ಚಿಕ್ಕಮಗಳೂರು: ಸುವರ್ಣ ನ್ಯೂಸ್‌ ಬಿಗ್ ಇಂಪ್ಯಾಕ್ಟ್, ವಿದೇಶದಲ್ಲಿ ಲಾಕ್ ಆಗಿದ್ದ ಯುವಕನ ರಕ್ಷಣೆ

By Girish Goudar  |  First Published Nov 5, 2023, 12:00 AM IST

ಕಾಂಬೋಡಿಯಾದ ಭಾರತೀಯ ರಾಯಭಾರಿ ಸಿಬ್ಬಂದಿಗಳಿಂದ ರಕ್ಷಣೆ, ಭಾರತೀಯ ರಾಯಭಾರಿ ಕಚೇರಿಯಲ್ಲಿ ರಕ್ಷಣೆಯಾಗಿರುವ ಯುವಕ ಅಶೋಕ್, ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಧನ್ಯವಾದ ತಿಳಿಸಿದ ಹೆತ್ತವರು. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.05):  ದುಡಿಮೆಗಾಗಿ ದೇಶ ಬಿಟ್ಟು ಹೋದ ಯುವಕ ವಿದೇಶದಲ್ಲಿ ಲಾಕ್ ಆಗಿದ್ದ, ವಿದೇಶದಲ್ಲಿರುವ ತಮ್ಮನ್ನು ಮಗನನ್ನು ಬದುಕಿಸುವಂತೆ ಹೆತ್ತವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಮುಂದೆ ಕಣ್ಣೀರು ಹಾಕಿದ್ದರು. ಮಲೆನಾಡಿನಿಂದ ವಿದೇಶದಲ್ಲಿ ದುಡಿಮೆಗಾಗಿ ತೆರಳಿ ಅಲ್ಲಿಯ ಪ್ರಜೆಗಳು ನೀಡುತ್ತಿರುವ ಹಿಂಸೆ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ  ವಿಸ್ತೃತ ವರದಿಯೂ ಪ್ರಸಾರವಾಯಿತು. ನಿರಂತರ ಸುದ್ದಿ ಪ್ರಸಾರದ ಬೆನ್ನಲ್ಲೆ ವಿದೇಶದಲ್ಲಿ ಲಾಕ್ ಆಗಿದ್ದ ಯುವಕನ ರಕ್ಷಣೆ ಮಾಡಲಾಗಿದೆ. ಕಾಂಬೋಡಿಯಾದ ಭಾರತೀಯ ರಾಯಭಾರಿ ಸಿಬ್ಬಂದಿಗಳಿಂದ ರಕ್ಷಣೆ ಮಾಡಲಾಗಿದ್ದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೆತ್ತವರು ಧನ್ಯವಾದ ತಿಳಿಸಿದ್ದಾರೆ. 

Tap to resize

Latest Videos

undefined

ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಿಗ್ ಇಂಪ್ಯಾಕ್ಟ್ : 

ಮೂರು ತಿಂಗಳ ಹಿಂದೆ ಕಾಂಬೋಡಿಯಾ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ತಾಲೂಕಿನ ಮಹಲ್ಗೋಡು ಗ್ರಾಮದ ಅಶೋಕ್ ವಂಚನೆ ಕಂಪನಿಯ ಕೆಲಸದ ಜಾಲಕ್ಕೆ ಸಿಲುಕಿದ್ದ.ವಂಚನೆಯ ಕಂಪನಿಯವರು ನೀಡುತ್ತಿದ್ದ ಟಾರ್ಗೆಟ್ ಪೂರ್ಣ ಮಾಡದ ಹಿನ್ನೆಲೆ ಅಶೋಕ್ ಗೆ ಚಿತ್ರಹಿಂಸೆ ನೀಡಿತ್ತು. ಅಶೋಕ್ ನನ್ನ ಬಂಧನದಲ್ಲಿ ಇರಿಸಿ 13 ಲಕ್ಷ ಹಣಕ್ಕಾಗಿ ಅಶೋಕ್ ಪೋಷಕರಿಗೆ ಬೇಡಿಕೆ ಹಾಕಿತ್ತು. ಆಶೋಕ್ ನನ್ನ ವಾಪಸ್ ಭಾರತಕ್ಕೆ ಕರೆತರುವಂತೆ ಆಶೋಕ್ ಕುಟುಂಬ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಗನ್ನು ವಾಪಸ್ಸು ಕರೆಯಿಸುವಂತೆ ಹೆತ್ತವರು ಮನವಿಯನ್ನು ಮಾಡಿದ್ದರು. ಕಾಂಬೋಡಿಯಾ ದೇಶದಲ್ಲಿ ವಂಚನೆಯ ಜಾಲಕ್ಕೆ ಸಿಲುಕಿ ನರಳಾಟ ಅನುಭಬಿಸುತ್ತಿದ್ದ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸುರೇಶ್ , ಪ್ರೇಮಾ ದಂಪತಿಗಳು ಮಗನ್ನು ಬದುಕಿಸುವಂತೆ ಕಣ್ಣೀರು ಇಟ್ಟಿದ್ದರು.ಈ ಕುರಿತು ನಿರಂತರವಾಗಿ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಭಾರತೀಯ ರಾಯಭಾರಿ ಕಚೇರಿಯ ಸಿಬ್ಬಂದಿಗಳು ಯುವಕನನ್ನ ರಕ್ಷಿಣೆ ಮಾಡಿದ್ದಾರೆ.  ಭಾರತಕ್ಕೆ ವಾಪಸ್ ಕರೆತರುವ ಪ್ರಕ್ರಿಯೆ ಆರಂಭವಾಗಿದೆ.

ಕಾಂಬೋಡಿಯಾದಲ್ಲಿ ಸಿಲುಕಿದ ಚಿಕ್ಕಮಗಳೂರಿನ ಯುವಕ: ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸಚಿವೆ ಕರಂದ್ಲಾಜೆ

ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಧನ್ಯವಾದ ತಿಳಿಸಿದ ಹೆತ್ತವರು 

ವಿದೇಶದಲ್ಲಿರುವ ಅಶೋಕ್ನ  ಸ್ಥಿತಿ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ  ವಿಸ್ತೃತ  ವರದಿಯೂ ಪ್ರಸಾರವಾಯಿತು. ವರದಿ ಬಂದ ಕೂಡಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಎನ್.ಆರ್.ಐ. ಫೋರಂ)ದ ಉಪಾಧ್ಯಕ್ಷೆ ಆರತಿ ಕೃಷ್ಣ ಸ್ಪಂದನೆ ನೀಡಿ, ಕಾಂಬೋಡಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದರು. ಇದರ ಬೆನ್ನಲ್ಲೆ ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಕಾಂಬೋಡಿಯಾದ ವಿಯೆಟ್ನಾಂ ಬಾರ್ಡರ್ ನಲ್ಲಿರುವ ಖಾಸಗಿ ಕಂಪನಿಯ ಕಚೇರಿಗೆ ಭೇಟಿ ನೀಡಿ ಅಶೋಕ್ ರಕ್ಷಣೆ ಮಾಡಿದ್ದಾರೆ.ಅಶೋಕ್ ಭಾರತೀಯ ರಾಯಭಾರಿ ಕಛೇರಿಯ ಸಿಬ್ಬಂದಿಗಳ ಜೊತೆಯಿದ್ದು ಇದೇ ತಿಂಗಳು 7 ರ ಬಳಿಕ ಭಾರತಕ್ಕೆ ಅಶೋಕ್ ಕರೆತರಲು ಸಿದ್ದತೆ ಮಾಡಲಾಗುತ್ತಿದೆ.ಈ ಬಗ್ಗೆ ಹೆತ್ತವರು ಸಂತಸ ಹೊರಹಾಕಿದ್ದು  ಏಷ್ಯಾನೆಟ್ ಸುವರ್ಣ ನ್ಯೂಸ್ ನ ಕಾರ್ಯಕ್ಕೆ  ಧನ್ಯವಾದ ತಿಳಿಸಿದ್ದಾರೆ. 

ಒಟ್ಟಾರೆಯಾಗಿ ಕೆಲಸದ ಆಸೆಗಾಗಿ ತೆರಳಿದ ಗ್ರಾಮೀಣ ಯುವಕ ವಂಚನೆ ಜಾಲಕ್ಕೆ ಬಲಿಯಾಗಿ ತೊಂದರೆಗೆ ಸಿಲುಕಿದ್ದ,  ಮೊದಲೇ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ  ಸುರೇಶ್ ಕುಟುಂಬಕ್ಕೆ ಮಗನ ಸ್ಥಿತಿ ದೊಡ್ಡ ಆಘಾತವನ್ನೇ ನೀಡಿತ್ತು. ವಂಚನೆಯ ಜಾಲದಲ್ಲಿ ಸಿಲುಕಿಕೊಂಡಿದ್ದ ಅಶೋಕನನ್ನು ಕರೆತರುವ  ನಿಟ್ಟಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ನಡೆಸಿದ ನಿರಂತರ ಅಭಿಯಾನ ಫಲ ನೀಡಿದೆ. ಯುವಕನ ರಕ್ಷಣೆಯೂ ಆಗಿದ್ದು ಶೀಘ್ರವೇ ಯುವಕ ಅಶೋಕ್  ಭಾರತಕ್ಕೆ ಮರಳಿ ಬರಲಿದ್ದು ಇದು ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್. 

click me!