ಗಣೇಶ ಹಬ್ಬಕ್ಕೆ ಚಂದಾ ವಸೂಲಿ ಮಾಡಿದ ಇಲಿ; ಚಿಕನ್ ಅಂಗಡಿ ಗಲ್ಲಾಪೆಟ್ಟಿಗೆಯಿಂದ ಹಣ ಕದ್ದೊಯ್ದು ಬಿಲದಲ್ಲಿಟ್ಟ ಮೂಷಿಕ!

Sathish Kumar KH   | Kannada Prabha
Published : Aug 11, 2026, 11:52 AM IST
Chikkamagaluru rat Stole money

ಸಾರಾಂಶ

ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದ ಚಿಕನ್ ಅಂಗಡಿಯೊಂದರಲ್ಲಿ, ಗಲ್ಲಾಪೆಟ್ಟಿಗೆಯಿಂದ ನಿರಂತರವಾಗಿ ಹಣ ಕಣ್ಮರೆಯಾಗುತ್ತಿತ್ತು. ಕೊನೆಗೆ ಅಂಗಡಿ ಮಾಲೀಕರು ಪರಿಶೀಲಿಸಿದಾಗ, ಇಲಿಯೊಂದು ನೋಟುಗಳನ್ನು ಕದ್ದು ತನ್ನ ಗೂಡಿನಲ್ಲಿ ಸಂಗ್ರಹಿಸಿಟ್ಟಿದ್ದ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು (ಆ.11): ಧಾನ್ಯ, ಕಾಗದ, ಬಟ್ಟೆ ಸೇರಿದಂತೆ ವಿವಿಧ ವಸ್ತುಗಳನ್ನು ಕದ್ದು ಗೂಡಿನಲ್ಲಿ ಇಟ್ಟುಕೊಳ್ಳುವ ಇಲಿ ಮಧ್ಯೆ, ಇಲ್ಲೊಂದು ಕಿಲಾಡಿ ಇಲಿ, ಗಲ್ಲಾಪೆಟ್ಟಿಯಲ್ಲಿ ಇದ್ದ ನೋಟುಗಳನ್ನೇ ಕದ್ದು ಗೂಡಿನಲ್ಲಿ ಇಟ್ಟುಕೊಂಡಿದ್ದ ಅಚ್ಚರಿ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ಪಟ್ಟಣದಲ್ಲಿ ಜಂ-ಜಂ ಚಿಕನ್ ಅಂಗಡಿಯಲ್ಲಿ ನಡೆದಿದೆ.

ಕಳೆದ 1 ವಾರದಿಂದ ಅಂಗಡಿ ಮಾಲೀಕ ಸಿದ್ದಿಕ್ ಅವರು ಗಲ್ಲಾಪೆಟ್ಟಿಗೆಯಲ್ಲಿ ಇಡುತ್ತಿದ್ದ 10, 20 ಹಾಗೂ 50 ರು. ಮುಖಬೆಲೆಯ ನೋಟುಗಳು ಒಂದೊಂದಾಗಿ ಕಾಣೆಯಾಗುತ್ತಿದ್ದವು. ಇದರ ಬಗ್ಗೆ ಮಾಲೀಕರಿಗ ಅನುಮಾನ ಮೂಡಿತ್ತು. ಆದರೆ, ಭಾನುವಾರ ರಾತ್ರಿ ಮಾಲೀಕನೇ ಗಲ್ಲಾಪೆಟ್ಟಿಗೆಯಲ್ಲಿ ಹಣವಿಟ್ಟು ಬಾಗಿಲು ಮುಚ್ಚಿಕೊಂಡು ಮನೆಗೆ ಹೋಗಿದ್ದರು. ಸೋಮವಾರ ಬೆಳಗ್ಗೆ ಆತ ಅಂಗಡಿ ತೆರೆದು ಗಲ್ಲಾಪೆಟ್ಟಿಗೆ ಗಮನಿಸಿದಾಗ ಹಣ ಮಾಯವಾಗಿತ್ತು. ಈ ವೇಳೆ ಪರಿಶೀಲಿಸಿದಾಗ ಇಲಿ ಓಡಾಡುತ್ತಿದ್ದ ಬಗ್ಗೆ ತಿಳಿದು ಬಂದಿದೆ. ಇಡೀ ಅಂಗಡಿಯನ್ನು ಹುಡುಕಾಟ ನಡೆಸಿದಾಗ ಅಂಗಡಿಯ ಹಿಂಭಾಗದಲ್ಲಿ ಇಲಿಯೊಂದು ನೋಟುಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ಒಂದು ವಾರದಲ್ಲಿ 190 ರೂ. ಕದ್ದೊಯ್ದ ಇಲಿ

ಇಲಿ, ಹಣವನ್ನೇ ತನ್ನ ಗೂಡಿನ ನಿರ್ಮಾಣ ಸಾಮಗ್ರಿಯನ್ನಾಗಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. 1 ವಾರದಲ್ಲಿ ಒಟ್ಟು 190 ರು. ಮೌಲ್ಯದ ವಿವಿಧ ನೋಟು ಪತ್ತೆಯಾಗಿವೆ.

ವಜ್ರದುಂಗುರ ಸೇರಿ ₹10 ಲಕ್ಷ ಮೌಲ್ಯದ ಆಭರಣ ಕದ್ದಿದ್ದ ಇಲಿ

ಇತ್ತೀಚಿಗೆ ತುಮಕೂರಿನಲ್ಲಿ ಚಿನ್ನದ ಆಭರಣಗಳ ಅಂಗಡಿಯಲ್ಲಿ ಇಲಿಯೊಂದು ಬರೋಬ್ಬರಿ 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿತ್ತು. ಆಭರಣ ಅಂಗಡಿಯಲ್ಲಿ ರಾತ್ರಿ ವೇಳೆ ಎಂಟ್ರಿ ಕೊಡ್ತಿದ್ದ ಇಲಿ ಒಂದು ವಜ್ರದ ಉಂಗುರ ಸೇರಿದಂತೆ 10 ಚಿನ್ನದ ಉಂಗುರಗಳು, 2 ಚಿನ್ನದ ಸರಗಳನ್ನು ಕದ್ದು ತನ್ನ ಗೂಡಿನ ಹತ್ತಿರ ಇಟ್ಟುಕೊಂಡಿತ್ತು. ಇದರಿಂದ ಆಭರಣ ಕಾಣದಾದಾಗ ಸಿಸಿಟಿವಿ ಚೆಕ್ ಮಾಡದ ನಂತರ ಇಲಿಯ ಕಳ್ಳಾಟ ಬಯಲಾಗಿತ್ತು. ಇದೀಗ ಕಾಫಿ ನಾಡಿನಲ್ಲಿ ಹಣದ ಮೇಲೆ ವ್ಯಾಮೋಹ ಬೆಳೆಸಿಕೊಂಡ ಕಿಲಾಡಿ ಇಲಿಯ ಕೈಚಳಕ ಬೆಳಕಿಗೆ ಬಂದಿದೆ.

PREV
Read more Articles on
click me!

Recommended Stories

Cauvery Water Dispute: ತಮಿಳುನಾಡಿನ ನೀರಿನ ದಾಹ ತೀರಿಸಿದ ಕಬಿನಿ; ಕೇವಲ 11 ದಿನಗಳಲ್ಲಿ ಹರಿಯಿತು 13 ಟಿಎಂಸಿ ನೀರು
ದೇಶದ ಅಡಕೆ GSTಯಲ್ಲಿ ಕರ್ನಾಟಕದ ಸಿಂಹಪಾಲು; ಶಿವಮೊಗ್ಗ ಸಂಸದ ರಾಘವೇಂದ್ರ ಪ್ರಶ್ನೆಗೆ ಕೇಂದ್ರದ ಮಾಹಿತಿ