ. ಇದರಿಂದಾಗಿ ರಸ್ತೆ ಅಂಚಿನ ಅಂದಾಜಿಲ್ಲದೆ ವಾಹನಗಳು ಪ್ರಪಾತಗಳಿಗೆ ಬೀಳುತ್ತಿವೆ. ಚಾರ್ಮಾಡಿ ಘಾಟ್‌ನಲ್ಲಿ ಅಲ್ಲಲ್ಲಿ ಗುಂಡಿಗಳಾಗಿದ್ದು, ಶನಿವಾರ ಗುಂಡಿ ತಪ್ಪಿಸಲು ಹೋಗಿ ಬಸ್ಸು ಹಾಗೂ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಹೆದ್ದಾರಿ ಪ್ರಾಧಿಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ