Bengaluru: ಮಿಲಿಟರಿ ಕ್ಯಾಂಪ್ ಮೇಲೆ ಆತಂಕ ಸೃಷ್ಟಿಸಿದ ಡ್ರೋಣ್ ಹಾರಾಟ

Published : Nov 21, 2022, 11:45 AM IST
Bengaluru: ಮಿಲಿಟರಿ ಕ್ಯಾಂಪ್ ಮೇಲೆ ಆತಂಕ ಸೃಷ್ಟಿಸಿದ ಡ್ರೋಣ್ ಹಾರಾಟ

ಸಾರಾಂಶ

ಮಂಗಳೂರಿನಲ್ಲಿ ಉಗ್ರನ ಸಂಚಿನಿಂದ ಆಟೊ ಸ್ಪೋಟಗೊಂಡ ಬೆನ್ನಲ್ಲೆ ಮತ್ತೊಂದು ಆತಂಕಕಾರಿ ಸುದ್ದಿ ಹೊರ ಬಿದ್ದಿದೆ. ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ಬಳಿ ಅರ್ಧಗಂಟೆ ಹಾರಾಡಿದ ಡ್ರೋಣ್ ಆತಂಕಕಾರಿ ಸಂದೇಶವನ್ನ ರವಾನಿಸಿದೆ.

ಬೆಂಗಳೂರು (ನ.21): ಮಂಗಳೂರಿನಲ್ಲಿ ಉಗ್ರನ ಸಂಚಿನಿಂದ ಆಟೊ ಸ್ಪೋಟಗೊಂಡ ಬೆನ್ನಲ್ಲೆ ಮತ್ತೊಂದು ಆತಂಕಕಾರಿ ಸುದ್ದಿ ಹೊರ ಬಿದ್ದಿದೆ. ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ಬಳಿ ಅರ್ಧಗಂಟೆ ಹಾರಾಡಿದ ಡ್ರೋಣ್ ಆತಂಕಕಾರಿ ಸಂದೇಶವನ್ನ ರವಾನಿಸಿದೆ. ಅಷ್ಟಕ್ಕೂ ಏನಿದು ಘಟನೆ ಅಂತೀರಾ ಬೆಂಗಳೂರಿನ ಚಿನ್ನಪ್ಪಗಾರ್ಡನ್‌ನ ಪ್ಯಾರಾ ಮಿಲಿಟರಿಗೆ ಸಂಬಂಧಿಸಿದ ಕಾಂಪೌಂಡ್ ಒಳಗೆ ಡ್ರೋಣ್ ಹಾರಾಡಿದೆ. ಕಳೆದ 9 ತಾರೀಖಿನಂದು ಸಂಜೆ  6.30 ರಿಂದ 7 ಗಂಟೆ ಅವಧಿಯಲ್ಲಿ ಅಪರಿಚಿತರು ಡ್ರೋನ್ ಹಾರಿಸಿದ್ದಾರೆ. ಈ ವೇಳೆ ಗಸ್ತಿನಲ್ಲಿದ್ದ ಮಿಲಿಟರಿ ಸಿಬ್ಬಂಧಿ ಇದನ್ನ ಗಮನಿಸಿ ಹಿರಿಯ ಕಮಾಂಡರ್ ಗಳ ಗಮನಕ್ಕೆ ತಂದಿದ್ದಾರೆ. 

ಕೂಡಲೇ ಎಚ್ಚೆತ್ತ ಜೆಸಿ ನಗರದ ಚಿನ್ನಪ್ಪ ಗಾರ್ಡನ್ ನಲ್ಲಿರುವ INF BN(TA) PARA ಮಿಲಿಟರಿ ರೆಜಿಮೆಂಟ್ ಕಮಾಂಡರ್‌ಗಳು ಜೆಸಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನೂ ಈ ಡ್ರೋಣ್ ಹಾರಾಟ ಆತಂಕ ಸೃಷ್ಟಿಸಿದ್ದರ ಬೆನ್ನಲ್ಲೆ ಮಂಗಳೂರಿನಲ್ಲಿ ಆಟೋ ಬಾಂಬ್ ಬ್ಲಾಸ್ಟ್ ಆಗಿದೆ. ಹೀಗಾಗಿ ಬೆಂಗಳೂರಿನ ಜೆಸಿನಗರ ಪೊಲೀಸರು ದೂರು ದಾಖಲಿಸಿಕೊಂಡು ಡ್ರೋಣ್ ಹಾರಾಟದ ಬೆನ್ನು ಬಿದ್ದು ಅಪರಿಚಿತರು ಯಾವ ಉದ್ದೇಶಕ್ಕೆ ಡ್ರೋಣ್ ಹಾರಾಟ ನಡೆಸಿದ್ದಾರೆ ಎಂಬು ಕುತೂಹಲಕಾರಿ ಮಾಹಿತಿಯನ್ನ ಪತ್ತೆ ಮಾಡಲು ಮುಂದಾಗಿದ್ದಾರೆ.

ಗಡಿವಿವಾದ: ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸ‌ಭೆ!

8 ಗಂಟೆ ನಿರಂತರ ಹಾರಾಡುವ ಡ್ರೋಣ್‌: 8ರಿಂದ 10 ಗಂಟೆ ನಿರಂತರವಾಗಿ ಹಾರಾಟ ನಡೆಸುವ ಮಂಗಳೂರಿನ ಆಂಗುಲರ್‌ ಕಂಪನಿಯ ‘ಏರ್‌ಸೈಟ್‌-1’ ಡ್ರೋಣ್‌ಗಳು ದೇಶದ ಗಡಿ ಕಾಯುವ ಸೈನಿಕರ ಬಳಕೆಗೆ ಉಪಯೋಗವಾಗುತ್ತಿವೆ. ಸಾಮಾನ್ಯವಾಗಿ ಬ್ಯಾಟರಿ ಮೂಲಕ ಹಾರಾಟ ನಡೆಸುವ ಡ್ರೋಣ್‌ಗಳು ಕೆಲ ನಿಮಿಷ ಅಥವಾ ಗಂಟೆಯ ಬಳಿಕ ಪುನಃ ಚಾಜ್‌ರ್‍ಗಾಗಿ ಭೂಮಿಗಿಳಿಯಬೇಕು. ಆದರೆ ಈ ಕಂಪನಿ ತಯಾರಿಸಿದ ಡ್ರೋನ್‌ಗಳು 230 ವೋಲ್ಟ್‌ ವಿದ್ಯುತ್‌ ಬಳಸಿಕೊಂಡು ಅಥವಾ ಜನರೇಟರ್‌ ಸಹಾಯದಿಂದಲೂ ಹಾರಾಟ ನಡೆಸಲಿವೆ. 

ಈ ಡ್ರೋಣ್‌ ಬೆಲೆ 30 ಲಕ್ಷಯಾಗಿದ್ದು, ಮಾರುಕಟ್ಟೆ ಪಾಲುದಾರರ ಮೂಲಕ ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 100 ಮೀಟರ್‌ ಎತ್ತರದವರೆಗೂ ಈ ಡ್ರೋಣ್‌ಗಳು ಹಾರಾಟ ನಡೆಸಲಿದ್ದು, ಗಡಿಯಲ್ಲಿ ಚಲನ ವಲನಗಳನ್ನು ವೀಕ್ಷಿಸಲು ಸಹಕಾರಿಯಾಗಿವೆ. ಎತ್ತರಕ್ಕೆ ಹಾರುತ್ತಿದ್ದಂತೆ ಸ್ವಯಂಚಾಲಿತವಾಗಿ ವೈರ್‌ ಬಿಚ್ಚಿಕೊಳ್ಳುವುದು ಹಾಗೂ ಸುತ್ತಿಕೊಳ್ಳುವುದು ವಿಶೇಷವಾಗಿದೆ. ಗಾತ್ರದಲ್ಲಿ ಸಾಮಾನ್ಯ ಡ್ರೋಣ್‌ಗಳಿಗಿಂತ ಹೆಚ್ಚೇ ಇರುವ ಏರೋಸೈಟ್‌-1 ಇದರಿಂದಾಗಿಯೇ ಗಮನ ಸೆಳೆಯುತ್ತಿದೆ.

ಮೋದಿ ಸಲಹೆಯಂತೆ ದಲಿತ ಮೀಸಲು ಏರಿಕೆ: ಸಿಎಂ ಬೊಮ್ಮಾಯಿ

ಮಾಹಿತಿ ಆ್ಯಪ್‌ ಬಗ್ಗೆ ಕುತೂಹಲ: ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಮನೆಯಲ್ಲೇ ಕುಳಿತು ಮೊಬೈಲ್‌ ಮೂಲಕ ಯಾವ ರೀತಿ ಆದಾಯ ಗಳಿಸಬಹುದು, ಸಾಮಾಜಿಕ ಜಾಲತಾಣಗಳಿಂದ ಹೇಗೆ ಹಣ ಗಳಿಸಬಹುದು, ಹತ್ತಿರದಲ್ಲಿ ಯಾವ ಒಳ್ಳೆಯ ಶಾಲೆ ಇದೆ, ಅದರಲ್ಲಿರುವ ಸೌಲಭ್ಯಗಳೇನು ಮತ್ತಿತರ ಮಾಹಿತಿಗಳನ್ನೂ ನೀಡುವ ಆ್ಯಪ್‌ಗಳ ಬಗ್ಗೆಯೂ ಜನರು ಮಾಹಿತಿ ಕೇಳುತ್ತಿದ್ದುದು ಕಂಡುಬಂತು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!