ಉದ್ಘಾಟನೆಯಾದ ಒಂದೇ ವರ್ಷಕ್ಕೆ ಸೋರುತ್ತಿರುವ ಕಾಫಿನಾಡಿನ ಮೆಡಿಕಲ್ ಕಾಲೇಜ್: ತೀವ್ರ ಆಕ್ರೋಶ

By Govindaraj S  |  First Published Sep 11, 2024, 5:51 PM IST

ಉದ್ಘಾಟನೆಯಾದ ಒಂದೇ ವರ್ಷಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೆಡಿಕಲ್ ಕಾಲೇಜ್ ಮಳೆಯಿಂದ ಸೋರುತ್ತಿದೆ. ಬರೋಬ್ಬರಿ 450 ಕೋಟಿ ಪ್ರಾಜೆಕ್ಟ್‌ನ ಕಾಮಗಾರಿಯನ್ನು ಪ್ರಶ್ನೆ ಮಾಡುವ ಸ್ಥಿತಿ ಬಂದಿದೆ. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.11): ಉದ್ಘಾಟನೆಯಾದ ಒಂದೇ ವರ್ಷಕ್ಕೆ ಚಿಕ್ಕಮಗಳೂರು ಜಿಲ್ಲೆಯ ಮೆಡಿಕಲ್ ಕಾಲೇಜ್  ಮಳೆಯಿಂದ ಸೋರುತ್ತಿದೆ. ಬರೋಬ್ಬರಿ 450 ಕೋಟಿ ಪ್ರಾಜೆಕ್ಟ್‌ನ ಕಾಮಗಾರಿಯನ್ನು ಪ್ರಶ್ನೆ ಮಾಡುವ ಸ್ಥಿತಿ ಬಂದಿದೆ. ಕಾಫಿನಾಡಿನ ಜನರ ಬಹುದಿನಗಳ ಕನಸು ಜೊತೆಗೆ ಸಾವಿರಾರು ವಿದ್ಯಾರ್ಥಿಗಳು ಕನಸಿನ ಗುರಿ ಹೊತ್ತು ಪಾಠ ಕೇಳುವ ವಿದ್ಯಾ ದೇಗುಲದ ದುಸ್ಥಿತಿ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. 

Tap to resize

Latest Videos

undefined

ಬರೋಬ್ಬರಿ 450 ಕೋಟಿ ಪ್ರಾಜೆಕ್ಟ್: ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಮಳೆಯಿಂದಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಮೇಲ್ಚಾವಣಿ ಕುಸಿದು ಬಿದ್ದಿದೆ. ಬರೋಬ್ಬರಿ 450 ಕೋಟಿ ವೆಚ್ಚದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಂಕು ಸ್ಥಾಪನೆಗೊಂಡು ಕಳೆದ ಒಂದು ವರ್ಷದ ಹಿಂದೆ ಉದ್ಘಾಟನೆಗೊಂಡು ಇನ್ನೂ ಕೂಡ ಕಾಮಗಾರಿಗೆ ಮುಗಿದಿಲ್ಲ ಆದ್ರೆ ಮಳೆಗೆ ಮೆಡಿಕಲ್ ಕಾಲೇಜಿನ ಬಹುತೇಕ ಕೊಠಡಿಗಳು ಸೋರುತ್ತಿರುವುದು ಪತ್ತೆಯಾಗಿದೆ. 

ನಿಮಗೆ ಕೈ ಮುಗಿಯುತ್ತೇನೆ, ಪ್ಲೀಸ್‌, ಸಿಎಂ ಬದಲಾವಣೆ ವಿಚಾರ ಕೇಳ್ಬೇಡಿ: ಸಚಿವ ಸತೀಶ್‌ ಜಾರಕಿಹೊಳಿ

ಅದಕ್ಕೆ ಪ್ರಮುಖ ಸಾಕ್ಷಿ ಎನ್ನುವಂತೆ ಕುಸಿದು ಬಿದ್ದಿರುವ ಮೇಲ್ಚಾವಣಿ . ಹೌದು ಹೊರಗೆ ತಳುಕು ಒಳಗೆ ಹುಳುಕು ಎಂಬಂತೆ ಮಳೆಗೆ ತೇವಾಂಶಗೊಂಡು ಕುಸಿದು ಬಿದ್ದಿರುವ ಮೇಲ್ಚಾವಣಿಯ ಅವಶೇಷಗಳೆ ಸಾಕ್ಷಿಯಾಗಿದ್ದು  ಬಹುಕೋಟಿ ವೆಚ್ಚದ ಕಾಮಗಾರಿಯನ್ನೇ ಪ್ರಶ್ನಿಸುವಂತೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಮಾಧ್ಯಮಗಳನ್ನು ಒಳಗೆ ಬಿಡಲು ನಿರಾಕರಿಸಲು ಆಡಳಿತ ಮಂಡಳಿ ಕಳಪೆ ಕಾಮಗಾರಿ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆಯಾ ಅನ್ನೋ ಅನುಮಾನಗಳು ಮೂಡಿಸಿದೆ.

19 ಕ್ಕೂ ಹೆಚ್ಚು ಕಂಪ್ಯೂಟರ್ ಗಳಿಗೆ ಹಾನಿ?: ಇನ್ನು ಮೆಡಿಕಲ್ ಕಾಲೇಜಿನ ಕರ್ಮಕಾಂಡ ಈ ಮೂಲಕ ಬಟಾ ಬಯಲಾಗಿದ್ದು, ಆತಂಕದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಮಳೆಯಿಂದಾಗಿ ಕಾಲೇಜಿನ ಒಳಗೆ ನೀರು ಸೋರುತ್ತಿದ್ದು ಇದರ ಪರಿಣಾಮ ಕಂಪ್ಯೂಟರ್ ಸೇರಿದಂತೆ ಹಲವು ಪ್ರಮುಖ ಉಪಕರಣಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಮಳೆಗೆ ನೆನೆದು 19ಕ್ಕೂ ಹೆಚ್ಚು ಕಂಪ್ಯೂಟರ್ ಗಳಿಗೆ ಹಾನಿಯಾಗಿದ್ದು ಸಂಕಷ್ಟದಲ್ಲೇ ವಿದ್ಯಾರ್ಥಿಗಳು ಏನನ್ನು ಹೇಳಿಕೊಳ್ಳಲು ಆಗದೆ ಬಿಡಲು ಆಗದೆ ಪರಿತಪಿಸುವ ಹಾಗೆ ಆಗಿದೆ. 

25 ದಿನ ಪೂರೈಸಿದ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ: ಎಲ್ಲರ ಕಣ್ಣು ಗೋಲ್ಡನ್ ಸ್ಟಾರ್ ಜಾಕೆಟ್ ಮೇಲೆ....

ನೂರಾರು ಸಮಸ್ಯೆ ಆಗರದಲ್ಲಿ ಮೆಡಿಕಲ್ ಕಾಲೇಜು ಸಿಲ್ಕಿಕೊಂಡಿದ್ದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಬಹುಕೋಟಿ ವೆಚ್ಚದ ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜು ಕಳಪೆ ಕಾಮಗಾರಿ ಎಂಬುದು ಬಟಾ ಬಯಲಾಗಿದ್ದು, ಎಲ್ಲವನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ. ಕಾಮಗಾರಿ ಕುರಿತು ಸದ್ಯ ರಾಜ್ಯ ಸರ್ಕಾರ ಹೊಣೆ ಹೊತ್ತಿದ್ದು, ಸತ್ಯ ಸತ್ಯತೆ ಬಯಲಿಗೆ ಎಳೆಯಬೇಕಿದೆ.

click me!