ಲಿಫ್ಟ್‌ನಲ್ಲಿ ಭಾರದ ವಸ್ತು ಸಾಗಣೆ ವೇಳೆ ಕೇಬಲ್ ತುಂಡಾಗಿ ಯುವಕ ಸಾವು!

By Sathish Kumar KH  |  First Published Sep 11, 2024, 5:24 PM IST

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಲಿಫ್ಟ್‌ನಲ್ಲಿ ವಸ್ತುಗಳನ್ನು ಸಾಗಿಸುವಾಗ ಕೇಬಲ್ ತುಂಡಾಗಿ ಯುವಕ ದಾರುಣವಾಗಿ ಸಾವನ್ನಪ್ಪಿದ್ದಾರೆ. ಲಿಫ್ಟ್ ಕುಸಿದಾಗ ಯುವಕ ಲಿಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿ ಸಾವನ್ನಪ್ಪಿದ್ದಾರೆ.


ಉತ್ತರ ಕನ್ನಡ (ಸೆ11): ರಾಜ್ಯದ ಕರಾವಳಿ ಜಿಲ್ಲೆ ಉತ್ತರ ಕನ್ನಡದ ಕಾರವಾರ ನಗರದಲ್ಲಿ ಲಿಫ್ಟ್‌ನಲ್ಲಿ ಭಾರವಾದ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದಾಗ ಕೇಬಲ್ ತುಂಡಾಗಿ ಬಿದ್ದು, ಯುವಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಸುಭಾಷ್ ರಸ್ತೆಯ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡದಲ್ಲಿ ದುರಂತ ಸಂಭವಿಸಿದೆ. ಲಿಫ್ಟ್‌ನಲ್ಲಿ ಸಾಗುತ್ತಿದ್ದ ವೇಳೆ ಕೇಬಲ್ ತುಂಡಾಗಿ ಬಿದ್ದು ಯುವಕ ಮೃತಪಟ್ಟಿದ್ದಾರೆ. ಮೃತ ಯುವಕನನ್ನು ಗೋಪಾಲ ಸಿಂಗ್ (25) ಎಂದು ಗುರುತಿಸಲಾಗಿದೆ. ಈತ ಭಾರವಾದ ವಸ್ತುಗಳನ್ನು ಲಿಫ್ಟ್‌ನಲ್ಲಿ ಸಾಗಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಲಿಫ್ಟ್‌ನ ಕೇಬಲ್ ತುಂಡಾದ ಪರಿಣಾಮ ಏಕಾಏಕಿ ಲಿಫ್ಟ್ ಕುಸಿದಿದೆ. ಕೂಡಲೇ ಆಯತಪ್ಪಿ ಲಿಪ್ಟ್ ಹಾಗೂ ಕಟ್ಟದ ಗೋಡೆಯ ಮಧ್ಯದಲ್ಲಿ ಸಿಲುಕಿ ಸ್ಥಳದಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.

Tap to resize

Latest Videos

Breaking: ವರುಣ್ ಆರಾಧ್ಯನಿಂದ ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ; ದೂರು ದಾಖಲು

ಇನ್ನು ಮೃತ ಯುವಕ ಗೋಪಾಲ ಸಿಂಗ್ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡ ಮಾಲಕರ ಸಂಬಂಧಿ ಆಗಿದ್ದಾನೆ. ಇದೇ ಕಟ್ಟಡದ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದನು. ಇಂದು ಲಿಫ್ಟ್‌ನಲ್ಲಿ ಸಾಮಗ್ರಿಗಳನ್ನು ಕೊಂಡೊಯ್ಯುವ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಕುಮಟಾ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ, ಘಟನೆಗೆ ಸಂಬಂಧಿಸಿದಂತೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!