20ಕ್ಕೂ ಹೆಚ್ಚು ಕಾಡಾನೆಗಳಿಂದ ಕಾಫಿ ತೋಟ ನಾಶ; ನನ್ನನ್ನೂ ಆನೆ ತುಳಿಯಲೆಂದು ತೋಟದಲ್ಲೇ ಕುಳಿತ ರೈತ

Published : Nov 26, 2026, 02:43 PM IST
Chikkamagaluru Coffee plant Elephant

ಸಾರಾಂಶ

ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಬೆಳೆ ನಾಶಪಡಿಸಿವೆ. ಕಣ್ಣೆದುರೇ ಬೆಳೆ ನಾಶವಾದ್ದರಿಂದ ರೈತ ಕಣ್ಣೀರು ಹಾಕಿದ್ದಾರೆ. ಕಾಡಾನೆಗಳನ್ನು ಕೂಡಲೇ ಸ್ಥಳಾಂತರಿಸಿ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರು (ನ.26): ಮೂಡಿಗೆರೆ ತಾಲೂಕಿನ ಕಾರ್ಬೈಲು ಗ್ರಾಮದಲ್ಲಿ 20ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ದಾಳಿ ನಡೆಸಿ ಕಾಫಿ, ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳನ್ನು ಸಂಪೂರ್ಣವಾಗಿ ನಾಶಪಡಿಸಿದೆ. ರಾತ್ರಿ ಸುಮಾರು 8 ಗಂಟೆಯ ವೇಳೆಗೆ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಭಾರಿ ಹಾನಿ ಉಂಟುಮಾಡಿದೆ.

ಕಷ್ಟಪಟ್ಟು ಬೆಳೆಸಿದ ಬೆಳೆಗಳು ಕಣ್ಣೆದುರೇ ನಾಶವಾಗಿದ್ದರಿಂದ ರೈತ ಪ್ರಹ್ಲಾದ್ ತೋಟದಲ್ಲೇ ಕುಳಿತು ಕಣ್ಣೀರು ಹಾಕಿದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಅವರು, "ಬೆಳೆ ಹೋದ ಮೇಲೆ ನಾನಿದ್ದು ಏನು ಪ್ರಯೋಜನ? ಆನೆಗಳಿಂದಲೇ ಜೀವ ಹೋಗಲಿ" ಎಂದು ಆಕ್ರೋಶ ಹಾಗೂ ಅಳಲು ತೋಡಿಕೊಂಡರು. ಈ ವೇಳೆ ರೈತನನ್ನು ಸಮಾಧಾನಪಡಿಸಿ ಮನವೊಲಿಸಲು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು.

ಆನೆಗಳ ಸಂಚಾರ ಮತ್ತು ಹಾವಳಿಯ ವಿವರ

ಆನೆಗಳ ಹಿಂಡು: ಕಾರ್ಬೈಲು ಸುತ್ತಮುತ್ತ ಸುಮಾರು 20 ಕಾಡಾನೆಗಳ ಸಂಚಾರವಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು, ಮೇಲಿನ ತೋಟದ ಭಾಗದಲ್ಲೂ ಮತ್ತೆ 15 ಆನೆಗಳು ಪ್ರತ್ಯಕ್ಷವಾಗಿವೆ.

ಬಾಧಿತ ಪ್ರದೇಶಗಳು: ಕಾರ್ಬೈಲು, ಮಾಕನಹಳ್ಳಿ ಮತ್ತು ಗಬ್ಬಳ್ಳಿಪುರ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿದೆ.

ಬೆಳೆ ನಷ್ಟ: ಕಾಫಿ, ಅಡಿಕೆ ಮತ್ತು ತೆಂಗಿನ ಮರಗಳು ಧ್ವಂಸಗೊಂಡಿವೆ.

ಗ್ರಾಮಸ್ಥರ ಆಗ್ರಹ ಮತ್ತು ಮುಂದಿನ ಕ್ರಮದ ನಿರೀಕ್ಷೆ

ನವೆಂಬರ್ 30ರಂದು ನಡೆಯುವ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಅಧಿಕಾರಿಗಳು ಮತ್ತು ಶಾಸಕರು ತಿಳಿಸಿದ್ದಾರೆ. ಆದರೆ ಸಭೆಯವರೆಗೆ ಕಾಯದೆ ತಕ್ಷಣವೇ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಹಾಗೂ ನಷ್ಟಕ್ಕೊಳಗಾದ ಬೆಳೆಗಳಿಗೆ ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮತ್ತು ರೈತರು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಆಪ್ತ ಮಹದೇವಪ್ಪ‌ ಮೇಲೆ ಸಿಟ್ಟು ಇನ್ನೂ ಕರಗಿಲ್ವಾ? ಜಮೀರ್ ಮಾತು ಕೇಳಿಯೂ ಕೇಳಿಸದ ರೀತಿ ನಟಿಸಿದ ಸಿದ್ದರಾಮಯ್ಯ!
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು: ಬಾಲಚಂದ್ರ ಜಾರಕಿಹೊಳಿ ಹೇಳಿಕೆಯ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ಸಚಿವ ಈಶ್ವರ್ ಖಂಡ್ರೆ!