Kodagu: ಗ್ರಾಮ-ಗದ್ದೆಗಳಿಗೆ ನುಗ್ಗಿದ ಕಾಡಾನೆ ಹಿಂಡು: ಭತ್ತದ ಬೆಳೆ ನಷ್ಟ

Published : Nov 21, 2022, 12:11 PM IST
Kodagu: ಗ್ರಾಮ-ಗದ್ದೆಗಳಿಗೆ ನುಗ್ಗಿದ ಕಾಡಾನೆ ಹಿಂಡು: ಭತ್ತದ ಬೆಳೆ ನಷ್ಟ

ಸಾರಾಂಶ

ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೋಮವಾರ ಕೂಡ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಕರಿಬಿಳಹದಲ್ಲಿ ಕಾಡಾನೆಗಳು ದಾಂಧಲೆ ನಡೆಸಿವೆ. 

ಕೊಡಗು (ನ.21): ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸೋಮವಾರ ಕೂಡ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಕರಿಬಿಳಹದಲ್ಲಿ ಕಾಡಾನೆಗಳು ದಾಂಧಲೆ ನಡೆಸಿವೆ. ಕಾಡಿನ ಒಂದು ಭಾಗದಿಂದ ಗ್ರಾಮಕ್ಕೆ ಬಂದ ಆರು ಆನೆಗಳಿದ್ದ ಹಿಂಡು ಗ್ರಾಮವನ್ನು ಹಾದು ಭತ್ತದ ಗದ್ದೆಗಳಿಗೆ ದಾಳಿ ಮಾಡಿದೆ. ಇದರಿಂದ ಸುನಿಲ್ ಎಂಬುವರ ಇನ್ನೇನು ಕಟಾವಿಗೆ ಬರಬೇಕಾಗಿದ್ದ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ. 

ಸಾಕಷ್ಟು ಭತ್ತದ ಬೆಳೆಯನ್ನು ತಿಂದಿರುವ ಆನೆಗಳ ಹಿಂಡು, ಇಡೀ ಗದ್ದೆಯಲ್ಲಿ ಮನಬಂದಂತೆ ಓಡಾಡಿವೆ. ಇದರಿಂದ ಆರು ತಿಂಗಳಿಂದ ಕಷ್ಟಪಟ್ಟು ಬೆಳೆದಿದ್ದ ಬೆಳೆ ನಷ್ಟವಾಗಿದೆ. ಆನೆಗಳ ಹಾವಳಿಗೆ ಬೇಸತ್ತಿರುವ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಗ್ರಾಮಕ್ಕೆ ಆನೆಗಳು ನುಗ್ಗಿತ್ತಿರುವುದು ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬೆಳಿಗ್ಗೆ ಆನೆಗಳನ್ನು ಕಾಡಿಗೆ ಓಡಿಸಿದರೆ, ಸಂಜೆ ಹೊತ್ತಿಗೆ ಮತ್ತೆ ತಿರುಗಿ ಗ್ರಾಮದ ಕಡೆಗೆ ಬರುತ್ತಿರುವುದು ಜನರನ್ನು ಚಿಂತೆಗೀಡು ಮಾಡಿದೆ. 

ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಭುಗಿಲೆದ್ದ ಜನರ ಆಕ್ರೋಶ

ಬೇರಂಬಾಡಿಯಲ್ಲಿ ಬೆಳೆ ಹಾನಿ: ಬಾಳೆ ಫಸಲಿನ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ, ನಾಶಪಡಿಸಿರುವ ಘಟನೆ ತಾಲೂಕಿನ ಬೇರಂಬಾಡಿ ಗ್ರಾಮದ ಜಮೀನಿನಲ್ಲಿ ನಡೆದಿದೆ. ಬೇರಂಬಾಡಿ ಗ್ರಾಮದ ವಿಜಯಲಕ್ಷ್ಮೀಗೆ ಸೇರಿದ ಜಮೀನಲ್ಲಿ ಒಂದು ಎಕರೆಯಲ್ಲಿ ಬೆಳೆದಿದ್ದ ಬಾಳೆ ಫಸಲಿನ ಮೇಲೆ ಕಾಡಾನೆಗಳ ಹಿಂಡು ದಾಳಿ ನಡೆಸಿ ನಾಶಪಡಿಸಿದೆ. ಕಾಡಾನೆ ದಾಳಿಯಿಂದ ರೈತರಿಗೆ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ನಷ್ಟಉಂಟಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಮಹಿಳೆ ವಿಜಯಲಕ್ಷಿತ್ರ್ಮೕ ಬೇಸರ ವ್ಯಕ್ತಪಡಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ: ಬಾಳೆಗೊನೆ ಕತ್ತರಿಸಿ ಮಾರಾಟ ಮಾಡುವ ಹಂತಕ್ಕೆ ಬಂದ ಸಮಯದಲ್ಲಿ ಕಾಡಾನೆಗಳ ದಾಳಿಗೆ ಫಸಲು ನಾಶಪಡಿಸಿವೆ. ಅರಣ್ಯ ಇಲಾಖೆ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕಡಿವಾಣಕ್ಕೆ ಒತ್ತಾಯ: ಬೇರಂಬಾಡಿ ಹಲವು ಗ್ರಾಮದ ರೈತರ ಜಮೀನು ಕಾಡಂಚಿನಲ್ಲಿರುವ ಹಿನ್ನೆಲೆ ಆನೆ ಸೇರಿದಂತೆ ಇತರ ಹಲವು ಕಾಡು ಪ್ರಾಣಿಗಳು ರೈತರ ಜಮೀನಿಗೆ ಲಗ್ಗೆಯಿಟ್ಟು ಫಸಲು ನಾಶಪಡಿಸುತ್ತಿದೆ. 

ಆನೆಗೂ ಹೆದರದೇ, ರಿವರ್ಸ್ ಡ್ರೈವ್ ಮಾಡಿದ ಚಾಲಕ ಧೈರ್ಯಕ್ಕೆ ಭೇಷ್ ಎನ್ನಲೇ ಬೇಕು!

ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ರಾತ್ರಿ ಗಸ್ತು ತಿರುಗುತ್ತಿಲ್ಲ ಎಂದು ರೈತರು ದೂರಿದ್ದಾರೆ.  ಈ ಕಾರಣದಿಂದ ಎಲ್ಲೆಂದರಲ್ಲಿ ಆನೆಗಳು ನುಗ್ಗುತ್ತಿವೆ. ಕೆಲವೆಡೆ ಆನೆ ಕಂದಗಳು ಮುಚ್ಚಿ ಹೋಗಿದೆ. ಈ ಮೂಲಕ ಆನೆಗಳು ಸಲೀಸಾಗಿ ಅರಣ್ಯ ದಾಟಿ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಕಾಡು ಪ್ರಾಣಿಗಳು ಅರಣ್ಯದಿಂದ ಹೊರಗೆ ಬಾರದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

PREV
Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
4,808 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ